ETV Bharat / sports

ಹರ್ಷಲ್ ಪಟೇಲ್​ಗೆ 5 ವಿಕೆಟ್​​​... ಬೆಂಗಳೂರು ಗೆಲುವಿಗೆ 160ರನ್​ ಗುರಿ ನೀಡಿದ ಮುಂಬೈ​

ಐಪಿಎಲ್​ ಉದ್ಘಾಟನಾ ಪಂದ್ಯದಲ್ಲಿ ಮಿಂಚು ಹರಿಸಿರುವ ಹರ್ಷಲ್​ ಪಟೇಲ್​ ಪ್ರಮುಖ ಐದು ವಿಕೆಟ್​ ಪಡೆದುಕೊಂಡಿದ್ದು, ಈ ಮೂಲಕ ಮುಂಬೈ ಇಂಡಿಯನ್ಸ್​ಗೆ ಕಾಡಿದರು.

IPL 2021
IPL 2021
author img

By

Published : Apr 9, 2021, 9:41 PM IST

ಚೆನ್ನೈ:ಪ್ರಸಕ್ತ ಸಾಲಿನ ಐಪಿಎಲ್​ ಟೂರ್ನಿಗೆ ಚಾಲನೆ ಸಿಕ್ಕಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮುಖಾಮುಖಿಯಾಗಿವೆ.

ಚೆನ್ನೈನ ಚಿದಂಬರಂ ಮೈದಾನದಲ್ಲಿ ಆರಂಭಗೊಂಡಿರುವ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​​ ನಡೆಸಿರುವ ಮುಂಬೈ ಇಂಡಿಯನ್ಸ್​​ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ನಷ್ಟಕ್ಕೆ 159 ರನ್​ಗಳಿಕೆ ಮಾಡಿದ್ದು, ಆರ್​ಸಿಬಿಗೆ 160ರನ್​ ಟಾರ್ಗೆಟ್​ ನೀಡಿದೆ.

Chris Lynn
ಕ್ರಿಸ್​​ ಲಿನ್​ ಬ್ಯಾಟಿಂಗ್​

ಇದನ್ನೂ ಓದಿ: ಪಡಿಕ್ಕಲ್​ ವಿಚಾರವಾಗಿ ಅಸಮಾಧಾನ ಹೊರಹಾಕಿದ ವಿವಿಧ ಐಪಿಎಲ್​​ ಪ್ರಾಂಚೈಸಿಗಳು.. ಕಾರಣ?

ಆರಂಭದಲ್ಲಿ ನಿಧಾನಗತಿ ಬ್ಯಾಟಿಂಗ್​ ಪ್ರಾರಂಭಿಸಿದ ಕ್ರಿಸ್ ಲಿನ್​ ತದನಂತರ ಅಬ್ಬರಿಸಿದ್ರು. ಹೀಗಾಗಿ 35 ಎಸೆತಗಳಲ್ಲಿ 49ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇದಕ್ಕೂ ಮೊದಲು ಕ್ಯಾಪ್ಟನ್​ ರೋಹಿತ್​​ 19ರನ್​ಗಳಿಸಿದ್ದ ವೇಳೆ ರನೌಟ್ ಬಲೆಗೆ ಬಿದ್ದರು. ಇದಾದ ಬಳಿಕ ಕಣಕ್ಕಿಳಿದ ಸೂರ್ಯಕುಮಾರ್​ ಯಾದವ್​ 31, ಇಶಾನ್ ಕಿಶನ್​​ 28 ರನ್​ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಇವರ ವಿಕೆಟ್​ ಬೀಳುತ್ತಿದ್ದಂತೆ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್​ 13ರನ್​, ಪೊಲಾರ್ಡ್​ 7ರನ್, ಕೃನಾಲ್​ 7ರನ್​ ನಿರಾಸೆ ಮೂಡಿಸಿದ್ರು.

Harshal Patel
ಬೌಲಿಂಗ್​ನಲ್ಲಿ ಮಿಂಚಿದ ಹರ್ಷಲ್​

ಆರ್​ಸಿಬಿ ಪರ ಬೌಲಿಂಗ್​ನಲ್ಲಿ ಮಿಂಚಿದ ಹರ್ಷಲ್​ ಪಟೇಲ್​ 4 ಓವರ್​ನಲ್ಲಿ 27ರನ್​ ನೀಡಿ ಪ್ರಮುಖ 5 ವಿಕೆಟ್​ ಪಡೆದುಕೊಂಡರೆ, ಸುಂದರ್​ ಹಾಗೂ ಜೆಮ್ಸನ್ ತಲಾ 1ವಿಕೆಟ್ ಪಡೆದುಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.