ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ವ್ಯಾಪಾರ ಉದ್ಯಮ ಮತ್ತು ಬ್ರಾಂಡ್ ಮೌಲ್ಯಗಳ ಕುರಿತು ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕೆ ತನ್ನ ಪ್ರಥಮ ವರದಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಐಪಿಎಲ್‌ನ ಏಕೈಕ ಬ್ರಾಂಡ್ ಮೌಲ್ಯವು ಈಗ 3.2 ಬಿಲಿಯನ್ ಡಾಲರ್ ಆಗಿದೆ. 2022ರಲ್ಲಿ ಇದ್ದ 1.8 ಬಿಲಿಯನ್ ಡಾಲರ್ಗೆ ಹೋಲಿಸಿದರೆ ಇದು ಶೇಕಡಾ 80ರಷ್ಟು ಹೆಚ್ಚಾಗಿದೆ.
ಹಾಗೆಯೇ IPL ನ ವ್ಯಾಪಾರ ಉದ್ಯಮ (business enterprise) ಮೌಲ್ಯವು 15.4 ಶತಕೋಟಿ ಡಾಲರ್ ಆಗಿದೆ. ಇದು 2022 ರಲ್ಲಿ ಇದ್ದ 8.5 ಶತಕೋಟಿ ಡಾಲರ್ಗಳಿಂದ ಶೇಕಡಾ 80 ರಷ್ಟು ಹೆಚ್ಚಾಗಿದೆ. ಮುಖ್ಯವಾಗಿ 2023-2027 ರ ಅವಧಿಗೆ ವಯಾಕಾಮ್ 18 ಮತ್ತು ಡಿಸ್ನಿ ಸ್ಟಾರ್ ಜೊತೆಗೆ ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಭಾವದಿಂದಾಗಿ ಇದು ಸಾಧ್ಯವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ 212 ಮಿಲಿಯನ್ ಡಾಲರ್ ಬ್ರ್ಯಾಂಡ್ ಮೌಲ್ಯದೊಂದಿಗೆ ವರ್ಷದಿಂದ ವರ್ಷಕ್ಕೆ ಶೇಕಡಾ 45.2 ರ ದರದಲ್ಲಿ ಬೆಳೆಯುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಬ್ರ್ಯಾಂಡ್ ಶ್ರೇಯಾಂಕ ಮತ್ತು ವ್ಯಾಪಾರ ಉದ್ಯಮ ಮೌಲ್ಯ ಶ್ರೇಯಾಂಕ ಎರಡರಲ್ಲೂ ನಂ. 1 ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 195 ಮಿಲಿಯನ್ ಡಾಲರ್ ಮೌಲ್ಯದ ಬ್ರ್ಯಾಂಡ್ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ.
ರಾಜಸ್ಥಾನ್ ರಾಯಲ್ಸ್ ಬ್ರ್ಯಾಂಡ್ ಮೌಲ್ಯ ವರ್ಷದಿಂದ ವರ್ಷಕ್ಕೆ ಶೇಕಡಾ 103 ರಷ್ಟು ಹೆಚ್ಚಾಗಿದೆ. ವರದಿಯ ಪ್ರಕಾರ, ಐಪಿಎಲ್‌ನ ಅದ್ವಿತೀಯ (ಸ್ಟ್ಯಾಂಡ್ ಅಲೋನ್) ಬ್ರಾಂಡ್ ಮೌಲ್ಯವು ಈಗ 3.2 ಬಿಲಿಯನ್ ಡಾಲರ್ ಆಗಿದೆ. ಇದು 2022 ರಲ್ಲಿ 1.8 ಶತಕೋಟಿ ಡಾಲರ್ ಇದ್ದದ್ದು ಶೇಕಡಾ 80 ರಷ್ಟು ಹೆಚ್ಚಾಗಿದೆ.
ಐಪಿಎಲ್‌ನ ಮಾಧ್ಯಮ ಹಕ್ಕುಗಳು 2008 ರಿಂದ 2023 ರವರೆಗೆ 18 ಪ್ರತಿಶತದಷ್ಟು ಅಸಾಧಾರಣ ಸಿಎಜಿಆರ್ ಮಟ್ಟದ ಬೆಳವಣಿಗೆ ಕಂಡಿವೆ. ಆದರೆ 2017 ಮತ್ತು 2023 ರ ಚಕ್ರಗಳ ನಡುವಿನ absolute terms ನಲ್ಲಿ ಬೆಳವಣಿಗೆಯು 196 ಪ್ರತಿಶತವಾಗಿದೆ.
ಐಪಿಎಲ್‌ನ ಪ್ರಸಾರ ಶುಲ್ಕವನ್ನು ಪ್ರತಿ ಪಂದ್ಯದ ಆಧಾರದ ಮೇಲೆ ವಿಶ್ವದ ಇತರ ವೃತ್ತಿಪರ ಲೀಗ್‌ಗಳೊಂದಿಗೆ ಹೋಲಿಸಿ ನೋಡಿದರೆ, ಈ ಶುಲ್ಕಗಳು ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ (NBA), ಇಂಗ್ಲಿಷ್ ಪ್ರೀಮಿಯರ್ ಲೀಗ್ (EPL) ಮತ್ತು ಬುಂಡೆಸ್ಲಿಗಾದಂತಹವುಗಳಿಗಿಂತ ಹೆಚ್ಚಾಗಿದೆ. ನ್ಯಾಷನಲ್ ಫುಟ್‌ಬಾಲ್ ಲೀಗ್ (NFL) ಪ್ರಸಾರ ಶುಲ್ಕ ದರ ಮಾತ್ರ ಐಪಿಎಲ್ಗಿಂತ ಹೆಚ್ಚಾಗಿದೆ.
"ಆಟಗಾರರನ್ನು ನೇಮಿಸಿಕೊಳ್ಳುವ ಫ್ರಾಂಚೈಸ್ ಆಧಾರಿತ ವ್ಯವಸ್ಥೆಗಳ ಅಮೇರಿಕನ್ ಶೈಲಿಯಲ್ಲಿ ರಚಿಸಲಾಗಿರುವ ಐಪಿಎಲ್ NFL ಮತ್ತು NBA ಮಾದರಿಯಲ್ಲಿಯೇ ಅತ್ಯಂತ ಲಾಭದಾಯಕ ಕ್ರೀಡಾ ಲೀಗ್ ಆಗಿ ಹೊರಹೊಮ್ಮಿದೆ" ಎಂದು ಹೌಲಿಹಾನ್ ಲೋಕೆ ಕಂಪನಿಯ ಕಾರ್ಪೊರೇಟ್ ಮೌಲ್ಯಮಾಪನ ಸಲಹಾ ಸೇವೆಗಳ ಹಿರಿಯ ಉಪಾಧ್ಯಕ್ಷ ಹರ್ಷ್ ತಾಳಿಕೋಟಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : World Economy: ಅಮೆರಿಕ, ಜಪಾನ್, ಜರ್ಮನಿ ಹಿಂದಿಕ್ಕಿ ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ; ಯಾವಾಗ ಗೊತ್ತಾ?