ETV Bharat / sports

ಕೃನಾಲ್ ಪಾಂಡ್ಯ ಜೊತೆ ವೈಮನಸ್ಸು: ಬಹಿರಂಗ ಸ್ಪಷ್ಟನೆ ಕೊಟ್ಟ ದೀಪಕ್ ಹೂಡ

ಸೈಯದ್​ ಮುಸ್ತಾಕ್​ ಅಲಿ ಟೂರ್ನಮೆಂಟ್​ ವೇಳೆ ತಂಡ ಒಟ್ಟಾಗಿ ಸೇರಿದ್ದ ವೇಳೆ ಕೃನಾಲ್​ ತಮ್ಮನ್ನು ಹೀಯಾಳಿಸಿದ್ದಾರೆ ಮತ್ತು ತಮ್ಮ ಜೊತೆಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ದೀಪಕ್​ ಹೂಡ ದೂರು ನೀಡಿದ್ದರು. ನಂತರ ತಂಡವನ್ನು ತ್ಯಜಿಸಿ ರಾಜಸ್ಥಾನ್ ಡೊಮೆಸ್ಟಿಕ್​ ತಂಡ ಸೇರಿದ್ದರು.

ದೀಪಕ್ ಹೂಡ vs ಕೃನಾಲ್ ಪಾಂಡ್ಯ
author img

By

Published : Apr 7, 2022, 5:22 PM IST

ಮುಂಬೈ: ಭಾರತ ತಂಡದ ಆಲ್​ರೌಂಡರ್ ದೀಪಕ್ ಹೂಡ ಮೊದಲ ಬಾರಿಗೆ ತಮ್ಮ ಮತ್ತು ಕೃನಾಲ್​ ಪಾಂಡ್ಯ ಜೊತೆಗಿನ ಸಂಬಂಧ ಹೇಗಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಕಳೆದ ವರ್ಷ ಬರೋಡ ತಂಡದ ಬಯೋಬಬಲ್​ ವೇಳೆ ಈ ಇಬ್ಬರು ಆಟಗಾರರ ನಡುವೆ ವೈಮನಸ್ಸು ಏರ್ಪಟ್ಟಿತ್ತು.

ಸೈಯದ್​ ಮುಸ್ತಾಕ್​ ಅಲಿ ಟೂರ್ನಮೆಂಟ್​ ವೇಳೆ ತಂಡ ಒಟ್ಟಾಗಿ ಸೇರಿದ್ದ ವೇಳೆ ಕೃನಾಲ್​ ತಮ್ಮನ್ನು ಹೀಯಾಳಿಸಿದ್ದಾರೆ ಮತ್ತು ತಮ್ಮ ಜೊತೆಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ದೀಪಕ್​ ದೂರು ನೀಡಿದ್ದರು. ನಂತರ ತಂಡವನ್ನು ತ್ಯಜಿಸಿ ರಾಜಸ್ಥಾನ್ ಡೊಮೆಸ್ಟಿಕ್​ ತಂಡ ಸೇರಿದ್ದರು.

ಆದರೆ ಈ ಜೋಡಿ 2022ರ ಮೆಗಾ ಹರಾಜಿನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದರು. ಆದರೆ ಇಬ್ಬರ ನಡುವೆ ವೈಮಸ್ಸು ಇರುವುದರಿಂದ ಹೇಗೆ ತಂಡದಲ್ಲಿ ಒಟ್ಟಿಗೆ ಆಡಲಿದ್ದಾರೆ, ಇಬ್ಬರ ನಡುವೆ ವಿಷಯಗಳು ಹೇಗೆ ಬದಲಾಗಬಹುದೇ ಎಂಬ ಊಹಾಪೋಹಗಳೆದ್ದಿದ್ದವು, ಆದರೆ ಈ ಜೋಡಿ ಕೊನೆಗೆ ಒಟ್ಟಾಗಿ ತಂಡಕ್ಕೋಸ್ಕರ ಆಡುವ ಮೂಲಕ ದ್ವೇಷವನ್ನು ಮರೆತಿದ್ದಾರೆ.

"ಕೃನಾಲ್ ಪಾಂಡ್ಯ ನನ್ನ ಸಹೋದರನಿದ್ದಂತೆ, ಅಣ್ಣತಮ್ಮಂದಿರು ಜಗಳ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ನಾವಿಬ್ಬರು ಒಂದೇ ಗುರಿಯನ್ನಿಟ್ಟುಕೊಂಡು ಆಡುತ್ತಿದ್ದೇವೆ, ಅದೇನೆಂದರೆ ಲಖನೌ ಸೂಪರ್ ಜೈಂಟ್ಸ್​ಗೆ ಗೆಲುವು ತಂದುಕೊಡುವುದು" ಎಂದು ಖಾಸಗಿ ಮಾಧ್ಯಮದ ಮಾತನಾಡುವ ವೇಳೆ ತಿಳಿಸಿದ್ದಾರೆ.

ಟಿ20 ವಿಶ್ವಕಪ್​ನಲ್ಲಾಡುವುದು ನನ್ನ ಕನಸು: ದೇಶದ ಪ್ರತಿಯೊಬ್ಬ ಕ್ರಿಕೆಟಿಗನಂತೆ ನನಗೂ ಕೂಡ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಕನಸಿದೆ. ಈ ನಿಟ್ಟಿನಲ್ಲಿ ನನ್ನ ಕೆಲಸವೇನೆಂದರೆ ಅತ್ಯುತ್ತಮ ಪ್ರದರ್ಶನ ನೀಡುವುದು. ಉಳಿದಿದ್ದನ್ನೆಲ್ಲಾ ಆಯ್ಕೆಗಾರರು ನಿರ್ಧರಿಸಲಿದ್ದಾರೆ. ನಾನೊಬ್ಬ ಆಲ್​ರೌಂಡರ್​, ಬ್ಯಾಟಿಂಗ್ ಮಾಡುವ ಜೊತೆಗೆ ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ನೀಡುವುದು ನನ್ನ ಗುರಿಯಾಗಿದೆ. ಅದನ್ನು ಬಿಟ್ಟು ಇನ್ನೇನು ಆಲೋಚಿಸುವುದಿಲ್ಲ ಎಂದು ಬರೋಡದ ಆಲ್​ರೌಂಡರ್ ತಿಳಿಸಿದ್ದಾರೆ.

ಇದನ್ನೂ ಓದಿ:ಡೆಲ್ಲಿಗೆ ವಾರ್ನರ್​ ಬಲ, ಲಖನೌ ಮಣಿಸಿ ಗೆಲುವಿನ ಹಳಿಗೆ ಮರಳುವತ್ತ ಕ್ಯಾಪಿಟಲ್ಸ್ ಚಿತ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.