ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 59ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ವಿದ್ಯುತ್ ಕಡಿತ ಉಂಟಾಗಿದ್ದರಿಂದ ಡಿಆರ್ಎಸ್ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಚನ್ನೈ ತಂಡದ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ ಪೆವಿಲಿಯನ್ ಕಡೆ ಲಗ್ಗೆ ಹಾಕಿದರು.
ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ - ಚೆನ್ನೈ ನಡುವಿನ ಪಂದ್ಯಕ್ಕೆ ಪವರ್ಕಟ್ ಸಮಸ್ಯೆ ಕಾಡಿದ್ದು, ಮುಂಬೈ ತಂಡದ ಡ್ಯಾನಿಯಲ್ ಸ್ಯಾಮ್ಸ್ ಎಸೆದ ಮೊದಲ ಓವರ್ನ ಎರಡನೇ ಎಸೆತದಲ್ಲೇ ಕಾನ್ವೆ ಎಲ್ಬಿ ಬಲೆಗೆ ಬಿದ್ದರು.
ಈ ವೇಳೆ ಮೈದಾನದಲ್ಲಿದ್ದ ಅಂಪೈರ್ ಔಟ್ ಎಂಬ ತೀರ್ಪು ನೀಡಿದರು. ಈ ವೇಳೆ ಮೂರನೇ ಅಂಪೈರ್ಗೆ ಮನವಿ ಸಲ್ಲಿಕೆ ಮಾಡಲು ಡಿಆರ್ಎಸ್ ಅವಕಾಶವಿದ್ದರೂ, ವಿದ್ಯುತ್ ಕಡಿತದ ಕಾರಣ ಡಿಆರ್ಎಸ್ ತಂತ್ರಜ್ಞಾನ ಬಳಕೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಪೆವಿಲಿಯನ್ ಕಡೆ ಮುಖ ಮಾಡಿದರು. ಹೀಗಾಗಿ, ಪವರ್ ಕಟ್ ಮುಂಬೈ ತಂಡಕ್ಕೆ ವರವಾಗಿ ಪರಿಣಮಿಸಿತು.ಇದರ ಬೆನ್ನಲ್ಲೇ ಮೈದಾನಕ್ಕೆ ಬಂದ ರಾಬಿನ್ ಉತ್ತಪ್ಪ ಕೂಡ ಜಸ್ಪ್ರೀತ್ ಬುಮ್ರಾ ಓವರ್ನಲ್ಲೇ ಎಲ್ಬಿ ಬಲೆಗೆ ಬಿದ್ದರು.
-
No DRS because of a power cut at Wankhede 👀#CSKvsMI #IPL2022 pic.twitter.com/ihwjYdSrF0
— Rajeev Ranjan 2.0 (@Imrranjan) May 12, 2022 " class="align-text-top noRightClick twitterSection" data="
">No DRS because of a power cut at Wankhede 👀#CSKvsMI #IPL2022 pic.twitter.com/ihwjYdSrF0
— Rajeev Ranjan 2.0 (@Imrranjan) May 12, 2022No DRS because of a power cut at Wankhede 👀#CSKvsMI #IPL2022 pic.twitter.com/ihwjYdSrF0
— Rajeev Ranjan 2.0 (@Imrranjan) May 12, 2022
ಇದನ್ನೂ ಓದಿ: ಕಿವೀಸ್ ದಿಗ್ಗಜನಿಗೆ ಮಣೆ: ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗಿ ಬ್ರೆಂಡನ್ ಮೆಕಲಮ್ ಆಯ್ಕೆ
ವ್ಯಾಪಕ ಟ್ರೋಲ್: ವಿಶ್ವದ ಶ್ರೀಮಂತ ಕ್ರಿಕೆಟ್ ನಡೆಯುತ್ತಿದ್ದ ಮೈದಾನದಲ್ಲೂ ಪವರ್ ಕಟ್ ಆಗಿರುವ ವಿಚಾರ ಹೆಚ್ಚು ಟ್ರೋಲ್ಗೊಳಗಾಗಿದೆ. ಕ್ರಿಕೆಟ್ ಅಭಿಮಾನಿಗಳು ಟ್ವಿಟರ್ನಲ್ಲಿ ನೋ ಡಿಆರ್ಎಸ್ ಎಂಬ ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಚೆನ್ನೈ ತಂಡ ಕೇವಲ 97ರನ್ಗಳಿಗೆ ಆಲೌಟ್ ಆಗಿದೆ. ತಂಡದ ಪರ ಧೋನಿ 36ರನ್ಗಳಿಸಿ, ವೈಯಕ್ತಿಕ ಗರಿಷ್ಠ ಸ್ಕೋರ್ರ ಆಗಿ ಹೊರಹೊಮ್ಮಿದರು.