ETV Bharat / sports

ಮಿಲ್ಲರ್ ಅದ್ಭುತ ಬ್ಯಾಟಿಂಗ್ : CSK ವಿರುದ್ಧ ಗುಜರಾತ್ ಟೈಟನ್ಸ್ ಗೆ 3 ವಿಕೆಟ್ ರೋಚಕ ಜಯ

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಗೆ 3 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿದೆ. ಡೇವಿಡ್ ಮಿಲ್ಲರ್ ಮತ್ತು ರಶೀದ್ ಖಾನ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಗೆಲುವು ಸಾಧಿಸಿದೆ.

gujarat-titans-beat-chennai-super-kings-by-3-wickets
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟನ್ಸ್ ಗೆ 3 ವಿಕೆಟ್ ರೋಚಕ ಜಯ
author img

By

Published : Apr 18, 2022, 7:34 AM IST

ಪುಣೆ: ಗುಜರಾತ್ ಟೈಟನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ. ಗುಜರಾತ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಗೆ 170 ರನ್ ಗಳ ಗುರಿಯನ್ನು ನೀಡಿತ್ತು.

ಕಳೆದ 5 ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಗಾಯಕ್ವಾಡ್ ಈ ಪಂದ್ಯದಲ್ಲಿ ​ಜವಾಬ್ದಾರಿಯುತ ಆಟ ಆಡಿದರು. ಸಿಎಸ್​ಕೆ ಪವರ್​ ಪ್ಲೇ ಒಳಗೆ 32 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ಕಳೆದ ಪಂದ್ಯದ ಹೀರೋ ಉತ್ತಪ್ಪ 3 ಮತ್ತು ಮೊಯಿನ್ ಅಲಿ ಕೇವಲ 1 ರನ್​ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್ ತೆರಳಿದರು. ಬಳಿಕ ಬಂದ ಗಾಯಕ್ವಾಡ್​ ಮತ್ತು ಅನುಭವಿ ರಾಯುಡು 3ನೇ ವಿಕೆಟ್​ಗೆ 92 ರನ್ ಗಳ ಜೊತೆಯಾಟ​ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.

31 ಎಸೆತಗಳನ್ನೆದುರಿಸಿದ ರಾಯುಡು 4 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ 46 ರನ್​ಗಳಿಸಿದರೆ, ಗಾಯಕ್ವಾಡ್​ 48 ಎಸೆತಗಳಲ್ಲಿ ತಲಾ 5 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 73 ರನ್​ಗಳಸಿ ತಂಡವನ್ನು ಸುಸ್ಥಿತಿಗೆ ತಂದು ನಿರ್ಗಮಿಸಿದರು. ಕೊನೆಯಲ್ಲಿ ಜಡೇಜಾ 12 ಎಸೆತಗಳಲ್ಲಿ 22, ದುಬೆ 17 ಎಸೆತಗಳಲ್ಲಿ 19 ರನ್​ ಗಳಿಸಿದರು. ಋತುರಾಜ್ ಗಾಯಕ್ವಾಡ್​ ಅವರ ಅರ್ಧಶತಕ ಮತ್ತು ರಾಯುಡು ಅವರ 46 ರನ್​ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್​ಗಳಲ್ಲಿ 169 ರನ್​ಗಳಿಸಲು ಶಕ್ತವಾಯಿತು.

ಬಳಿಕ 170 ರನ್ ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟನ್ಸ್ ಗೆ ಆರಂಭಿಕ ಆಟಗಾರರ ವೈಫಲ್ಯ ಕಾಡಿದರೂ, ಡೇವಿಡ್ ಮಿಲ್ಲರ್ ಮತ್ತು ರಶೀದ್ ಖಾನ್ ಅವರ ಭರ್ಜರಿ ಬ್ಯಾಟಿಂಗ್​ನಿಂದಾಗಿ ಅಂತಿಮ ಕ್ಷಣದಲ್ಲಿ ಚೆನ್ನೈ ವಿರುದ್ಧ 3 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ. ಈ ಮೂಲಕ ಗುಜರಾತ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಹಾ 11 ರನ್, ಶುಬ್ ಮನ್ ಗಿಲ್ 0, ವಿಜಯ ಶಂಕರ್ 0, ಮತ್ತು ಅಭಿನವ್ ಮನೋಹರ್ 12 ರನ್ ಗಳಿಸುವ ಮೂಲಕ ಗುಜರಾತ್ ಬ್ಯಾಟಿಂಗ್ ವೈಫಲ್ಯ ಕಂಡಿತ್ತು. 12 ನೇ ಓವರ್ ಗೆ 87 ರನ್ ಗೆ 5 ವಿಕೆಟ್ ಕಳೆದುಕೊಂಡು ಗುಜರಾತ್ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಬಂದ ಡೇವಿಡ್ ಮಿಲ್ಲರ್ 51 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 8 ಬೌಂಡರಿಗಳ ಮೂಲಕ 94 ರನ್, ಮತ್ತು ರಶೀದ್ ಖಾನ್ 21 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಮೂಲಕ 40 ರನ್ ಗಳಿಸಿ ಗುಜರಾತ್ ಟೈಟನ್ಸ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಿಎಸ್ ಕೆ ಪರ ಬ್ರಾವೋ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದರು.

ಓದಿ : ಸಿಎಸ್​ಕೆ ವಿರುದ್ಧ ಟಾಸ್​ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಗುಜರಾತ್ ಟೈಟನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.