ETV Bharat / sports

ಹೆಟ್ಮಾಯರ್ ಏಕಾಂಗಿ ಹೋರಾಟ... ಲಖನೌಗೆ 166ರನ್​ಗಳ ಸವಾಲಿನ ಗುರಿ ನೀಡಿದ ರಾಯಲ್ಸ್ - ಲಖನೌ ಸೂಪರ್ ಜೈಂಟ್ಸ್

ಹೆಟ್ಮಾಯರ್ ಅರ್ಧಶತಕದ ನೆರವಿನಿಂದ ರಾಯಲ್ಸ್​ ಪಡೆ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ 166ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ

Rajasthan Royals  vs Lucknow updates
Rajasthan Royals vs Lucknow updates
author img

By

Published : Apr 10, 2022, 7:25 PM IST

Updated : Apr 10, 2022, 10:09 PM IST

ಮುಂಬೈ: ಶಿಮ್ರಾನ್ ಹೆಟ್ಮಾಯರ್ ಅವರ ಅರ್ಧಶತಕದ ನೆರವಿನಿಂದ ರಾಜಸ್ಥಾನ್​ ರಾಯಲ್ಸ್ ತನ್ನ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್​ಗಳಿಸಿದೆ.

ಟಾಸ್​ ಸೋತ ರಾಜಸ್ಥಾನ್ ರಾಯಲ್ಸ್​ ಬ್ಯಾಟಿಂಗ್ ಇಳಿದು ನಿರೀಕ್ಷಿತ ಆರಂಭ ಕಾಣಲಿಲ್ಲ. 10 ಓವರ್​ಗಳ ಒಳಗೆ ಇನ್​ಫಾರ್ಮ್​ ಬ್ಯಾಟರ್ ಜಾಸ್ ಬಟ್ಲರ್​(13) ಆರಂಭಿಕನಾಗಿ ಬಡ್ತಿ ಪಡೆದಿದ್ದ ದೇವದತ್ ಪಡಿಕ್ಕಲ್(29), ನಾಯಕ ಸಂಜು ಸಾಮ್ಸನ್​(13), ವ್ಯಾನ್ ಡರ್ ಡಸೆನ್(4) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು.

67ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಒಂದಾದ ಹೆಟ್ಮಾಯರ್ ಮತ್ತು ಅಶ್ವಿನ್​( 23 ಎಸೆತಗಳಲ್ಲಿ28) 65 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ಹೆಟ್ಮಾಯರ್ 36 ಎಸೆತಗಳಲ್ಲಿ 6 ಸಿಕ್ಸರ್​ ಮತ್ತು 1 ಬೌಂಡರಿ ಸಹಿತ ಅಜೇಯ 59 ರನ್​​ಗಳಿಸಿದರು.

ಲಖನೌ ಸೂಪರ್ ಜೈಂಟ್ಸ್ ಪರ ಕೆ ಗೌತಮ್​ 30ಕ್ಕೆ2, ಜೇಸನ್ ಹೋಲ್ಡರ್​ 50ಕ್ಕೆ2 ಮತ್ತು ಆವೇಶ್ ಖಾನ್ 31ಕ್ಕೆ1 ವಿಕೆಟ್ ಪಡೆದುಕೊಂಡರು.

ಟಾಸ್​ ಅಪ್​ಡೇಟ್​: ಐಪಿಎಲ್ 2022ರ 20ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್​ ರಾಯಲ್ಸ್​ ಮುಖಾಮುಖಿಯಾಗುತ್ತಿದ್ದು, ಎಲ್​ಎಸ್​ಜಿ ತಂಡದ ನಾಯಕ ಕೆ.ಎಲ್.ರಾಹುಲ್ ಟಾಸ್​ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಈ ಪಂದ್ಯದಲ್ಲಿ ಲಖನೌ ತಂಡ ಎವಿನ್ ಲೂಯಿಸ್​ ಮತ್ತು ಆ್ಯಂಡ್ರ್ಯೂ ಟೈ ಅವರ ಬದಲಾಗಿ ಮಾರ್ಕಸ್​ ಸ್ಟೋನಿಸ್​ ಮತ್ತು ಚಮೀರಾ ಅವರಿಗೆ ಅವಕಾಶ ನೀಡಿತ್ತು. ರಾಜಸ್ಥಾನ್ ರಾಯಲ್ಸ್ ತಂಡವನ್ನು ಯುವ ಆರಂಭಿಕ ಜೈಸ್ವಾಲ್ ಬದಲಿಗೆ ರಾಸಿ ವ್ಯಾನ್ ಡರ್​ ಡಾಸೆನ್ ಸೇರಿಕೊಂಡಿದ್ದರು.

ಲಖನೌ ತಂಡ ಆಡಿರುವ 4 ಪಂದ್ಯಗಳಲ್ಲಿ 3 ಜಯ ಮತ್ತು 1 ಸೋಲಿನೊಂದಿಗೆ 4ನೇ ಸ್ಥಾನದಲ್ಲಿದ್ದರೆ, ರಾಯಲ್ಸ್ 3 ಪಂದ್ಯಗಳಿಂದ 2 ಗೆಲುವು, ಒಂದು ಸೋಲಿನೊಂದಿಗೆ 5ನೇ ಸ್ಥಾನದಲ್ಲಿದೆ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ಜಾಸ್ ಬಟ್ಲರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ / ಕೀಪರ್), ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಕುಲದೀಪ್ ಸೇನ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಾಹಲ್

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆ.ಎಲ್.ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್ (ಕೀಪರ್), ಮಾರ್ಕಸ್ ಸ್ಟೋನಿಸ್, ದೀಪಕ್ ಹೂಡಾ, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಅವೇಶ್ ಖಾನ್

Last Updated : Apr 10, 2022, 10:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.