ಮುಂಬೈ : ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನ ಹರಾಜು ಪ್ರಕ್ರಿಯೆ ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯಲಿದ್ದು, ಅಂತಿಮವಾಗಿ 292 ಆಟಗಾರರ ಪಟ್ಟಿ ತಯಾರಾಗಿದೆ.
ಆರಂಭದಲ್ಲಿ 1,114 ಕ್ರಿಕೆಟಿಗರು ಹರಾಜಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಎಂಟು ಫ್ರಾಂಚೈಸಿಗಳು ತಮ್ಮ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಫೆಬ್ರವರಿ 29 ರಂದು ಚೆನ್ನೈನಲ್ಲಿ 292 ಆಟಗಾರರ ಹರಾಜು ಪ್ರಕ್ರಿಯೆ ನಡೆದಯಲಿದೆ.
ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ 2021 ಆಟಗಾರರ ಹರಾಜಿನಲ್ಲಿ 164 ಭಾರತೀಯ ಆಟಗಾರರು, 125 ವಿದೇಶಿ ಆಟಗಾರರು, ಅಸೋಸಿಯೇಟ್ ರಾಷ್ಟ್ರಗಳ 3 ಆಟಗಾರರಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ.
ಓದಿ : IPL ಹರಾಜು: ತಂಡಗಳ ಬಳಿಯಿರುವ ಹಣವೆಷ್ಟು? ಖರೀದಿಸಬೇಕಾದ ಆಟಗಾರರ ವಿವರ ಇಲ್ಲಿದೆ..
11 ಆಟಗಾರರು ತಮ್ಮ ಮೂಲ ಬೆಲೆ 2 ಕೋಟಿ ರೂ. ಘೋಷಣೆ ಮಾಡಿಕೊಂಡಿದ್ದಾರೆ. ಹರ್ಭಜನ್ ಸಿಂಗ್ ಮತ್ತು ಕೇದಾರ್ ಜಾಧವ್, ಗ್ಲೆನ್ ಮ್ಯಾಕ್ಸ್ವೆಲ್, ಜೆಸನ್ ರಾಯ್, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಮೊಯೀನ್ ಅಲಿ, ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಪ್ಲಂಕೆಟ್, ಮಾರ್ಕ್ ವುಡ್.