ಅಹಮದಾಬಾದ್: 16 ನೇ ಆವೃತ್ತಿಯ ಅದ್ಧೂರಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್, 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು ಭರ್ಜರಿ ಜಯ ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಇಂಪ್ಯಾಕ್ಸ್ ಪ್ಲೇಯರ್ ಬಳಕೆ, ಲೇಸರ್ ಬೆಳಕಿನ ಮೂಲಕ ತಂಡದ ಹೆಸರು, ಕಪ್ನ ಮಾದರಿ ಪ್ರದರ್ಶನ, ನಟಿ ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ಅವರ ನೃತ್ಯ, ಅರಿಜಿತ್ ಸಿಂಗ್ರ ಗಾಯನ ಸೇರಿದಂತೆ ಹಲವು ಮೊದಲಗಳು ದಾಖಲಾದವು.
ಇಂಪ್ಯಾಕ್ಟ್ ಪ್ಲೇಯರ್ ಬಳಕೆ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸದಾಗಿ ಪರಿಚಯಿಸಲಾದ ಇಂಪ್ಯಾಕ್ಸ್ ಪ್ಲೇಯರ್(ಪ್ರಭಾವಿ ಆಟಗಾರ) ಅವಕಾಶವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಳಸಿಕೊಂಡಿತು. ಬಲಗೈ ಮಧ್ಯಮ ವೇಗಿ ತುಷಾರ್ ದೇಶಪಾಂಡೆ ಅವರನ್ನು ಕಣಕ್ಕಿಳಿಸಿತು. ತುಷಾರ್ ಐಪಿಎಲ್ ಇತಿಹಾಸದಲ್ಲಿ ಮೊದಲ 'ಇಂಪ್ಯಾಕ್ಟ್ ಪ್ಲೇಯರ್' ಎನಿಸಿಕೊಂಡರು. ಇದಲ್ಲದೇ, ಗುಜರಾತ್ ಟೈಟಾನ್ಸ್ ಕೂಡ ಸಾಯಿ ಸುದರ್ಶನ್ ಅವರನ್ನು ಬಳಸಿಕೊಂಡಿತು.
ಚೆನ್ನೈ ತಂಡ ಮೊದಲು ಬ್ಯಾಟ್ ಮಾಡಿ 178 ರನ್ಗಳನ್ನು ಕಲೆ ಹಾಕಿತು. ಈ ಮೊತ್ತವನ್ನು ಕಾಪಾಡಿಕೊಳ್ಳಲು ಹೆಚ್ಚುವರಿ ಬೌಲರ್ ಅನ್ನು ಕಣಕ್ಕಿಳಿಸಲು ಉದ್ದೇಶಿಸಿ, ಬ್ಯಾಟ್ ಮಾಡಿದ್ದ ಅಂಬಟಿ ರಾಯುಡು ಬದಲಾಗಿ ತುಷಾರ್ ದೇಶಪಾಂಡೆಯನ್ನು ಇಂಪ್ಯಾಕ್ಟ್ ಪ್ಲೇಯರ್ ನಿಮಯದಡಿ ಆಡಿಸಿತು. ಇದು ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲಾಗಿದೆ.
ಎರಡನೇ ಇಂಪ್ಯಾಕ್ಟ್ ಪ್ಲೇಯರ್: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ನ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ನ್ಯೂಜಿಲೆಂಡ್ ಬ್ಯಾಟರ್ ಬದಲಿಯಾಗಿ ಬಿ.ಸಾಯಿ ಸುದರ್ಶನ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡ ಆಯ್ಕೆ ಮಾಡಿತು. ಇದರಿಂದ ಸುದರ್ಶನ್ ಎರಡನೇ ಪ್ರಭಾವಿ ಆಟಗಾರರಾದರು.
-
Say hello to the 1⃣st-ever Impact Player in the history of the IPL! 👋@TusharD_96 is 🔛 the field, replacing Ambati Rayudu
— IndianPremierLeague (@IPL) March 31, 2023 " class="align-text-top noRightClick twitterSection" data="
Follow the match ▶️ https://t.co/61QLtsnj3J#TATAIPL | #GTvCSK | @ChennaiIPL pic.twitter.com/bkY7IF8Qpa
">Say hello to the 1⃣st-ever Impact Player in the history of the IPL! 👋@TusharD_96 is 🔛 the field, replacing Ambati Rayudu
— IndianPremierLeague (@IPL) March 31, 2023
Follow the match ▶️ https://t.co/61QLtsnj3J#TATAIPL | #GTvCSK | @ChennaiIPL pic.twitter.com/bkY7IF8QpaSay hello to the 1⃣st-ever Impact Player in the history of the IPL! 👋@TusharD_96 is 🔛 the field, replacing Ambati Rayudu
— IndianPremierLeague (@IPL) March 31, 2023
Follow the match ▶️ https://t.co/61QLtsnj3J#TATAIPL | #GTvCSK | @ChennaiIPL pic.twitter.com/bkY7IF8Qpa
ಪ್ರಭಾವ ಬೀರದ ಪ್ಲೇಯರ್ಸ್: ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಉಭಯ ತಂಡಗಳ ತುಷಾರ್ ದೇಶಪಾಂಡೆ ಮತ್ತು ಸಾಯಿ ಸುದರ್ಶನ್ ಪಂದ್ಯದಲ್ಲಿ ಪ್ರಭಾವ ಬೀರಲಿಲ್ಲ. 3.2 ಓವರ್ ಬೌಲ್ ಮಾಡಿದ ದೇಶಪಾಂಡೆ 1 ವಿಕೆಟ್ ಪಡೆದು 51 ರನ್ ನೀಡಿ ದುಬಾರಿಯಾದರು. ಇದರಲ್ಲಿ ತಲಾ 1 ವೈಡ್, ನೋಬಾಲ್ ಎಸೆದರು. ಎರಡನೇ ಇಂಪ್ಯಾಕ್ಟ್ ಪ್ಲೇಯರ್ ಸಾಯಿ ಸುದರ್ಶನ್ ಕೂಡ ಬ್ಯಾಟಿಂಗ್ನಲ್ಲಿ ಕರಾಮತ್ತು ಮಾಡಲಿಲ್ಲ. 17 ಎಸೆತಗಳಲ್ಲಿ 3 ಬೌಂಡರಿಗಳಿಂದ 22 ರನ್ ಮಾತ್ರ ಮಾಡಿದರು.
ಟಾಸ್ ವೇಳೆ ಆಡುವ ಹನ್ನೊಂದು ಆಟಗಾರರಲ್ಲದೇ, ತುಷಾರ್ ದೇಶಪಾಂಡೆ ಸೇರಿದಂತೆ ಸುಭ್ರಾಂಶು ಸೇನಾಪತಿ, ಶೇಕ್ ರಶೀದ್, ಅಜಿಂಕ್ಯ ರಹಾನೆ ಮತ್ತು ನಿಶಾಂತ್ ಸಿಂಧು ಅವರನ್ನು ಚೆನ್ನೈ ತಂಡ ಬದಲಿ ಆಟಗಾರರಾಗಿ ಹೆಸರಿಸಿತ್ತು. ಇನ್ನೊಂದೆಡೆ ಜಯಂತ್ ಯಾದವ್, ಮೋಹಿತ್ ಶರ್ಮಾ, ಅಭಿನವ್ ಮನೋಹರ್, ಕೆ.ಎಸ್. ಭಾರತ್ ಜೊತೆಗೆ ಬಿ. ಸಾಯಿ ಸುದರ್ಶನ್ ಗುಜರಾತ್ ಟೈಟಾನ್ಸ್ನ ಬದಲಿ ಆಟಗಾರರಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನ್ಮೆಂಟ್ನಲ್ಲಿ ಬಿಸಿಸಿಐ ಮೊದಲ ಬಾರಿಗೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಪರಿಚಯಿಸಿತ್ತು. ಈ ನಿಯಮ ಯಶಸ್ವಿಯಾದ ಕಾರಣ 16 ನೇ ಆವೃತ್ತಿಯ ಐಪಿಎಲ್ನಲ್ಲಿ ಬಳಸಲಾಗುತ್ತಿದೆ.