ಅಹಮದಾಬಾದ್ (ಗುಜರಾತ್): ಶುಭಮನ್ ಗಿಲ್ ಭರ್ಜರಿ ಶತಕದ ನೆರವಿನಿಂದ ಫೈನಲ್ ಪ್ರವೇಶದ ಪ್ರಮುಖ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನಿಗದಿತ ಓವರ್ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿದೆ. ಮಳೆ ಬಂದು ತಡವಾಗಿ ಪಂದ್ಯ ಆರಂಭವಾಯಿತು. ಮೈದಾನದ ಮೇಲ್ಮೈ ತೇವಾಂಶ ಇದ್ದಿದ್ದರಿಂದ ಬೌಲರ್ಗಳಿಗೆ ಬಾಲ್ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಯಿತು. ಇದನ್ನೇ ಲಾಭ ಮಾಡಿಕೊಂಡ ಜಿಟಿ ಬ್ಯಾಟರ್ಗಳು ಮುಂಬೈ ಬೌಲರ್ಗಳನ್ನು ದಂಡಿಸಿದರು. ಇರದರ ಪರಿಣಾಮ ಮುಂಬೈ ಗೆಲುವಿಗೆ 234 ರನ್ ಅಗತ್ಯವಿದೆ.
-
Innings break!
— IndianPremierLeague (@IPL) May 26, 2023 " class="align-text-top noRightClick twitterSection" data="
Surreal batting performance from Gujarat Titans as they post 233/3 on board 🔥🔥
Shubman Gill the man of the moment with a magnificent 129(60) 🙌
Scorecard ▶️ https://t.co/f0Ge2x8XbA#TATAIPL | #Qualifier2 | #GTvMI pic.twitter.com/TPuCraDxNZ
">Innings break!
— IndianPremierLeague (@IPL) May 26, 2023
Surreal batting performance from Gujarat Titans as they post 233/3 on board 🔥🔥
Shubman Gill the man of the moment with a magnificent 129(60) 🙌
Scorecard ▶️ https://t.co/f0Ge2x8XbA#TATAIPL | #Qualifier2 | #GTvMI pic.twitter.com/TPuCraDxNZInnings break!
— IndianPremierLeague (@IPL) May 26, 2023
Surreal batting performance from Gujarat Titans as they post 233/3 on board 🔥🔥
Shubman Gill the man of the moment with a magnificent 129(60) 🙌
Scorecard ▶️ https://t.co/f0Ge2x8XbA#TATAIPL | #Qualifier2 | #GTvMI pic.twitter.com/TPuCraDxNZ
ಪವರ್ ಪ್ಲೇ ಸಮಯದಲ್ಲಿ ಫೀಲ್ಡರ್ಗಳು ಹೆಚ್ಚು 30 ಯಾರ್ಡ್ ಒಳಗೆ ಇರುವುದನ್ನು ಚೆನ್ನಾಗಿ ಬಳಸಿಕೊಳ್ಳುವ ಶುಭಮನ್ ಗಿಲ್ ಇಂದು ಅದೇ ಲಾಭವನ್ನು ಪಡೆದರು. ಆರಂಭಿಕ ಸಹಾ ಜೊತೆಯಲ್ಲಿದ್ದಾಗ ಹೆಚ್ಚು ಕ್ರೀಸ್ ಪಡೆದು ವೇಗವಾಗಿ ರನ್ ಗಳಿಸಿದರು. ಸಹಾ ಕೇವಲ 18 ರನ್ಗಳಿಸಿ ಔಟ್ ಆದರೂ ಗಿಲ್ ಮೊದಲ ವಿಕೆಟ್ಗೆ 54ರನ್ಗಳ ಜೊತೆಯಾಟ ನೀಡಿದರು.
ಒಂದೇ ಆವೃತ್ತಿಯಲ್ಲಿ ಮೂರನೇ ಶತಕ ದಾಖಲಿಸಿದ ಗಿಲ್: ಸಹಾ ನಂತರ ಬಂದ ಸುದರ್ಶನ್ ಕೂಡಾ ಕ್ರೀಸ್ನ್ನು ಗಿಲ್ಗೆ ಬಿಟ್ಟುಕೊಟ್ಟರು. ಇದರಿಂದ ತಮ್ಮ ಅಬ್ಬರದ ಇನ್ನಿಂಗ್ಸ್ನ್ನು ಶುಬ್ಮನ್ ಮುಂದುವರೆಸುತ್ತಾ ಸಾಗಿದರು. 49 ಬಾಲ್ ಎದುರಿಸಿದ ಗಿಲ್ ಶತಕ ಗಳಿಸಿದರು. ನಂತರವೂ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಗಿಲ್ 60 ಬಾಲ್ನಲ್ಲಿ 129 ರನ್ ಗಳಿಸಿ ಔಟ್ ಆದರು. ಅವರ ಇಂದಿನ ಇನ್ನಿಂಗ್ಸ್ನಲ್ಲಿ 10 ಸಿಕ್ಸ್ ಮತ್ತು 7 ಬೌಂಡರಿ ಬಾರಿಸಿದರು. ಶುಬ್ಮನ್ ಈ ಆವೃತ್ತಿಯ ಮೂರನೇ ಶತಕವಾಗಿದೆ. ಈ ಆವೃತ್ತಿಯಲ್ಲಿ 16 ಪಂದ್ಯಗಳಿಂದ 821 ರನ್ಗಳಿಸಿದ ಗಿಲ್ ಆರೆಂಜ್ ಕ್ಯಾಪ್ ಪಡೆದುಕೊಂಡರು.
-
𝙂𝙄𝙇𝙇𝙞𝙖𝙣𝙩! 👏👏
— IndianPremierLeague (@IPL) May 26, 2023 " class="align-text-top noRightClick twitterSection" data="
Stand and applaud the Shubman Gill SHOW 🫡🫡#TATAIPL | #Qualifier2 | #GTvMI | @ShubmanGill pic.twitter.com/ADHi0e6Ur1
">𝙂𝙄𝙇𝙇𝙞𝙖𝙣𝙩! 👏👏
— IndianPremierLeague (@IPL) May 26, 2023
Stand and applaud the Shubman Gill SHOW 🫡🫡#TATAIPL | #Qualifier2 | #GTvMI | @ShubmanGill pic.twitter.com/ADHi0e6Ur1𝙂𝙄𝙇𝙇𝙞𝙖𝙣𝙩! 👏👏
— IndianPremierLeague (@IPL) May 26, 2023
Stand and applaud the Shubman Gill SHOW 🫡🫡#TATAIPL | #Qualifier2 | #GTvMI | @ShubmanGill pic.twitter.com/ADHi0e6Ur1
ನಂತರ ಹಾರ್ದಿಕ್ ಪಾಂಡ್ಯ ಸುದರ್ಶನ್ಗೆ ಜೊತೆಯಾದರು. ನಾಯಕನ ಜೊತೆಗೆ ಸುದರ್ಶನ್ ಸಹ ಉತ್ತಮ ಇನ್ನಿಂಗ್ಸ್ ಕಟ್ಟಿದ್ದರು. 31 ಬಾಲ್ನಲ್ಲಿ 5 ಬೌಂಡರಿ, 1 ಸಿಕ್ಸ್ನಿಂದ 43 ರನ್ಗಳಿಸಿ ಆಡುತ್ತಿದ್ದಾಗ ಗಾಯಕ್ಕೆ ತುತ್ತಾಗಿ ಪೆವಿಲಿಯನ್ಗೆ ಮರಳಿದರು. ಸಾಯಿ ಮರಳಿದ ನಂತರ ರಶೀದ್ ಖಾನ್ಗೆ ಬಡ್ತಿ ನೀಡಿ 5ನೇ ಬ್ಯಾಟರ್ ಆಗಿ ಕಣಕ್ಕಿಳಿಸಲಾಯಿತು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅಜೇಯರಾಗಿ 22 ರನ್ ಗಳಿಸಿದರೆ, ರಶೀದ್ 5 ರನ್ ಗಳಿಸಿದರು. ಮುಂಬೈ ಪರ ಆಶಿಶ್ ಮದ್ವಾಲ್ ಮತ್ತು ಚಾವ್ಲಾ ತಲಾ 1 ವಿಕೆಟ್ ಪಡೆದರು.
ತಂಡಗಳು ಇಂತಿದೆ..: ಗುಜರಾತ್ ಟೈಟಾನ್ಸ್: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಸಾಯಿ ಸುದರ್ಶನ್, ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಾಲ್
ಇದನ್ನೂ ಓದಿ: GT vs MI Qualifier 2: ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ, ಫೈನಲ್ ಟಿಕೆಟ್ ಪಡೆಯುವವರು ಯಾರು?