ಅಹಮದಾಬಾದ್ (ಗುಜರಾತ್): ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತನ್ನ ಸತತ ಮೂರನೇ ಗೆಲುವಿನ ಹುಡುಕಾಟದಲ್ಲಿದೆ. ನಿತೀಶ್ ರಾಣಾ ಅವರ ತಂಡವು ಈ ವರ್ಷದ ಸ್ಪರ್ಧೆಯ ಮೊದಲ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರಿ ಮೇಲೆ ಸಾಧಿಸಿದ್ದು, ಅದನ್ನು ಮುಂದುವರೆಸುವ ಚಿಂತನೆಯಲ್ಲಿದೆ.
ಹಾರ್ದಿಕ್ ವೈಫಲ್ಯ ಕಂಡರೂ ತಂಡಕ್ಕೆ ಗೆಲುವು: ಗುಜರಾತ್ ನಾಯಕ ಎರಡು ಪಂದ್ಯದಲ್ಲಿ ವಿಫತೆ ಕಂಡರೂ ಸಹ ತಂಡದ ಒಬ್ಬಲ್ಲಾ ಒಬ್ಬ ಆಟಗಾರ ಆಸರೆಯಾಗಿ ಪಂದ್ಯ ಗೆಲ್ಲಿಸಿದ್ದಾರೆ. ತಂಡದ ಬಹುತೇಕ ಆಟಗಾರರು ಫಾರ್ಮ್ನಲ್ಲಿದ್ದು ನಾಯಕ ಹಾರ್ದಿಕ್ ಲಯ ಕಂಡುಕೊಳ್ಳಬೇಕಿದೆ. ಆರಂಭಿಕ ಶೂಭಮನ್ ಗಿಲ್ ಪರಿಣಾಮಕಾರಿಯಾಗಿ ಕಂಡುಬರುತ್ತಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಉತ್ತಮ ಲಯದಲ್ಲಿ ಕಂಡು ಬಂದರೆ, ಡೇವಿಡ್ ಮಿಲ್ಲರ್ ಫಿನಿಶರ್ ಸ್ಥಾನವನ್ನು ತುಂಬುತ್ತಿದ್ದಾರೆ. ಗುಜರಾತ್ ತಂಡ ಸಮತೋಲನವಾಗಿ ಕಂಡು ಬರುತ್ತಿದೆ. ಬೌಲಿಂಗ್ನಲ್ಲಿ ವೇಗದ ಪಾಳಯದಲ್ಲಿ ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್ ಭರ್ಜರಿ ಪ್ರದರ್ಶನ ನೀಡಿದರೆ, ರಶೀದ್ ಖಾನ್ ಸ್ಪಿನ್ನಲ್ಲಿ ತಮ್ಮ ಫಾರ್ಮ್ ಮುಂದುವರೆಸಿದ್ದಾರೆ.
-
𝐑𝐞𝐮𝐧𝐢𝐨𝐧! 💙💜#GTvKKR | #AavaDe | #TATAIPL 2023 pic.twitter.com/bgp0mAJflE
— Gujarat Titans (@gujarat_titans) April 8, 2023 " class="align-text-top noRightClick twitterSection" data="
">𝐑𝐞𝐮𝐧𝐢𝐨𝐧! 💙💜#GTvKKR | #AavaDe | #TATAIPL 2023 pic.twitter.com/bgp0mAJflE
— Gujarat Titans (@gujarat_titans) April 8, 2023𝐑𝐞𝐮𝐧𝐢𝐨𝐧! 💙💜#GTvKKR | #AavaDe | #TATAIPL 2023 pic.twitter.com/bgp0mAJflE
— Gujarat Titans (@gujarat_titans) April 8, 2023
ಕೆಕೆಆರ್ ಶಾರ್ದೂಲ್ ಹೊಸ ಭರವಸೆ: ಶಾರ್ದೂಲ್ ಠಾಕೂರ್ ಐಪಿಎಲ್ನಲ್ಲಿ ಕೆಕೆಆರ್ ಪರ ಕೆಲ ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಆರ್ಸಿಬಿ ಎದುರಿನ ಪಂದ್ಯದ ನಂತರ ಅವರ ಪ್ರದರ್ಶನ ಇನ್ನೊಂದು ಹಂತಕ್ಕೆ ಹೋಗಿದೆ. ಅರ್ಧಶತಕದ ಆಟದ ಜೊತೆಗೆ ಬೌಲಿಂಗ್ನಲ್ಲೂ ಮಿಂಚು ಹರಿಸಿ ಆರ್ಸಿಬಿ ಸೋಲಿಗೆ ಪ್ರಮುಖ ಕಾರಣರಾದರು. ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅವರ ಜೊತೆ ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಕಮಾಲ್ ಮಾಡುತ್ತಿದ್ದಾರೆ.
ವೆಂಕಟೇಶ್ ಅಯ್ಯರ್ ಮತ್ತು ರಹಮಾನುಲ್ಲಾ ಗುರ್ಬಾಜ್ ಆರಂಭಿಕರಾಗಿ ಉತ್ತಮವಾಗಿ ಕಂಡುಬಂದರೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ನಿತೀಶ್ ರಾಣಾ ಮತ್ತು ರಿಂಕು ಸಿಂಗ್ ಪ್ರಭಾವಿಗಳಾಗಿದ್ದಾರೆ. ಬ್ಯಾಟಿಂಗ್ನಲ್ಲಿ ಫಿನಿಶರ್ ಸ್ಥಾನದಲ್ಲಿ ಡ್ರೇ ರಸೆಲ್ ಇದ್ದು, ಈಗ ಶಾರ್ದೂಲ್ ಸಹ ಸೇರಿಕೊಂಡಿದ್ದಾರೆ. ಎರಡೂ ತಂಡಗಳು ಸಮಾನ ಬಲಾಬಲ ಹೊಂದಿದ್ದು, ಗುಜರಾತ್ ತಂಡಕ್ಕೆ ತವರು ಮೈದಾನ ಒಂದು ಪ್ಲೆಸ್ ಪಾಯಿಂಟ್ ಆಗಿದೆ.
ಸಂಭಾವ್ಯ ತಂಡ..: ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಶಮಿ, ಜೋಶುವಾ ಲಿಟಲ್, ಯಶ್ ದಯಾಲ್
ಕೊಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಮನ್ದೀಪ್ ಸಿಂಗ್/ಎನ್ ಜಗದೀಸನ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಪಂದ್ಯ: ಮಧ್ಯಾಹ್ನ 3:30ಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ನೇರ ಪ್ರಸಾರ ಜಿಯೋ ಸಿನಿಮಾ ಆ್ಯಪ್ ಮತ್ತು ಸ್ಟಾರ್ ಸ್ಪೋರ್ಟ್ನಲ್ಲಿ ಲಭ್ಯ.
ಇದನ್ನೂ ಓದಿ: RR vs DC : ಗೆಲುವಿಗಾಗಿ ವಾರ್ನರ್ ಏಕಾಂಗಿ ಆಟ.. ಆದರೂ 57 ರನ್ ಸೋಲು