ETV Bharat / sports

ನಮ್ಮ ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ರೂ ಅವರಿಂದ ಉತ್ತಮ ಪ್ರದರ್ಶನ ಬರುತ್ತಿಲ್ಲ : ಮಾರ್ಗನ್ - ಕೋಲ್ಕತಾ ನೈಟ್‌ ರೈಡರ್ಸ್‌

ಈ ಪಂದ್ಯ ನಮಗೆ ಬಹಳ ನಿರಾಶಾದಾಯಕವಾಗಿತ್ತು. ಬ್ಯಾಟಿಂಗ್​ ವಿಭಾಗದಲ್ಲೂ ನಮ್ಮ ತಂಡದಿಂದ ಉತ್ತಮ ಆರಂಭ ದೊರೆಯಲಿಲ್ಲ. ಮಧ್ಯಮ ಕ್ರಮಾಂಕದಲ್ಲೂ ಕೂಡ ಉತ್ತಮ ಪ್ರದರ್ಶನ ಬರಲಿಲ್ಲ..

ಇಯೊನ್​ ಮಾರ್ಗನ್​​
ಇಯೊನ್​ ಮಾರ್ಗನ್​​
author img

By

Published : Apr 30, 2021, 11:44 AM IST

ಅಹಮದಾಬಾದ್ : ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ, ಪಾಯಿಂಟ್​​ ಟೇಬಲ್​ನಲ್ಲಿ 2ನೇ ಸ್ಥಾನಕ್ಕೇರಿದೆ.

ಈ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಕೆಕೆಆರ್​ ತಂಡ ಆಡಿದ 7 ಪಂದ್ಯಗಳಲ್ಲಿ 2 ರಲ್ಲಿ ಗೆದ್ದು, 5ರಲ್ಲಿ ಸೋಲು ಕಾಣುವ ಮೂಲಕ 5ನೇ ಸ್ಥಾನಕ್ಕೆ ಕುಸಿದಿದೆ.

ಈ ಪಂದ್ಯದ ನಂತರ ಮಾತನಾಡಿದ ಕೆಕೆಆರ್ ತಂಡದ ನಾಯಕ ಇಯೊನ್​ ಮಾರ್ಗನ್,​​ ನಮ್ಮ ತಂಡದಲ್ಲಿ ಅನೇಕ ಪ್ರತಿಭಾವಂತ ಆಟಗಾರರಿದ್ದಾರೆ. ಆದರೆ, ಅವರಿಂದ ನಿರೀಕ್ಷತ ಮಟ್ಟದಲ್ಲಿ ಪ್ರದರ್ಶನ ಬರುತ್ತಿಲ್ಲ ಎಂದು ಹೇಳಿದರು.

"ಮಾವಿ ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 4 ಓವರ್​ ಬೌಲ್​ ಮಾಡಿ ಕೇವಲ 15 ರನ್​ ನೀಡಿದ್ದರು. ಆದರೆ, ಈ ಪಂದ್ಯದಲ್ಲಿ ಈ ಯೋಜನೆ ಸಹಕಾರಗೊಳ್ಳಲಿಲ್ಲ. ಡ್ರೆಸ್ಸಿಂಗ್ ಕೋಣೆಯಲ್ಲಿರುವ ಎಲ್ಲರೊಂದಿಗೆ ನೀವು ಪ್ರಾಮಾಣಿಕವಾಗಿ ಮತ್ತು ವಾಸ್ತವಿಕವಾಗಿರಬೇಕು.

ನಾವು ಒಬ್ಬರಿಗೊಬ್ಬರು ಸಾಧ್ಯವಾದಷ್ಟು ಪ್ರಾಮಾಣಿಕವಾಗಿರಬೇಕು. ಆಗ ಮಾತ್ರ ನಾವು ಆಶಾದಾಯಕವಾಗಿ, ವಿಷಯಗಳನ್ನು ತಿರುಗಿಸಬಹುದು. ನಮ್ಮ ತಂಡದಲ್ಲಿ ಅಪಾರ ಪ್ರಮಾಣದ ಪ್ರತಿಭೆಗಳಿವೆ. ಆದರೆ, ಪ್ರತಿಭೆಗಳಿಂದ ಉತ್ತಮ ಪ್ರದರ್ಶನ ಮಾತ್ರ ಬರುತ್ತಿಲ್ಲ, ಇದು ನಿರಾಶಾದಾಯಕವಾಗಿದೆ"ಎಂದು ಅವರು ಹೇಳಿದರು.

ಈ ಪಂದ್ಯ ನಮಗೆ ಬಹಳ ನಿರಾಶಾದಾಯಕವಾಗಿತ್ತು. ಬ್ಯಾಟಿಂಗ್​ ವಿಭಾಗದಲ್ಲೂ ನಮ್ಮ ತಂಡದಿಂದ ಉತ್ತಮ ಆರಂಭ ದೊರೆಯಲಿಲ್ಲ. ಮಧ್ಯಮ ಕ್ರಮಾಂಕದಲ್ಲೂ ಕೂಡ ಉತ್ತಮ ಪ್ರದರ್ಶನ ಬರಲಿಲ್ಲ.

ಆದರೆ, ಕೊನೆಯಲ್ಲಿ ರಸ್ಸೆಲ್​ ಅವರ ಸಮೋಚಿತ ಬ್ಯಾಟಿಂಗ್‌ನಿಂದ ನಾವು 150ರ ಗಡಿ ದಾಟಲು ನೆರವಾಯಿತು. ಪೃಥ್ವಿ ಶಾ ಅದ್ಭುತವಾಗಿ ಆಡಿದರು. ಅವರಿಗೆ ಪಿಚ್​​ ಕೂಡ ಸಹಕಾರಿಯಾಗಿತ್ತು”ಎಂದು ಮೋರ್ಗನ್ ಹೇಳಿದರು.

ಕೆಕೆಆರ್ ಪ್ರಸ್ತುತ 7 ಪಂದ್ಯಗಳಿಂದ 4 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಐದನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯದಲ್ಲಿ ಕೆಕೆಆರ್​ ಸೋಮವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೆಣಸಲಿದೆ.

ಇದನ್ನೂ ಓದಿ : ಆರ್​ಸಿಬಿ vs ಪಂಜಾಬ್​ ಹೈ ವೋಲ್ಟೇಜ್ ಪಂದ್ಯ: ಗೆಲುವಿಗಾಗಿ ಸಂಜೆ ಹಾಲಿ-ಮಾಜಿಗಳ ಫೈಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.