ETV Bharat / sports

ಧೋನಿ ನಾಯಕತ್ವದಲ್ಲಿ 200ನೇ IPL ಪಂದ್ಯ: ಗೆಲುವಿನ ಉಡುಗೊರೆ ನೀಡುತ್ತೇವೆ- ಜಡೇಜಾ

ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿಂದು ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್​ ನಡುವೆ ಐಪಿಎಲ್ ಪಂದ್ಯ ನಡೆಯಲಿದೆ.

author img

By

Published : Apr 12, 2023, 5:28 PM IST

Hopefully we will win, give him a gift: Jadeja on Dhoni  CSK for 200th match
200ನೇ ಪಂದ್ಯ ಗೆದ್ದು ಬಹುಮಾನವಾಗಿ ಕೊಡುತ್ತೇವೆ: ಜಡೇಜ

ಚೆನ್ನೈ (ತಮಿಳುನಾಡು): ಎಂ.ಎಸ್‌.ಧೋನಿ ಅವರಿಂದು ಚೆನ್ನೈ ಸೂಪರ್​ ಕಿಂಗ್ಸ್​ನ 200ನೇ ಪಂದ್ಯದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಇಂಡಿಯನ್​ ಪ್ರೀಮಿಯರ್​​ ಲೀಗ್​ನ(ಐಪಿಎಲ್‌) ಅತ್ಯಂತ ಯಶಸ್ವಿ ನಾಯಕನೆಂದೇ ಕರೆಸಿಕೊಳ್ಳುವ ಎಂಎಸ್​ಡಿ ಚೆನ್ನೈಗೆ ನಾಲ್ಕು ಕಪ್​ ಗೆಲ್ಲಿಸಿಕೊಟ್ಟಿದ್ದಾರೆ.

ಧೋನಿ ಈವರೆಗಿನ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರತೆ ಹೊಂದಿದ ಮತ್ತು ಯಶಸ್ವಿ ನಾಯಕ. ನಾಯಕನಾಗಿದ್ದ 2010, 2011, 2018 ಮತ್ತು 2021ರ ಆವೃತ್ತಿಗಳಲ್ಲಿ ತಂಡ ನಾಲ್ಕು ಬಾರಿ ಚಾಂಪಿಯನ್​ ಆಗಿದೆ. ಮುಂಬೈ ಇಂಡಿಯನ್ಸ್ ಐದು ಬಾರಿ ಟ್ರೋಫಿ ಗೆದ್ದರೂ, ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ಸ್ಥಿರ ಪ್ರದರ್ಶನ ನೀಡಿದೆ. 13 ಆವೃತ್ತಿಯಲ್ಲಿ (ಎರಡು ಆವೃತ್ತಿ ಸಿಎಸ್​ಕೆ ಬ್ಯಾನ್​ ಆಗಿತ್ತು) ಚೆನ್ನೈ ಸೂಪರ್​ ಕಿಂಗ್ಸ್​ 11ರಲ್ಲಿ ಟಾಪ್​ ನಾಲ್ಕರಲ್ಲಿ ಬಂದರೆ, 5 ಬಾರಿ ರನ್ನರ್​ ಅಪ್​ ಆಗಿದೆ.

ಒಟ್ಟಾರೆಯಾಗಿ ಧೋನಿ ಐಪಿಎಲ್‌ನಲ್ಲಿ 213 ಪಂದ್ಯಗಳ ನಾಯಕತ್ವ ವಹಿಸಿದ್ದಾರೆ. ಈ ಪೈಕಿ ಅವರು 125 ಪಂದ್ಯಗಳನ್ನು ಗೆದ್ದರೆ, 87ರಲ್ಲಿ ಸೋತಿದ್ದಾರೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿರಲಿಲ್ಲ. ಇವರ ಗೆಲುವಿನ ಪ್ರಮಾಣ ಶೇ 58.96. ಅತ್ಯಂತ ದೀರ್ಘ ಕಾಲ ಒಂದು ತಂಡವನ್ನು ಮುನ್ನಡೆಸಿದ ಕೀರ್ತಿ ಧೋನಿಯದ್ದು.

2016 ಮತ್ತು 2017 ರಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್‌ ತಂಡದಲ್ಲಿ ಧೋನಿ ಕಾಣಿಸಿಕೊಂಡರು. 2016ರಲ್ಲಿ ಪುಣೆಯ ನಾಯಕರಾಗಿದ್ದರು. ಆ ಸಂದರ್ಭದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಿರಲಿಲ್ಲ. 14 ಪಂದ್ಯದಲ್ಲಿ ಒಂಬತ್ತನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಧೋನಿ 237 ಐಪಿಎಲ್‌ ಪಂದ್ಯಗಳನ್ನಾಡಿದ್ದು, 39.09 ಸರಾಸರಿಯಲ್ಲಿ ಮತ್ತು 135 ಸ್ಟ್ರೈಕ್ ರೇಟ್‌ನಲ್ಲಿ 24 ಅರ್ಧಶತಕ ಸಹಿತ 5,004 ರನ್ ಗಳಿಸಿದ್ದಾರೆ. ಅಜೇಯ 84 ಅವರ ಬೆಸ್ಟ್​ ಸ್ಕೋರ್​ ಆಗಿದೆ.

"ನಾನೇನು ಹೇಳಲಿ, ಅವರು ಭಾರತೀಯ ಕ್ರಿಕೆಟ್‌ನ ದಂತಕಥೆ. ಶುಭ ಹಾರೈಸುತ್ತೇನೆ. 200ನೇ ಪಂದ್ಯವನ್ನು ನಾವು ಚೆಪಾಕ್‌ನಲ್ಲಿ ಗೆಲ್ಲುತ್ತೇವೆ. ಗೆಲುವಿನ ಉಡುಗೊರೆ ನೀಡುತ್ತೇವೆ. ತವರಿನಲ್ಲಿ ಅವಿಸ್ಮರಣೀಯ ಪಂದ್ಯ ಆಡುತ್ತಿರುವುದಕ್ಕೆ ಸಂತೋಷವಿದೆ" ಎಂದು ರವೀಂದ್ರ ಜಡೇಜ ಹೇಳಿದ್ದಾರೆ.

ಧೋನಿಗೆ ಇದು ಕಡೆ ಐಪಿಎಲ್?​: ಕೆಲವು ಮಾಧ್ಯಮಗಳ ವರದಿಯಂತೆ ಈ ಬಾರಿಯ ಐಪಿಎಲ್​ ನಂತರ ಧೋನಿ ಕ್ರಿಕೆಟ್​ನ ಎಲ್ಲಾ ಮಾದರಿಗೂ ವಿದಾಯ ಹೇಳುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಗಸ್ಟ್​ 15 2020ರಲ್ಲಿ ವಿದಾಯ ಹೇಳಿದ್ದರು. 41 ವರ್ಷದ ಧೋನಿ ಪ್ರಸಕ್ತ ವರ್ಷದ ಐಪಿಎಲ್​ ನಂತರ ಕ್ರಿಕೆಟ್​ ನಿವೃತ್ತಿ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: IPL ನಲ್ಲಿಂದು ರಾಜಸ್ಥಾನ- ಚೆನ್ನೈ ಫೈಟ್: 200ನೇ ಪಂದ್ಯ ಮುನ್ನಡೆಸಲಿದ್ದಾರೆ ಧೋನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.