ETV Bharat / sports

ನಾಯಕ ಕಮಿನ್ಸ್​ ಮೀರಿಸಿದ ಸ್ಟಾರ್ಕ್​​: ಮಿಚೆಲ್​ ಮೇಲೆ ಕೆಕೆಆರ್ ​ಐತಿಹಾಸಿಕ ಬಿಡ್​.. ಖರೀದಿಸಿದ್ದು ಎಷ್ಟಕ್ಕೆ ಗೊತ್ತಾ? ​

IPL Auction 2024: ಆಸ್ಟ್ರೇಲಿಯಾದ ಆಟಗಾರರಿಗೆ 2024ರ ಐಪಿಎಲ್​ಗೆ ಬೇಡಿಕೆ ಹೆಚ್ಚಾಗಿದೆ. ಮಿನಿ ಹರಾಜಿನಲ್ಲಿ ಆಸೀಸ್​ ತಂಡದ ಇಬ್ಬರು ಆಟಗಾರರು ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದಾರೆ.

Mitchell Starc
Mitchell Starc
author img

By ETV Bharat Karnataka Team

Published : Dec 19, 2023, 5:36 PM IST

ದುಬೈ: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಮಂಗಳವಾರ ದುಬೈನಲ್ಲಿ ನಡೆದ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿ ರೂ.ಗೆ ಖರೀದಿಸಿತು. ಇದೇ ಹರಾಜಿನಲ್ಲಿ ಆಸೀಸ್​ ನಾಯಲ ಪ್ಯಾಟ್​ ಕಮಿನ್ಸ್​ 20.5 ಕೋಟಿಗೆ ಮಾರಾಟವಾಗಿ ದಾಖಲೆ ಮಾಡಿದ್ದರು ಅವರನ್ನು ಸ್ಟಾರ್ಕ್​​ ಮೀರಿಸಿದ್ದಾರೆ.

2 ಕೋಟಿ ಮೂಲ ಬೆಲೆಗೆ ಆರಂಭವಾದ ಹರಾಜಿಗೆ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪೈಪೋಟಿಗೆ ಇಳಿದವು. ಈ ಎರಡು ತಂಡಗಳು 10 ಕೋಟಿಯ ಬೆಲೆ ದಾಟಿಸಿದವು. ಇದಾದ ನಂತರ ಬಿಡ್​ನ ಕಾವೇರಿಸಿದ್ದು ಗುಜರಾತ್ ಟೈಟಾನ್ಸ್ (ಜಿಟಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್). ಈ ಎರಡೂ ತಂಡಗಳು ಸ್ಟಾರ್ಕ್​​ಗಾಗಿ ಎಷ್ಟಾದರೂ ಮೊತ್ತವನ್ನು ಕೊಡಲು ಸಿದ್ಧ ಇರುವಂತೆ ಬಿಡ್​ ಮಾಡಿದರು. ಉಭಯ ತಂಡಗಳು ಇಂದು ಆರ್​ಸಿಬಿ ಮತ್ತು ಎಸ್​ಆರ್​ಹೆಚ್​ ನಿರ್ಮಿಸಿದ್ದ ದಾಖಲೆಯನ್ನು ಮೀರಿ ಬಿಡ್​ ಮೊತ್ತ ಕೂಗಿದರು. ಜಿಟಿ 24.75 ಕೋಟಿ ರೂ.ಗೆ ಹಿಂದೆ ಸರಿಯಿತು. ಕೆಕೆಆರ್ ಐಪಿಎಲ್​ ಐತಿಹಾಸಿಕ ದಾಖಲೆಯ ಮೊತ್ತಕ್ಕೆ ಸ್ಟಾರ್ಕ್ ಅವರನ್ನು ಖರೀದಿಸಿತು.

20.5 ಕೋಟಿಗೆ ಪ್ಯಾಟ್​: ಇಂದು ನಡೆದ ಬಿಡ್​ನ ಆಲ್ ರೌಂಡರ್ಸ್ ವಿಭಾಗದಲ್ಲಿ ಪ್ಯಾಟ್​ ಕಮಿನ್ಸ್​ ಖರೀದಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿಗಳು ದುಂಬಾಲು ಬಿದ್ದರು. ಇದರಿಂದ 2 ಕೋಟಿಯ ಆರಂಭಿಕ ಮೊತ್ತ ಹೊಂದಿದ್ದ ಕಮಿನ್ಸ್​ 20.5 ಕೋಟಿಯ ವರೆಗೆ ಬಿಡ್​ ಆದರು. 20.50 ಕೋಟಿಗೆ ನಂತರ ಆರ್​ಸಿಬಿ ತನ್ನ ಕರೆಯನ್ನು ಹಿಂಪಡೆಯಿತು. ಎಸ್​ಆರ್​ಹೆಚ್​​ ಆಟಗಾರನನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಹಿಂದಿನ ದಾಖಲೆಯ ಬಿಡ್​ಗಳು: ಕಳೆದ ಆವೃತ್ತಿಗಳಲ್ಲಿ ಆದ ದಾಖಲೆಯ ಬಿಡ್​ಗಳು ಹೀಗಿದೆ.ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕುರನ್ ಅವರಿಗೆ ಪಂಜಾಬ್ ಕಿಂಗ್ಸ್ - ₹18.5 ಕೋಟಿ ಕೊಟ್ಟದ್ದು ಈ ಮೊದಲು ಇದ್ದ ಐಪಿಎಲ್​ ದಾಖಲೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್​ ಮುಂಬೈ ಇಂಡಿಯನ್ಸ್ - ₹ 17.50 ಕೋಟಿ, ಬೆನ್ ಸ್ಟೋಕ್ಸ್ ಚೆನ್ನೈ ಸೂಪರ್ ಕಿಂಗ್ಸ್ - ₹ 16.25 ಕೋಟಿ, ಕ್ರಿಸ್ ಮೋರಿಸ್ ರಾಜಸ್ಥಾನ್ ರಾಯಲ್ಸ್ - ₹ 16.25 ಕೋಟಿ, ಯುವರಾಜ್ ಸಿಂಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು - ₹ 16 ಕೋಟಿ.

ಇದನ್ನೂ ಓದಿ: ಐಪಿಎಲ್​ ಹರಾಜು: ಅಬ್ಬಬ್ಬಾ ಬರೋಬ್ಬರಿ 25ಕೋಟಿಗೆ ಬಿಕರಿಯಾದ ಆಸೀಸ್ ವೇಗಿ ಸ್ಟಾರ್ಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.