ETV Bharat / sports

GT vs MI Qualifier 2: ಟಾಸ್​ ಗೆದ್ದ ಮುಂಬೈ ಬೌಲಿಂಗ್​ ಆಯ್ಕೆ, ಫೈನಲ್​ ಟಿಕೆಟ್​ ಪಡೆಯುವವರು ಯಾರು? - ETV Bharath Kannada news

ಇಂಡಿಯನ್​ ಪ್ರೀಮಿಯರ್​ ಲೀಗ್​ನ​ ಎರಡನೇ ಕ್ವಾಲಿಫೈಯರ್​ನಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ಮುಖಾಮುಖಿಯಾಗುತ್ತಿವೆ.

Gujarat Titans vs Mumbai Indians Qualifier 2
GT vs MI Qualifier 2: ಮಳೆಯಿಂದಾಗಿ ಟಾಸ್​ ವಿಳಂಬ, ಪಂದ್ಯ ರದ್ಧಾದರೆ ಫೈನಲ್​ ಪ್ರವೇಶಿಸುವವರು ಯಾರು?
author img

By

Published : May 26, 2023, 7:25 PM IST

Updated : May 26, 2023, 8:05 PM IST

ಅಹಮದಾಬಾದ್​ (ಗುಜರಾತ್​): ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಎರಡನೇ ಕ್ವಾಲಿಫೈಯರ್​ ಪಂದ್ಯಕ್ಕೆ ಸಜ್ಜಾಗಿದೆ. ಹಾಲಿ ಚಾಂಪಿಯನ್​ ಗುಜರಾತ್​ ಟೈಟಾನ್ಸ್​ 5 ಬಾರಿ ಕಪ್​ ಗೆದ್ದಿರುವ ಮುಂಬೈ ಇಂಡಿಯನ್ಸ್​​ ತಂಡವನ್ನು ಎದುರಿಸುತ್ತಿದೆ. ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಮೊದಲು ಬೌಲಿಂಗ್​ ಮಾಡುವುದಾಗಿ ಹೇಳಿದೆ. ಮಳೆಯ ಕಾರಣ 7:45 ಟಾಸ್​ ಆಗಿದ್ದು, ಪಂದ್ಯ 8 ಗಂಟೆಗೆ ಆರಂಭವಾಗಿದೆ.

ಐದು ಬಾರಿ ಪ್ರಶಸ್ತಿ ವಿಜೇತ ಮುಂಬೈ ಇಂಡಿಯನ್ಸ್​ ಕಳೆದ ವರ್ಷ ಲೀಗ್​ನಲ್ಲಿ ಕಳಪೆ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಬಾರಿ ಮೊದಲ ಪಂದ್ಯದಲ್ಲಿ ಸೋತು ಲೀಗ್​ ಆರಂಭಿಸಿ ನಂತರ ಸತತ ವೈಫಲ್ಯಗಳನ್ನು ಕಂಡಿತು. ಆದರೆ, ಲೀಗ್​ ಅರ್ಧ ಮುಗಿಯುತ್ತಿದ್ದಂತೆ ತಂಡದ ಆಟಗಾರರು ಲಯಕ್ಕೆ ಮರಳಿದ ಕಾರಣ 14 ರಲ್ಲಿ 8 ಪಂದ್ಯಗಳನ್ನು 16 ಅಂಕದಿಂದ ಪಾಂಯಿಂಟ್​ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಎಲಿಮಿನೇಟರ್​ ಪಂದ್ಯದಲ್ಲಿ ಆಶಿಶ್​ ಮದ್ವಾಲ್​ ಅವರ ವಿಂಚಿನ ಬೌಲಿಂಗ್​ ದಾಳಿಯಿಂದ ಲಕ್ನೋವನ್ನು ಮಣಿಸಿ ಕ್ವಾಲಿಫೈಯರ್​ 2ರಲ್ಲಿ ಗುಜರಾತ್​ ವಿರುದ್ಧದ ಹಣಾಹಣಿಗೆ ತಯಾರಾಗಿದೆ.

ಅರ್ಧ ಲೀಗ್ ​ನಂತರ ಸೂರ್ಯ ಕುಮಾರ್​ ಯಾದವ್​, ಕ್ಯಾಮರಾನ್​ ಗ್ರೀನ್​, ಟಿಮ್​ ಡೇವಿಡ್​, ಇಶಾನ್​ ಕಿಶನ್​ ಲಯಕ್ಕೆ ಬಂದಿದ್ದು ತಂಡಕ್ಕೆ ಸಹಕಾರಿಯಾಗಿತ್ತು. ಆದರೆ, ಮುಂಬೈಗೆ ಬೌಲಿಂಗ್​ನಲ್ಲಿ ಸಮಸ್ಯೆ ಎದುರಿಸುತ್ತಿತ್ತು. ಅದಕ್ಕೆ ಮುಖ್ಯ ಕಾರಣ ಅಂತಾರಾಷ್ಟ್ರೀಯ ಸ್ಟಾರ್​ ಬೌಲರ್​ಗಳಾದ ಜಸ್ಪಿತ್ ​ಬೂಮ್ರಾ ಮತ್ತು ಜೋಫ್ರಾ ಆರ್ಚರ್​ ಗಾಯಗೊಂಡು ತಂಡದಿಂದ ಹೊರಗಿಳಿದಿರುವುದು. ಆದರೆ, ವಿದೇಶಿ ಬೌಲರ್​ಗಳ ಜೊತೆಗೆ ಭಾರತೀಯ ಅನಾನುಭವಿ ಬೌಲಿಂಗ್​ ಪಡೆಯನ್ನೇ ಬಳಸಿ ರೋಹಿತ್​ ಶರ್ಮಾ ಯಶಸ್ಸು ಕಂಡಿದ್ದಾರೆ.

ಗುಜರಾತ್​ ಟೈಟಾನ್ಸ್​ ತನ್ನ ಚಾಂಪಿಯನ್​ ಆಟವನ್ನು ಈ ಆವೃತ್ತಿಯಲ್ಲೂ ಮುಂದುವರೆಸಿತು. ಆರಂಭಿಕ ಶುಭಮನ್​ ಗಿಲ್​ ಎರಡು ಶತಕ ಗಳಿಸಿದ್ದಲ್ಲದೇ ಈ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶಿಸಿದರು. ಅವರ ಜೊತೆ ನಾಯಕ ಹಾರ್ದಿಕ್​, ತೆವಾಟಿಯಾ, ರಶೀದ್​ ಖಾನ್​ ಮತ್ತು ವಿಜಯ್ ಶಂಕರ್​ ಸಹ ಅಬ್ಬರಿಸಿದ್ದು, ಲೀಗ್​ನ 14 ಪಂದ್ಯದಲ್ಲಿ 10ನ್ನು ಗೆದ್ದುಕೊಂಡಿತು. ಆದರೆ ಚೆನ್ನೈನ ಚೆಪಾಕ್​ನಲ್ಲಿ ನಡೆದ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ನ್ನು ಸೋಲಿಸಲಾಗದೇ, ನೇರ ಫೈನಲ್​ ಪ್ರವೇಶವನ್ನು ಕಳೆದುಕೊಂಡು ಇಂದು ಮುಂಬೈ ವಿರುದ್ಧ ಕಣಕ್ಕಿಳಿಯುತ್ತಿದೆ.

  • 🚨 Update from Ahmedabad 🚨

    Toss has been delayed due to rain.

    The umpires will inspect the ground at 7:20 PM IST.#TATAIPL | #Qualifier2 | #GTvMI

    — IndianPremierLeague (@IPL) May 26, 2023 " class="align-text-top noRightClick twitterSection" data=" ">

ಇಂದಿನ ಪಂದ್ಯವನ್ನು ಸೋತ ತಂಡ ಮೂರನೇ ಸ್ಥಾನವನ್ನು ಪಡೆಯಲಿದೆ. ಗೆದ್ದ ತಂಡ ಭಾನುವಾರ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಇದೇ ಮೈದಾನದಲ್ಲಿ ಆಡಬೇಕಿದೆ.

ತಂಡಗಳು ಇಂತಿದೆ..: ಗುಜರಾತ್​ ಟೈಟಾನ್ಸ್​: ವೃದ್ಧಿಮಾನ್ ಸಹಾ (ವಿಕೆಟ್​ ಕೀಪರ್​), ಶುಭಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ

ಮುಂಬೈ ಇಂಡಿಯನ್ಸ್​: ಇಶಾನ್ ಕಿಶನ್ (ವಿಕೆಟ್​ ಕೀಪರ್​), ರೋಹಿತ್ ಶರ್ಮಾ (ನಾಯಕ), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಾಲ್

ಇದನ್ನೂ ಓದಿ: IPL 2023 ಕ್ವಾಲಿಫೈಯರ್ 2: ಮುಂಬೈ - ಗುಜರಾತ್​ ಸೆಮೀಸ್​ ಫೈಟ್​, ಗೆದ್ದವರಿಗೆ ಫೈನಲ್​ ಟಿಕೆಟ್​​..

Last Updated : May 26, 2023, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.