ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದಿನ 35ನೇ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿವೆ. ಈ ಪಂದ್ಯ ಆರಂಭಗೊಳ್ಳುವ ಸಂದರ್ಭದಲ್ಲಿ ಕಾಲ ಮರಳು ಮಿಶ್ರಿತ ಬಿರುಗಾಳಿ ಬೀಸಿದ ಕಾರಣ ಪಂದ್ಯ ಕೊಂಚ ವಿಳಂಬವಾಗಿತ್ತು. ಈ ವೇಳೆ ಉಭಯ ತಂಡದ ನಾಯಕರು ಆಪ್ತ ಸಮಾಲೋಚನೆಯಲ್ಲಿ ತೊಡಗಿದ್ದು ಕಂಡುಬಂತು.
ಟಾಸ್‌ಗಾಗಿ ಮೈದಾನಕ್ಕೆ ಬಂದ ಸಮಯದಲ್ಲಿ ಗಾಳಿ ಬೀಸಲು ಶುರುವಾಗಿದೆ. ಈ ವೇಳೆ ಸಂದರ್ಭದಲ್ಲಿ ಧೋನಿ ಹಾಗೂ ಕೊಹ್ಲಿ ಮೈದಾನದಲ್ಲೇ ಉಭಯ ಕುಶಲೋಪರಿ ವಿಚಾರಿಸಿದರು. ಈ ಹಿಂದಿನಿಂದಲೂ ಉಭಯ ಆಟಗಾರರ ಮಧ್ಯೆ ಉತ್ತಮ ಸ್ನೇಹ ಬಾಂಧವ್ಯವಿದೆ.
-
🚨 Sandstorm Alert 🚨
— IndianPremierLeague (@IPL) September 24, 2021 " class="align-text-top noRightClick twitterSection" data="
Toss delayed in Sharjah by 10 mins! #VIVOIPL #RCBvCSK pic.twitter.com/tERTPwrpGx
">🚨 Sandstorm Alert 🚨
— IndianPremierLeague (@IPL) September 24, 2021
Toss delayed in Sharjah by 10 mins! #VIVOIPL #RCBvCSK pic.twitter.com/tERTPwrpGx🚨 Sandstorm Alert 🚨
— IndianPremierLeague (@IPL) September 24, 2021
Toss delayed in Sharjah by 10 mins! #VIVOIPL #RCBvCSK pic.twitter.com/tERTPwrpGx
ಇದನ್ನೂ ಓದಿ: ಆರ್ಸಿಬಿ vs ಸಿಎಸ್ಕೆ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್
ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಮುಕ್ತಾಯವಾಗುತ್ತಿದ್ದಂತೆ ಟಿ-20 ವಿಶ್ವಕಪ್ ನಡೆಯಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ಧೋನಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.