ಚೆನ್ನೈ (ತಮಿಳುನಾಡು): ಚೆನ್ನೈ ಸೂಪರ್ ಕಿಂಗ್ಸ್ ತಂಡದ 200ನೇ ಪಂದ್ಯ ಮುನ್ನಡೆಸುತ್ತಿರುವ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಐಸಿಸಿ ಮಾಜಿ ಅಧ್ಯಕ್ಷ ಮತ್ತು ಮಾಜಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಸ್ಮರಣಿಕೆ ನೀಡಿದರು. ಚೆಪಾಕ್ ಕ್ರೀಡಾಂಗಣದಲ್ಲಿಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ಎದುರಿಸುತ್ತಿದ್ದು, ಇದರ ನಾಯಕತ್ವದ ಮೂಲಕ ಧೋನಿ ಒಂದೇ ಫ್ರಾಂಚೈಸಿಯ 200 ಪಂದ್ಯಗಳ ಮುಂದಾಳತ್ವ ವಹಿಸಿದ ದಾಖಲೆ ಬರೆದರು.
ಧೋನಿಗೆ ಸ್ಮರಣಿಕೆ ನೀಡುವ ವೇಳೆ ಎನ್. ಶ್ರೀನಿವಾಸನ್ ಅವರ ಪತ್ನಿ ಚಿತ್ರಾ ಶ್ರೀನಿವಾಸನ್ ಮತ್ತು ಪುತ್ರಿ ರೂಪಾ ಗುರುನಾಥ್ ಉಪಸ್ಥಿತರಿದ್ದರು. ಪಂದ್ಯದ ಟಾಸ್ಗೂ ಮುನ್ನ ಧೋನಿಯನ್ನು ಗೌರವಿಸಲಾಯಿತು. 15 ಆವೃತ್ತಿಯ ನೆನಪಿಗಾಗಿ ತಲಾ 200 ಎಂದು ಬರೆದಿರುವ ಸ್ಮರಣಿಕೆ ಕೊಡಲಾಯಿತು.
-
Mr N Srinivasan, former Chairman of the ICC, former President of BCCI and TNCA, Mrs. Chitra Srinivasan and Mrs Rupa Gurunath present @msdhoni with a special memento commemorating the very special 200th 👏#TATAIPL | #CSKvRR | @ChennaiIPL pic.twitter.com/nixs6qsq2P
— IndianPremierLeague (@IPL) April 12, 2023 " class="align-text-top noRightClick twitterSection" data="
">Mr N Srinivasan, former Chairman of the ICC, former President of BCCI and TNCA, Mrs. Chitra Srinivasan and Mrs Rupa Gurunath present @msdhoni with a special memento commemorating the very special 200th 👏#TATAIPL | #CSKvRR | @ChennaiIPL pic.twitter.com/nixs6qsq2P
— IndianPremierLeague (@IPL) April 12, 2023Mr N Srinivasan, former Chairman of the ICC, former President of BCCI and TNCA, Mrs. Chitra Srinivasan and Mrs Rupa Gurunath present @msdhoni with a special memento commemorating the very special 200th 👏#TATAIPL | #CSKvRR | @ChennaiIPL pic.twitter.com/nixs6qsq2P
— IndianPremierLeague (@IPL) April 12, 2023
ಭಾರತದ ಮಾಜಿ ನಾಯಕ ಧೋನಿ 200 ಪಂದ್ಯಗಳಲ್ಲಿ ಒಂದೇ ತಂಡವನ್ನು ಮುನ್ನಡೆಸಿದ ಮೊದಲ ಕ್ರಿಕೆಟಿಗ. ಈ ಆವೃತ್ತಿಯಲ್ಲಿ ಇಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಮುಂದಾಳತ್ವದಿಂದ ವಿನೂತನ ದಾಖಲೆ ಬರೆದಿದ್ದಾರೆ. ಮಿಲಿಯನ್ ಡಾಲರ್ ಕ್ರಿಕೆಟ್ ಲೀಗ್ನ ಯಶಸ್ವಿ ನಾಯಕ ಧೋನಿ. ಚೆನ್ನೈ ಸೂಪರ್ ಕಿಂಗ್ಸ್ ಇವರ ಮುಂದಾಳತ್ವದಲ್ಲಿ 4 ಬಾರಿ ಪ್ರಶಸ್ತಿ ಗೆದ್ದರೆ, 5 ಬಾರಿ ರನ್ನರ್ ಅಪ್ ಆಗಿದೆ. 13 ಆವೃತ್ತಿಯಲ್ಲಿ 11 ಬಾರಿ (ಎರಡು ಆವೃತ್ತಿ ತಂಡ ಬ್ಯಾನ್ ಆಗಿತ್ತು) ಚೆನ್ನೈ ಅಂಕ ಪಟ್ಟಿಯ ಅಗ್ರ ನಾಲ್ಕರಲ್ಲಿತ್ತು.
ಮಹೇಂದ್ರ ಸಿಂಗ್ ಧೋನಿ 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಚೆನ್ನೈ ಸೂಪರ್ ಕಿಂಗ್ಸನ್ನು ಪ್ರತಿನಿಧಿಸುತ್ತಿದ್ದಾರೆ. 2016 ಮತ್ತು 17 ರಲ್ಲಿ ಚೆನ್ನೈ ಬೆಟ್ಟಿಂಗ್ ಆರೋಪದ ಹಿನ್ನೆಲೆಯಲ್ಲಿ ಬ್ಯಾನ್ ಆದ ಕಾರಣ ರೈಸಿಂಗ್ ಪುಣೆ ಸೂಪರ್ ಜೈಟ್ಸ್ನಲ್ಲಿ ಆಡಿದ್ದರು. 2016 ರ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸುಪರ್ ಜೈಂಟ್ಸ್ನ ನಾಯಕತ್ವವನ್ನೂ ವಹಿಸಿಕೊಂಡಿದ್ದರು.
-
Two-Hundred more reasons to whistle for Namma Thala 💛#Thala200 #WhistlePodu 🦁 pic.twitter.com/ajapuZrzrX
— Chennai Super Kings (@ChennaiIPL) April 12, 2023 " class="align-text-top noRightClick twitterSection" data="
">Two-Hundred more reasons to whistle for Namma Thala 💛#Thala200 #WhistlePodu 🦁 pic.twitter.com/ajapuZrzrX
— Chennai Super Kings (@ChennaiIPL) April 12, 2023Two-Hundred more reasons to whistle for Namma Thala 💛#Thala200 #WhistlePodu 🦁 pic.twitter.com/ajapuZrzrX
— Chennai Super Kings (@ChennaiIPL) April 12, 2023
ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ನ ಮುಂದಾಳತ್ವವನ್ನು ಆಲ್ ರೌಂಡರ್ ರವೀಂದ್ರ ಜಡೇಜಾ ಅವರಿಗೆ ಕೊಡಲಾಗಿತ್ತು. ಆದರೆ ಸತತ ಸೋಲು ಕಂಡಿದ್ದರಿಂದ ನಾಯಕತ್ವವನ್ನು ಮತ್ತೆ ಧೋನಿಗೆ ಬಿಟ್ಟುಕೊಟ್ಟಿದ್ದರು. ಕಳೆದ ವರ್ಷ ಚೆನ್ನೈ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. 14 ಪಂದ್ಯದಲ್ಲಿ ಕೇವಲ 4ನ್ನು ಗೆದ್ದು 8 ಅಂಕದಿಂದ 9ನೇ ಸ್ಥಾನದಲ್ಲಿತ್ತು.
ಈ ಆವೃತ್ತಿಯಲ್ಲಿ ಚೆನ್ನೈ ಮೂರು ಪಂದ್ಯದಲ್ಲಿ ಒಂದನ್ನು ಸೋತು ಎರಡರಲ್ಲಿ ಗೆದ್ದಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋಲನುಭವಿಸಿತ್ತು. ನಂತರದ ಎರಡು ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಮಣಿಸಿತ್ತು.
ಇದನ್ನೂ ಓದಿ: CSK vs RR: ಬಟ್ಲರ್ 3000 ರನ್ ಮೈಲಿಗಲ್ಲು, ಚೆನ್ನೈಗೆ 176 ರನ್ನ ಸಾಧಾರಣ ಗುರಿ