ಅಬುದಾಭಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳಬೇಕಾದರೆ ಬೃಹತ್ ರನ್ಗಳ ಅಂತರದಿಂದ ಗೆಲುವು ಸಾಧಿಸಬೇಕಾದ ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ನಿಗದಿತ 20 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ 235ರನ್ಗಳಿಕೆ ಮಾಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. 18ರನ್ಗಳಿಕೆ ಮಾಡಿದ್ದ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಆದರೆ, ಮತ್ತೋರ್ವ ಆರಂಭಿಕ ಕಿಶನ್ ಕೇವಲ 16 ಎಸೆತಗಳಲ್ಲಿ 50ರನ್ ಸಿಡಿಸಿ ಮಿಂಚಿದರು. ಕಿಶನ್ ಜೊತೆ ಸೇರಿದ ಹಾರ್ದಿಕ್ ಪಾಂಡ್ಯ 10ರನ್ ಹಾಗೂ ಪೊಲಾರ್ಡ್ 13ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಈ ವೇಳೆ ತಂಡ ದಿಢೀರ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು.
-
INNINGS BREAK!
— IndianPremierLeague (@IPL) October 8, 2021 " class="align-text-top noRightClick twitterSection" data="
Sensational batting display from @mipaltan to post 235/9 on the board!
8⃣4⃣ for @ishankishan51
8⃣2⃣ for @surya_14kumar
4⃣/5⃣2⃣ for @Jaseholder98
The @SunRisers chase will begin shortly. #VIVOIPL #SRHvMI
Scorecard 👉 https://t.co/STgnXhy0Wd pic.twitter.com/K8cP0OPzs2
">INNINGS BREAK!
— IndianPremierLeague (@IPL) October 8, 2021
Sensational batting display from @mipaltan to post 235/9 on the board!
8⃣4⃣ for @ishankishan51
8⃣2⃣ for @surya_14kumar
4⃣/5⃣2⃣ for @Jaseholder98
The @SunRisers chase will begin shortly. #VIVOIPL #SRHvMI
Scorecard 👉 https://t.co/STgnXhy0Wd pic.twitter.com/K8cP0OPzs2INNINGS BREAK!
— IndianPremierLeague (@IPL) October 8, 2021
Sensational batting display from @mipaltan to post 235/9 on the board!
8⃣4⃣ for @ishankishan51
8⃣2⃣ for @surya_14kumar
4⃣/5⃣2⃣ for @Jaseholder98
The @SunRisers chase will begin shortly. #VIVOIPL #SRHvMI
Scorecard 👉 https://t.co/STgnXhy0Wd pic.twitter.com/K8cP0OPzs2
ಕಿಶನ್ - ಸೂರ್ಯ ಬ್ಯಾಟಿಂಗ್ ಆರ್ಭಟ
ಬೃಹತ್ ರನ್ಗಳಿಕೆ ಮಾಡಬೇಕಾದ ಅನಿವಾರ್ಯತೆ ಕಾರಣ ಮುಂಬೈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದತ್ತ ಹೆಚ್ಚಿನ ಗಮನ ನೀಡಿತು. ಹೀಗಾಗಿ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್ ಯಾದವ ಕೂಡ ತಂಡಕ್ಕೆ ಭರ್ಜರಿ ಕೊಡುಗೆ ನೀಡಿದರು. ಕೇವಲ 40 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್ನಿಂದ 82 ರನ್ಗಳಿಕೆ ಮಾಡಿದರು. ಕಿಶನ್ ಕೂಡ 32 ಎಸೆತಗಳಲ್ಲಿ 4 ಸಿಕ್ಸರ್, 11 ಬೌಂಡರಿ ಸೇರಿ 84 ರನ್ಗಳಿಸಿದರು.
ಇದಾದ ಬಳಿಕ ಬಂದ ಕೃನಾಲ್ 9ರನ್, ಕೌಂಟರ್ ನೇಲ್ 3, ಬುಮ್ರಾ 5ರನ್ಗಳಿಕೆ ಮಾಡಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 9ವಿಕೆಟ್ನಷ್ಟಕ್ಕೆ 235ರನ್ಗಳಿಕೆ ಮಾಡಿತು. ಇದೀಗ ಪ್ಲೇ-ಆಫ್ಗೆ ಲಗ್ಗೆ ಹಾಕಬೇಕಾದರೆ ರೋಹಿತ್ ಪಡೆ ಎದುರಾಳಿ ತಂಡವನ್ನ 65ರನ್ಗೆ ಕಟ್ಟಿಹಾಕಬೇಕಾಗಿದೆ.
ಹೈದರಾಬಾದ್ ಪರ ಹೊಲ್ಡರ್ 4 ವಿಕೆಟ್, ರಾಶಿದ್ ಖಾನ್, ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಪಡೆದುಕೊಂಡರೆ, ಉಮ್ರಾನ್ ಮಲಿಕ್ 1 ವಿಕೆಟ್ ಕಿತ್ತರು.