ಲಂಡನ್: ಭಾರತದ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ವೇಗಿ ಜೋಫ್ರಾ ಆರ್ಚರ್ ಈಗಾಗಲೇ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಂಡಿದ್ದು, ತರಬೇತಿ ಪುನಾರಂಭಿಸಿದ್ದಾರೆ.
ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಸ್ಟಾರ್ ವೇಗಿ ಈಗಾಗಲೇ ತರಬೇತಿ ಪುನಾರಂಭಿಸಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯಿಂದ ಅವಕಾಶ ಪಡೆದುಕೊಂಡಿದ್ದಾರೆ. ಈ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆದಷ್ಟು ಬೇಗ ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಪುನಶ್ಚೇತನಕ್ಕೊಳಗಾದ ಆರ್ಚರ್: ಐಪಿಎಲ್ ಸಮಯಕ್ಕೆ ಚೇತರಿಕೆ ಸಾಧ್ಯತೆ ಕಡಿಮೆ
ಆದರೆ, ಸ್ಪರ್ಧಾತ್ಮಕ ಕ್ರಿಕೆಟ್ಗೆ ಅವರು ಯಾವಾಗ ಮರಳುತ್ತಾರೆ ಎಂಬ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ. ಅಭ್ಯಾಸ ಆರಂಭಿಸಿರುವ ಕಾರಣ ಆದಷ್ಟು ಬೇಗ ಐಪಿಎಲ್ ತಂಡದ ಭಾಗವಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಮಾರ್ಚ್ 29ರಂದು ಬಲಗೈ ಶಸ್ತ್ರಚಿಕಿತ್ಸೆಗೊಳಗಾಗಿರುವ ಜೋಫ್ರಾ ಆರ್ಚರ್, ಈಗಾಗಲೇ ಚೇತರಿಸಿಕೊಂಡಿರುವ ಕಾರಣ ತರಬೇತಿ ಪ್ರಾರಂಭಿಸಿದ್ದಾರೆ.
ಈಗಾಗಲೇ ಸಸೆಕ್ಸ್ ಮತ್ತು ಇಂಗ್ಲೆಂಡ್ ವೈದ್ಯಕೀಯ ತಂಡಗಳೊಂದಿಗೆ ಸಲಹೆ ಪಡೆದುಕೊಳ್ಳುತ್ತಿದ್ದು, ಮುಂದಿನ ವಾರ ನೆಟ್ನಲ್ಲಿ ಬೌಲಿಂಗ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದ ಜೋಫ್ರಾ ಆರ್ಚರ್ ತಂಡದಲ್ಲಿ ಇಲ್ಲದಿರುವುದು ದೊಡ್ಡ ಹೊಡೆತ ಎಂದು ರಾಜಸ್ಥಾನ ರಾಯಲ್ಸ್ ಕ್ರಿಕೆಟ್ನ ನಿರ್ದೇಶಕ ಕುಮಾರ್ ಸಂಗಕ್ಕರ್ ಒಪ್ಪಿಕೊಂಡಿದ್ದರು.