ಚೆನ್ನೈ: ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ಭಾನುವಾರ ಐಪಿಎಲ್ನಲ್ಲಿ ವೇಗವಾಗಿ 1000 ರನ್ ಪೂರೈಸಿದ 4 ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೈರ್ಸ್ಟೋವ್ ಈ ಮೈಲಿಗಲ್ಲು ತಲುಪಿದ್ದಾರೆ. ಅವರು ಈ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ 38 ರನ್ ಸಿಡಿಸಿದ್ದರು. ಇಂಗ್ಲೀಷ್ ಬ್ಯಾಟ್ಸ್ಮನ್ 26 ಇನ್ನಿಂಗ್ಸ್ಗಳಲ್ಲಿ ಐಪಿಎಲ್ನಲ್ಲಿ 1000 ರನ್ ಪೂರೈಸಿದ್ದಾರೆ.
ಆಸ್ಟ್ರೇಲಿಯನ್ ಬ್ಯಾಟ್ಸ್ಮನ್ ಶಾನ್ ಮಾರ್ಷ್ ವೇಗವಾಗಿ 1000 ರನ್ಗಳಿಸಿದ ದಾಖಲೆ ಹೊಂದಿದ್ದಾರೆ. ಅವರು 21 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದರು. ವೆಸ್ಟ್ ಇಂಡೀಸ್ ಬ್ಯಾಟ್ಸ್ಮನ್ ಲೆಂಡ್ಲ್ ಸಿಮನ್ಸ್ 23 ಇನ್ನಿಂಗ್ಸ್ ಮತ್ತು ಮ್ಯಾಥ್ಯೂ ಹೇಡನ್ 25 ಇನ್ನಿಂಗ್ಸ್ಗಳಲ್ಲಿ 1000 ರನ್ ಪೂರೈಸಿದ್ದರು.
ಭಾರತೀಯರಲ್ಲಿ ಸಚಿನ್ ತೆಂಡೂಲ್ಕರ್(31), ಸುರೇಶ್ ರೈನಾ(33), ರಿಷಭ್ ಪಂತ್ (35) ಗೌತಮ್ ಗಂಭೀರ್(36) ರೋಹಿತ್ ಮತ್ತು ಧೋನಿ 37 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ತಂಡ 159 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಹೈದರಾಬಾದ್ ತಂಡವೂ 159 ರನ್ಗಳಿಸಿ ಟೈ ಸಾಧಿಸಿತು. ಆದರೆ, ಸೂಪರ್ ಓವರ್ನಲ್ಲಿ ಎಸ್ಆರ್ಹೆಚ್ ಕೇವಲ 7 ರನ್ಗಳಿಸಿತ್ತು. ಡೆಲ್ಲಿ 6 ಎಸೆತಗಳಲ್ಲಿ 8 ರನ್ಗಳಿಸಿ ಜಯ ಸಾಧಿಸಿತು. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ( ಅಜೇಯ 66) ಏಕಾಂಗಿ ಹೋರಾಟ ವ್ಯರ್ಥವಾಯಿತು.
ಇದನ್ನು ಓದಿ:ಹೋಗುವವರೆಲ್ಲ ಹೋಗಲಿ, ಆದ್ರೆ ಐಪಿಎಲ್ ವೇಳಾಪಟ್ಟಿಯಂತೆ ಮುಂದುವರಿಯಲಿದೆ: ಬಿಸಿಸಿಐ