ETV Bharat / sports

ರಾಹುಲ್​ ಮತ್ತೊಂದು ಶತಕ: ಮುಂಬೈಗೆ 169 ರನ್​ಗಳ ಸವಾಲಿನ ಗುರಿ ನೀಡಿದ ಲಖನೌ ಸೂಪರ್ ಜೈಂಟ್ಸ್​ - KL Rahul century

ಮುಂಬೈ ಇಂಡಿಯನ್ಸ್​ ವಿರುದ್ಧ ಇಂದಿನ ಪಂದ್ಯದಲ್ಲೂ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಕನ್ನಡಿಗ ಕೆಎಲ್ ರಾಹುಲ್​ ಆಕರ್ಷಕ ಶತಕ ದಾಖಲಿಸಿದರು. ಇದು ಅವರ ಐಪಿಎಲ್ ವೃತ್ತಿ ಜೀವನದ 4ನೇ ಹಾಗೂ ಟಿ20 ಕ್ರಿಕೆಟ್​ನ 6ನೇ ಶತಕ ದಾಖಲಿಸಿದರು.

Lucknow Super Giants vs Mumbai Indians
Lucknow Super Giants vs Mumbai Indians
author img

By

Published : Apr 24, 2022, 7:25 PM IST

Updated : Apr 24, 2022, 9:31 PM IST

ಮುಂಬೈ: ನಾಯಕ ಕೆಎಲ್ ರಾಹುಲ್​ ಅವರ ಅಬ್ಬರದ ಶತಕದ ನೆರವಿನಿಂದ ಲಖನೌ ಸೂಪರ್​ ಜೈಂಟ್ಸ್​ ಎದುರಾಳಿ ಮುಂಬೈ ಇಂಡಿಯನ್ಸ್​ಗೆ 169 ರನ್​ಗಳ ಸವಾಲಿನ ಗುರಿ ನೀಡಿದೆ.

ಕೆಎಲ್ ರಾಹುಲ್ ಎಂದಿನಂತೆ ಮುಂಬೈ ಬೌಲರ್​ಗಳನ್ನು ದಂಡಿಸಿದರು. 62 ಎಸೆತಗಳಲ್ಲಿ 12 ಬೌಂಡರಿ 4 ಸಿಕ್ಸರ್​ಗಳ ಸಹಿತ ಅಜೇಯ 103 ರನ್​ಗಳಿಸಿದರು. ಆದರೆ ರಾಹುಲ್​ಗೆ ತಂಡದ ಇತರೆ ಬ್ಯಾಟರ್​ಗಳಿಂದ ಸೂಕ್ತ ನೆರವು ದೊರೆಯಲಿಲ್ಲ. ಮನೀಶ್ ಪಾಂಡೆ 22 ಎಸೆತಗಳಲ್ಲಿ 22 ರನ್​ಗಳಿಸಿ ಮತ್ತೊಮ್ಮೆ ವಿಫಲರಾದರೆ, ಡಿಕಾಕ್ 10 ರನ್​, ಸ್ಟೋಯಿನಿಸ್​(0), ಕೃನಾಲ್​ ಪಾಂಡ್ಯ(1), ದೀಪಕ್ ಹೂಡ(10) ಮತ್ತು ಬದೋನಿ(14) ಅಲ್ಪ ಮೊತ್ತಕ್ಕೆ ವಿಕೆಟ್​ ಒಪ್ಪಿಸಿದ್ದರಿಂದ ಲಖನೌ ಬೃಹತ್​ ಮೊತ್ತ ದಾಖಲಿಸಲು ವಿಫಲವಾಯಿತು.

ಆಲ್​ರೌಂಡರ್​ ಕೀರನ್​ ಪೊಲಾರ್ಡ್​ ಮನೀಶ್ ಪಾಂಡೆ ಮತ್ತು ಕೃನಾಲ್ ಪಾಂಡ್ಯ ವಿಕೆಟ್​ ಪಡೆಯುವ ಮೂಲಕ ಉತ್ತಮವಾಗಿ ಸಾಗುತ್ತಿದ್ದ ಲಖನೌ ತಂಡಕ್ಕೆ ಬ್ರೇಕ್ ಹಾಕಿದರು. ಉಳಿದಂತೆ ಬೇರೆ ಬ್ಯಾಟರ್​ಗಳು ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಲಿಲ್ಲ. ಬುಮ್ರಾ 31ಕ್ಕೆ1, ಮೆರಿಡಿತ್​ 40ಕ್ಕೆ2 ಮತ್ತು ಸ್ಯಾಮ್ಸ್​ 40ಕ್ಕೆ1 ವಿಕೆಟ್ ಪಡೆದರು.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ಕೀಪರ್), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಹೃತಿಕ್ ಶೋಕಿನ್, ಡೇನಿಯಲ್ ಸಾಮ್ಸ್, ಜಯದೇವ್ ಉನದ್ಕತ್, ರಿಲೆ ಮೆರೆಡಿತ್, ಜಸ್ಪ್ರೀತ್ ಬುಮ್ರಾ

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕ್ವಿಂಟನ್ ಡಿ ಕಾಕ್(ಕೀಪರ್), ಕೆಎಲ್ ರಾಹುಲ್(ನಾಯಕ), ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಆಯುಷ್ ಬದೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಮೊಹ್ಸಿನ್ ಖಾನ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್

Last Updated : Apr 24, 2022, 9:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.