ಚೆನ್ನೈ (ತಮಿಳುನಾಡು): ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲೇ ಸನ್ ರೈಸರ್ಸ್ ಹೈದರಾಬಾದ್ ಸೋಲುಕಂಡಿದೆ. ನಿನ್ನೆಯ ಪಂದ್ಯದಿಂದ ಹೊರಗುಳಿದಿದ್ದ ನ್ಯೂಜಿಲ್ಯಾಂಡ್ ಕ್ಯಾಪ್ಟನ್ ಹಾಗೂ ಹೈದರಾಬಾದ್ ತಂಡದ ಆಟಗಾರ ಕೇನ್ ವಿಲಿಯಮ್ಸನ್ ಬಗ್ಗೆ ಎಸ್‌ಆರ್‌ಹೆಚ್ ಕೋಚ್ ಟ್ರೆವರ್ ಬೇಲಿಸ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಮ್ಯಾಚ್ ಫಿಟ್‌ನೆಸ್ ಪಡೆಯಲು ವಿಲಿಯಮ್ಸನ್ಗೆ ಇನ್ನೂ ಸ್ವಲ್ಪ ಸಮಯ ಬೇಕು. ಮೊದಲಿನಂತೆ ಇದ್ದಿದ್ದರೆ ಜಾನಿ ಬೈರ್‌ಸ್ಟೋವ್ ಬದಲಿಗೆ ವಿಲಿಯಮ್ಸನ್ ಆಡುತ್ತಿದ್ದರು. ಆದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಭಾರತದಲ್ಲಿ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಜಾನಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ವಿಲಿಯಮ್ಸನ್ ಪ್ಲೇಯಿಂಗ್ -11ನಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ನಿನ್ನೆ ಮ್ಯಾಚ್ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಬೇಲಿಸ್ ಹೇಳಿದರು.
ಇದನ್ನೂ ಓದಿ: IPL-2021: ಸನ್ರೈಸರ್ಸ್ ಮೇಲೆ ಸವಾರಿ ಮಾಡಿದ ನೈಟ್ ರೈಡರ್ಸ್
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್, ನಿತೀಶ್ ರಾಣಾ ಅವರ 80 ಹಾಗೂ ರಾಹುಲ್ ತ್ರಿಪಾಠಿ ಅವರ 53 ರನ್ಗಳ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ, ಎಸ್‌ಆರ್‌ಹೆಚ್ ವಿರುದ್ಧ 10 ರನ್ಗಳಿಂದ ಗೆಲುವು ಸಾಧಿಸಿತ್ತು.
-
This is Injustice , underutilization & contempt. It is heartbreaking to see someone like him not playing!What a Captain!What a Player! Every Year has a same story better is to let him play for new team or let him practise for WTC afterall He is a National Captain#KaneWilliamson
— Pranjal Chaurasia (@PranjalChaura18) April 11, 2021 " class="align-text-top noRightClick twitterSection" data="
">This is Injustice , underutilization & contempt. It is heartbreaking to see someone like him not playing!What a Captain!What a Player! Every Year has a same story better is to let him play for new team or let him practise for WTC afterall He is a National Captain#KaneWilliamson
— Pranjal Chaurasia (@PranjalChaura18) April 11, 2021This is Injustice , underutilization & contempt. It is heartbreaking to see someone like him not playing!What a Captain!What a Player! Every Year has a same story better is to let him play for new team or let him practise for WTC afterall He is a National Captain#KaneWilliamson
— Pranjal Chaurasia (@PranjalChaura18) April 11, 2021
ಎಸ್‌ಆರ್‌ಹೆಚ್ ತಂಡದಲ್ಲಿ ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್, ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ - ಈ ನಾಲ್ಕು ವಿದೇಶಿ ಆಟಗಾರರಿದ್ದಾರೆ. ವಿಲಿಯಮ್ಸನ್ರನ್ನು ಪ್ಲೇಯಿಂಗ್ -11ನಿಂದ ಹೊರಗಿಟ್ಟಿರುವುದಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ, ನಿರಾಶೆ ವ್ಯಕ್ತಪಡಿಸಿದ್ದಾರೆ.
-
Unfair with Kane Williamson keeping him on bench he is world class player.
— Sunil (@Sunildreamguy) April 11, 2021 " class="align-text-top noRightClick twitterSection" data="
">Unfair with Kane Williamson keeping him on bench he is world class player.
— Sunil (@Sunildreamguy) April 11, 2021Unfair with Kane Williamson keeping him on bench he is world class player.
— Sunil (@Sunildreamguy) April 11, 2021
ಒಬ್ಬ ವರ್ಲ್ಡ್ ಪ್ಲೇಯರ್ನ ಬೆಂಚ್ ಕಾಯಿಸುವುದು ಸರಿಯಿಲ್ಲ. ಇಂತಹ ಉತ್ತಮ ಆಟಗಾರ ಆಡದೇ ಇರುವುದನ್ನು ನೋಡಲು ದುಃಖವೆನಿಸುತ್ತದೆ, ಇದು ಅನ್ಯಾಯ ಎಂದು ಫ್ಯಾನ್ಸ್ ಟ್ವೀಟ್ ಮಾಡಿದ್ದಾರೆ.