ETV Bharat / sports

IPLನಲ್ಲಿ ಇಂದು: ಡೆಲ್ಲಿ ಕ್ಯಾಪಿಟಲ್ಸ್‌ಗೆ ಉಳಿವಿನ ಹೋರಾಟ, ಪ್ಲೇ ಆಫ್‌ ಮೇಲೆ ಚೆನ್ನೈ ಕಣ್ಣು - ETV Bharath Kannada news

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವೆ ಇಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್​ನ 55ನೇ ಪಂದ್ಯ ನಡೆಯಲಿದೆ.

Chennai Super Kings vs Delhi Capitals 55th Match preview
IPLನಲ್ಲಿ ಇಂದು: ಡೆಲ್ಲಿ ಕ್ಯಾಪಿಟಲ್ಸ್‌ಗೆ ಉಳಿವಿನ ಹೋರಾಟ, ಪ್ಲೇ ಆಫ್‌ ಮೇಲೆ ಚೆನ್ನೈ ಕಣ್ಣು
author img

By

Published : May 10, 2023, 3:49 PM IST

ಚೆನ್ನೈ(ತಮಿಳುನಾಡು): ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಇಂದು ತನ್ನ ತವರಿನ ಅಂಗಳವಾದ ಎಂಎ ಚಿದಂಬರಂ ಸ್ಟೇಡಿಯಂ​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ಸೆಣಸಲಿದೆ. ಚೆನ್ನೈ ಸೂಪರ್ ಕಿಂಗ್ಸ್​​ 11 ಪಂದ್ಯಗಳನ್ನು ಆಡಿದ್ದು, 6 ರಲ್ಲಿ ಗೆದ್ದು 1 ರದ್ದಾದ ಕಾರಣ ಪಾಯಿಂಟ್​ ಪಟ್ಟಿಯಲ್ಲಿ 13 ಅಂಕದಿಂದ ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್​​ ಲೀಗ್​ನಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿದ್ದು, 4ರಲ್ಲಿ ಗೆದ್ದು 8 ಅಂಕದಿಂದ 10ನೇ ಸ್ಥಾನದಲ್ಲಿದೆ.

ಡೆಲ್ಲಿ ಆರಂಭದಿಂದ ಸತತ ಆರು ಪಂದ್ಯಗಳನ್ನು ಹೀನಾಯವಾಗಿ ಸೋತಿತ್ತು, ಕಳೆದೆರಡು ಪಂದ್ಯದಲ್ಲಿ ಉತ್ತಮ ಲಯಕ್ಕೆ ಮರಳಿದ್ದು, ಗುಜರಾತ್​ ಟೈಟಾನ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರನ್ನು ಮಣಿಸಿ ಪ್ಲೇ ಆಫ್​ ಸ್ಪರ್ಧೆಯಲ್ಲಿ ಉಳಿದಿದೆ. ಇನ್ನು ಚೆನ್ನೈ ಉದ್ಘಾಟನಾ ಪಂದ್ಯದ ಸೋಲಿನ ನಂತರ ಲೀಗ್​ನಲ್ಲಿ ಏರಿಳಿತ ಕಂಡರೂ ಪ್ಲೇ ಆಫ್​ ಪ್ರವೇಶಕ್ಕೆ ಹತ್ತಿರದಲ್ಲಿದೆ. ಇನ್ನು ಎರಡು ಗೆಲುವು ಕಂಡಲ್ಲಿ ಧೋನಿ ಪಾಳಯ ನಾಲ್ಕರ ಸ್ಥಾನದಲ್ಲಿ ಭದ್ರವಾಗಿರಲಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ಇನ್ನು ಮುಂದಿನ ಪಂದ್ಯಗಳಲ್ಲಿ ಎರಡು ಬಾರಿ ಪಂಜಾಬ್​ ಹಾಗೂ ಚೆನ್ನೈಯನ್ನು ಎದುರಿಸಲಿದೆ. ಇಂದು ಸೂಪರ್​ ಕಿಂಗ್ಸ್​ ಜೊತೆಗೆ ಆಡಿದ ನಂತರ ಡೆಲ್ಲಿ ಇದೇ 20 ರಂದು ಮತ್ತೆ ಧೋನಿ ಪಾಳಯವನ್ನೇ ಎದುರಿಸಲಿದೆ. ಅದರ ಜೊತೆಗೆ ಮೇ 13 ಕ್ಕೆ ಮತ್ತು 17 ಕ್ಕೆ ಪಂಜಾಬ್ ಜೊತೆ ಮುಖಾಮುಖಿ ಆಗಬೇಕಿದೆ. ಡೆಲ್ಲಿಗೆ ಈ ನಾಲ್ಕು ಪಂದ್ಯಗಳ ಗೆಲುವು ಪ್ರಮುಖವಾಗಿದೆ.

ಚೆನ್ನೈ ಕಳೆದ ಪಂದ್ಯವನ್ನು ಮುಂಬೈ ವಿರುದ್ಧ ಆಡುವಾಗಲೇ ಬೆನ್ ಸ್ಟೋಕ್ಸ್ ತಂಡವನ್ನು ಸೇರಲಿದ್ದಾರೆ ಎನ್ನಲಾಗಿತ್ತು, ಆದರೆ ಆಡಿರಲಿಲ್ಲ. ಈ ಪಂದ್ಯಕ್ಕೂ ಮುನ್ನ ಹಸ್ಸಿ ಬೆನ್ ಸ್ಟೋಕ್ಸ್ ಫಿಟ್​ ಆಗಿದ್ದಾರೆ ಎಂದಿರುವುದು ಅವರು ಕಣಕ್ಕಿಳಿಯುವ ಮುನ್ನೂಚನೆಯಾಗಿದೆ. ಕೊನೆಯ ಮೂರು ಪಂದ್ಯಗಳು ಚೆನ್ನೈನ ಮುಂದಿದ್ದು ಈ ಸಂದರ್ಭಕ್ಕೂ ಕೀ ಪ್ಲೇಯರ್​ ತಂಡದಲ್ಲಿ ಆಡದೇ ಹೋದಲ್ಲಿ ಕೋಟಿ ಕೊಟ್ಟು ಖರೀದಿಸಿದ್ದು ವ್ಯರ್ಥವಾದಂತಾಗಲಿದೆ.

ಚೆನ್ನೈ ತಂಡವು ತನ್ನ ಮುಂಬೈ ಇಂಡಿಯನ್ಸ್ ವಿರುದ್ಧ ಬೌಲಿಂಗ್ ಬಲದಿಂದ ಗೆದ್ದುಕೊಂಡಿತ್ತು, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ದೀಪಕ್ ಚಾಹರ್ ಹಾಗೂ ಅನುಭವಿ ಸ್ಪಿನ್ನರ್ ರವೀಂದ್ರ ಜಡೇಜಾ ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಚೆನ್ನೈ ಬೌಲಿಂಗ್ ಪಡೆಗೆ ಡೆಲ್ಲಿ ತಂಡದ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್, ವಾರ್ನರ್, ಮಿಚೆಲ್ ಮಾರ್ಷ್ ಮತ್ತು ರಿಲಿ ರುಸೋ ಅವರು ಕಠಿಣ ಸವಾಲೊಡ್ಡುವ ಸಾಧ್ಯತೆ ಇದೆ.

ಸಂಭಾವ್ಯ ತಂಡಗಳು ಇಂತಿವೆ..: ಚೆನ್ನೈ ಸೂಪರ್ ಕಿಂಗ್ಸ್​​: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ/ವಿಕೆಟ್​ ಕೀಪರ್​), ದೀಪಕ್ ಚಾಹರ್, ಮಹೇಶ್ ತೀಕ್ಷ್ಣ, ಮಥೀಶ ಪತಿರಣ, ತುಷಾರ್ ದೇಶಪಾಂಡೆ (ಇಂಪ್ಯಾಕ್ಟ್​​ ಪ್ಲೇಯರ್​​: ಅಂಬಟಿ ರಾಯುಡು)

ಡೆಲ್ಲಿ ಕ್ಯಾಪಿಟಲ್ಸ್‌​​: ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್​ ಕೀಪರ್​), ಮಿಚೆಲ್ ಮಾರ್ಷ್, ರಿಲೀ ರೊಸೊವ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್ (ಇಂಪ್ಯಾಕ್ಟ್​​ ಪ್ಲೇಯರ್: ಲಲಿತ್ ಯಾದವ್)

ಪಂದ್ಯ ಸಂಜೆ 7:30ಕ್ಕೆ ಚೆನ್ನೈನ ಚೆಪಾಕ್​ ಕ್ರೀಡಾಂಗಣದಿಂದ ನೇರಪ್ರಸಾರವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೊ ಸಿನೆಮಾ ಆ್ಯಪ್ ಲಭ್ಯವಿದೆ.

ಇದನ್ನೂ ಓದಿ: IPL: ವಾಂಖೆಡೆಯಲ್ಲಿ 'ಸೂರ್ಯ' ಶಿಖಾರಿ​; ಮುಂಬೈಗೆ ಮಣಿದು ಪ್ಲೇ ಆಫ್‌ ಸಂಕಷ್ಟಕ್ಕೆ ಸಿಲುಕಿದ ಆರ್​ಸಿಬಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.