ಚೆನ್ನೈ: ಐಪಿಎಲ್ನ 6ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಕಾದಾಡಲಿವೆ. ಇಂದಿನ ಪಂದ್ಯದಲ್ಲಿ ರಶೀದ್ ಖಾನ್ ಆರ್ಸಿಬಿಯ ಸ್ಫೋಟಕ ದಾಂಡಿಗರಾದ ಎಬಿಡಿ ಮತ್ತು ಮ್ಯಾಕ್ಸ್ವೆಲ್ಗೆ ಯಾವ ರೀತಿ ಸವಾಲಾಗಲಿದ್ದಾರೆ ಎಂಬುದು ಕುತೂಹಲಕಾರಿ ಅಂಶವಾಗಿದೆ.
ಆರ್ಸಿಬಿ ತನ್ನ ಮೊದಲ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ತೋರಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸಿದರೆ, ಸನ್ ರೈಸರ್ಸ್ ಹೈದರಾಬಾದ್ ತಂಡ ಕೆಕೆಆರ್ ವಿರುದ್ಧ 10 ರನ್ಗಳ ಸೋಲು ಕಂಡಿದೆ.
ಆರ್ಸಿಬಿ ಕಳೆದ ಕೆಲವು ವರ್ಷಗಳಿಂದ ಸಮಸ್ಯೆಯಾಗಿದ್ದ ಡೆತ್ ಓವರ್ ಸಮಸ್ಯೆಯನ್ನು ಹರ್ಷೆಲ್ ಪಟೇಲ್ ಮತ್ತು ಜೆಮೀಸನ್ ಸೇರ್ಪಡೆಯಿಂದ ಸರಿದೂಗಿಸಿಕೊಂಡಿದೆ. ಮ್ಯಾಕ್ಸ್ವೆಲ್ ಮತ್ತು ಕ್ರಿಸ್ಚಿಯನ್ ಮಧ್ಯಮ ಕ್ರಮಾಂಕದ ಬಲ ತುಂಬಲಿದ್ದಾರೆ. ಸ್ವತಃ ಕೊಹ್ಲಿಯೇ ಆರಂಭಿಕನಾಗಿರುವುದರಿಂದ ತಂಡ ಉತ್ತಮ ಆರಂಭ ಸಾಧಿಸಲು ನೆರವಾಗಿದೆ. ಆರಂಭಿಕರು ಮತ್ತಯ ಮಧ್ಯಮ ಕ್ರಮಾಂಕ ಬಲಿಷ್ಠವಾಗಿರುವುದರಿಂದ ಎಬಿಡಿ ಯಾವುದೇ ಕ್ರಮಾಂಕದಲ್ಲಾದರೂ ಒತ್ತಡವಿಲ್ಲದೆ ಲೀಲಾಜಾಲವಾಗಿ ಬ್ಯಾಟ್ ಬೀಸಲು ಸಿದ್ಧರಿದ್ದಾರೆ. ಜೊತೆಗೆ ಕೊರೊನಾದಿಂದ ಚೇತರಿಸಿಕೊಂಡಿರುವ ದೇವದತ್ ಪಡಿಕ್ಕಲ್ ಇಂದು ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
-
When you realise tomorrow is matchday🤟✊#PlayBold #WeAreChallengers #IPL2021 pic.twitter.com/UWn1Asakh6
— Royal Challengers Bangalore (@RCBTweets) April 13, 2021 " class="align-text-top noRightClick twitterSection" data="
">When you realise tomorrow is matchday🤟✊#PlayBold #WeAreChallengers #IPL2021 pic.twitter.com/UWn1Asakh6
— Royal Challengers Bangalore (@RCBTweets) April 13, 2021When you realise tomorrow is matchday🤟✊#PlayBold #WeAreChallengers #IPL2021 pic.twitter.com/UWn1Asakh6
— Royal Challengers Bangalore (@RCBTweets) April 13, 2021
ಇತ್ತ ಸನ್ ರೈಸರ್ಸ್ ಹೈದರಾಬಾದ್ ಕೂಡ ಸಮತೋಲನ ತಂಡವಾಗಿದ್ದರೂ ಅವರ ಯೋಜನೆಗಳು ಫಲಪ್ರದವಾಗಿಲ್ಲ. ಮೊದಲ ಪಂದ್ಯದಲ್ಲಿ ಬೇಗ ವಿಕೆಟ್ ಕಳೆದುಕೊಂಡರೂ ಅದ್ಭುತವಾಗಿ ಹಿಂತಿರುಗಿದ್ದರು. ಆದರೆ ಕೊನೆಯಲ್ಲಿ ತಮ್ಮ ನಿಧಾನಗತಿ ಆಟದಿಂದ ಗೆಲ್ಲುವ ಪಂದ್ಯವನ್ನು ಕಳೆದುಕೊಂಡಿದ್ದರು. ಇನ್ನು ನಾಯಕ ವಾರ್ನರ್ ಮತ್ತು ಆರಂಭಿಕ ಆಟಗಾರ ಸಹಾ ಕೂಡ ವಿಫಲರಾಗಿದ್ದರು. ಇದೀಗ ಆರ್ಸಿಬಿ ವಿರುದ್ಧ ಫಾರ್ಮ್ ಕಂಡುಕೊಂಡು ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಯುವ ಆಟಗಾರ ಸಮದ್ರನ್ನು ಇಂದಿನ ಪಂದ್ಯದಲ್ಲಿ 4 ಅಥವಾ 5ನೇ ಕ್ರಮಾಂಕದಲ್ಲಿ ಆಡಿಸುವ ಸಾಧ್ಯತೆಯಿದೆ.
ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಸಂದೀಪ್ ಶರ್ಮಾ ಬದಲಿಗೆ ಶಹಬಾಜ್ ನದೀಮ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಮುಖಾಮುಖಿ
-
Our past against RCB looks 🔝
— SunRisers Hyderabad (@SunRisers) April 14, 2021 " class="align-text-top noRightClick twitterSection" data="
Time to keep at it 💪🏻#SRHvRCB #OrangeOrNothing #OrangeArmy #IPL2021 pic.twitter.com/I9CH3sKRV5
">Our past against RCB looks 🔝
— SunRisers Hyderabad (@SunRisers) April 14, 2021
Time to keep at it 💪🏻#SRHvRCB #OrangeOrNothing #OrangeArmy #IPL2021 pic.twitter.com/I9CH3sKRV5Our past against RCB looks 🔝
— SunRisers Hyderabad (@SunRisers) April 14, 2021
Time to keep at it 💪🏻#SRHvRCB #OrangeOrNothing #OrangeArmy #IPL2021 pic.twitter.com/I9CH3sKRV5
ಎರಡು ತಂಡಗಳು ಒಟ್ಟು 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಹೈದರಾಬಾದ್ 10ರಲ್ಲಿ, ಆರ್ಸಿಬಿ 7ರಲ್ಲಿ ಜಯ ಸಾಧಿಸಿದೆ. ಒಂದು ಒಂದ್ಯ ರದ್ದಾಗಿದೆ.
ಎಸ್ಆರ್ಹೆಚ್: ಸಂಭವನೀಯ ತಂಡ
ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಹಾ (ವಿಕೀ), ಮನೀಶ್ ಪಾಂಡೆ, ಜಾನಿ ಬೈರ್‌ಸ್ಟೋವ್, ಜೇಸನ್ ಹೋಲ್ಡರ್ / ಮೊಹಮ್ಮದ್ ನಬಿ, ವಿಜಯ್ ಶಂಕರ್, ಅಬ್ದುಲ್ ಸಮದ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಶಹಬಾಜ್ ನದೀಮ್ / ಸಂದೀಪ್ ಶರ್ಮಾ.
ಆರ್ಸಿಬಿ ಸಂಭವನೀಯ ತಂಡ
ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿ ವಿಲಿಯರ್ಸ್ (ವಿಕೀ), ವಾಷಿಂಗ್ಟನ್ ಸುಂದರ್, ಡೇನಿಯಲ್ ಕ್ರಿಶ್ಚಿಯನ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್.