ನವದೆಹಲಿ: 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊದಲ ಪಂದ್ಯಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಭಾರಿ ಹಿನ್ನಡೆ ಅನುಭವಿಸಿದೆ. ಹೌದು, ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಟೂರ್ನಿಯ ಆರಂಭಿಕ ಹಂತದಲ್ಲಿ ಆಡುವುದು ಅನುಮಾನವಾಗಿದೆ. ಜನವರಿಯಲ್ಲಿ ನಡೆದ ಎಸ್ಸಿಜಿ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡಿದ ನಂತರ ಹ್ಯಾಜಲ್‌ವುಡ್ ಗಾಯದ ಸಮಸ್ಯೆಗಳನ್ನು ಎದುರಿಸಿದರು. ಅದು ಅವರನ್ನು ಭಾರತದಲ್ಲಿನ ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಹೊರಗುಳಿಯುವಂತೆ ಮಾಡಿತು.
ಗಾಯ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ಹ್ಯಾಜಲ್‌ವುಡ್: ಮಾಹಿತಿಯ ಪ್ರಕಾರ, ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಭಾರತದಲ್ಲಿನ ಮೊದಲ ಎರಡು ಟೆಸ್ಟ್‌ಗಳಲ್ಲಿ ಅಲಭ್ಯವಾದ ನಂತರ ಸಿಡ್ನಿಗೆ ಮರಳಿದರು. ಐಪಿಎಲ್‌ಗೆ ಪ್ರಯಾಣ ಆರಂಭಿಸುವ ಮೊದಲು, ಆಸ್ಟ್ರೇಲಿಯಾ ಕ್ರಿಕೆಟ್ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಮಾಲೋಚಿಸಲಿದ್ದಾರೆ. 32 ವರ್ಷದ ಆಸ್ಟ್ರೇಲಿಯನ್ ಕ್ರಿಕೆಟರ್, ನಂತರ ಪಂದ್ಯಾವಳಿಯಲ್ಲಿ ಫ್ರಾಂಚೈಸಿಗೆ ಸೇರುವ ನಿರೀಕ್ಷೆಯಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಅವರ 'ಸಾರ್ವಕಾಲಿಕ ಶ್ರೇಷ್ಠ' ಕ್ರಿಕೆಟಿಗರು ಯಾರು ಗೊತ್ತೇ?
ಆರಂಭಿಕ ಪಂದ್ಯದಿಂದ ಹೊರಗುಳಿಯಲಿರುವ ಸ್ಫೋಟಕ ಬ್ಯಾಟ್ಸಮನ್ ಮ್ಯಾಕ್ಸ್‌ವೆಲ್: ಮತ್ತೊಂದು ಪ್ರಮುಖ ಹಿನ್ನಡೆ ಎಂದರೆ, ಗ್ಲೆನ್ ಮ್ಯಾಕ್ಸ್‌ವೆಲ್ ಈ ತಿಂಗಳ ಆರಂಭದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾದ ಕೊನೆಯ ಎರಡು ಓಡಿಐಗಳಿಂದ ಹೊರಗುಳಿದಿದ್ದರು. ಜೊತೆಗೆ ಆರ್‌ಸಿಬಿ ಐಪಿಎಲ್ನ ಆರಂಭಿಕ ಪಂದ್ಯದಿಂದ ಹೊರಗುಳಿವ ಸಾಧ್ಯತೆಯಿದೆ. ರಾಷ್ಟ್ರೀಯ ಆಯ್ಕೆಗಾರ ಜಾರ್ಜ್ ಬೈಲಿ ಪ್ರಕಾರ, ಮ್ಯಾಕ್ಸ್‌ವೆಲ್ ಅವರು ಐಪಿಎಲ್ ಕ್ರಿಕೆಟ್‌ಗೆ ನಿರೀಕ್ಷೆಯಂತೆ ವಾಪಸ್ ಆಗಲಿದ್ದಾರೆ. ಏಪ್ರಿಲ್ 2ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಫಿಟ್ ಆಗಲು ಆರ್‌ಸಿಬಿಯೊಂದಿಗೆ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ.
ಇದನ್ನೂ ಓದಿ: IPL 2023: ನಾಳೆಯಿಂದ ಐಪಿಎಲ್ ಹಬ್ಬ; ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ, ತಮನ್ನಾ ನೃತ್ಯ ಝಲಕ್!
ಆರ್‌ಸಿಬಿಗೆ ಶುರುವಾಗಿ ಭಾರೀ ಟೆನ್ಷನ್: ಅದೇ ಸಮಯದಲ್ಲಿ, ರಣಜಿಯಲ್ಲಿ ಎಂಪಿ ಪರ ಆಡುತ್ತಿರುವ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಹೊರಗುಳಿಯಬಹುದು. ಆರ್‌ಸಿಬಿಯ ಬಲಗೈ ಬ್ಯಾಟ್ಸ್‌ಮನ್ ರಜತ್ ಹಿಮ್ಮಡಿ ಗಾಯದಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಲೀಗ್‌ನ ಮೊದಲಾರ್ಧದಲ್ಲಿಯೇ ಹೊರಗುಳಿಯಬಹುದು ಎಂಬ ಊಹಾಪೋಹಗಳು ವ್ಯಕ್ತವಾಗುತ್ತಿವೆ. ಮಾಹಿತಿ ಪ್ರಕಾರ, ರಜತ್ ಗಾಯದಿಂದ ಚೇತರಿಸಿಕೊಳ್ಳಲು ಸಮಯ ಹಿಡಿಯಲಿದೆ. ಹೀಗಿರುವಾಗ ಆರ್‌ಸಿಬಿ ತಂಡಕ್ಕೆ ಟೆನ್ಷನ್ ಹೆಚ್ಚಾಗುತ್ತಿದೆ.
ಐಪಿಎಲ್ 2023 ಹರಾಜಿನಲ್ಲಿ ಖರೀದಿಸಿದ ಆಟಗಾರರು ಇಲ್ಲಿದೆ ನೋಡಿ: ರೀಸ್ ಟೋಪ್ಲಿ (1.9 ಕೋಟಿ), ಹಿಮಾಂಶು ಶರ್ಮಾ (20 ಲಕ್ಷ), ವಿಲ್ ಜ್ಯಾಕ್ಸ್ (3.2 ಕೋಟಿ), ಮನೋಜ್ ಭಾಂಡಗೆ (20 ಲಕ್ಷ), ರಾಜನ್ ಕುಮಾರ್ (70 ಲಕ್ಷ), ಅವಿನಾಶ್ ಸಿಂಗ್ (60 ಲಕ್ಷ).
ತಂಡದಲ್ಲಿ ಉಳಿದಿರುವ ಆಟಗಾರರು ಲಿಸ್ಟ್: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಶ್ ಪ್ರಭುದೇಸಾಯಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಮಹಿಪಾಲ್ ಲೋಮ್ಮರ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಆಕಾಶ್ ದೀಪ್.
ಇದನ್ನೂ ಓದಿ: ಐಪಿಎಲ್ ಕ್ರಿಕೆಟ್‌ಗೆ ಮರಳುವೆ: ಜಾಹೀರಾತು ವಿಡಿಯೋದಲ್ಲಿ ರಿಷಬ್ ಪಂತ್ ಹೇಳಿಕೆ
ಇದನ್ನೂ ಓದಿ: ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹೊಸ ಜರ್ಸಿ ಅನಾವರಣ: ಏ.2ಕ್ಕೆ ತವರಿನಲ್ಲಿ ಮೊದಲ ಪಂದ್ಯ