ಮುಂಬೈ : ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ ಐಪಿಎಲ್ ಇತಿಹಾಸದಲ್ಲಿ 100ನೇ ಪಂದ್ಯದಲ್ಲಿ ಶತಕ ಸಿಡಿಸಿ ಏಕೈಕ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಮುಂಬೈನ ಬ್ರಬೊರ್ನ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 199 ರನ್ಗಳಿಸಿದೆ. ನಾಯಕ ಕೆ ಎಲ್ ರಾಹುಲ್ 60 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ಗಳ ಸಹಿತ ಅಜೇಯ 103 ರನ್ಗಳಿಸುವ ಮೂಲಕ 15ನೇ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎನಿಸಿಕೊಂಡರು.
100ನೇ ಪಂದ್ಯದಲ್ಲಿ ಹೆಚ್ಚು ರನ್ : ಐಪಿಎಲ್ ಇತಿಹಾಸದಲ್ಲಿ 100ಕ್ಕೂ ಹೆಚ್ಚು ಪಂದ್ಯಗಳನ್ನಾಡಿರುವ ಸಾಕಷ್ಟು ಆಟಗಾರರಿದ್ದಾರೆ. ಆದರೆ, 100ನೇ ಪಂದ್ಯದಲ್ಲಿ ಶತಕ ಸಿಡಿಸಿದ್ದು ರಾಹುಲ್ ಮಾತ್ರ. ಈ ಹಿಂದೆ ತಮ್ಮ ಶತಕದ ಪಂದ್ಯದಲ್ಲಿ ಸಿಎಸ್ಕೆ ಪರ ಫಾಫ್ ಡು ಪ್ಲೆಸಿಸ್ 2021ರಲ್ಲಿ 86 ರನ್ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಇದೀಗ ಆ ದಾಖಲೆ ರಾಹುಲ್ ಪಾಲಾಗಿದೆ. ಡೇವಿಡ್ ವಾರ್ನರ್(69) ಮತ್ತು ಮುರುಳಿ ವಿಜಯ್ (59) ತಮ್ಮ ನೂರನೇ ಐಪಿಎಲ್ ಪಂದ್ಯದಲ್ಲಿ 50+ ರನ್ಗಳಿಸಿದ ಉಳಿದ ಬ್ಯಾಟರ್ಗಳಾಗಿದ್ದಾರೆ.
ಐಪಿಎಲ್ನಲ್ಲಿ 3ನೇ ಶತಕ : ಐಪಿಎಲ್ ಟೂರ್ನಿಯಲ್ಲಿ 100 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕೆ ಎಲ್ ರಾಹುಲ್ 3 ಶತಕಗಳನ್ನು ಬಾರಿಸಿದ್ದಾರೆ. ಈ ಹಿಂದೆ 2019ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 100 ಮತ್ತು 2020ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಜೇಯ 132 ರನ್ ಗಳಿಸಿದ್ದರು. ವಿಶೇಷವೆಂದರೆ ಮೂರು ಶತಕ ಸಿಡಿಸಿದ ಪಂದ್ಯದಲ್ಲಿ ಅಜೇಯರಾಗಿ ಉಳಿದಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ಪರ ಮೊದಲ ಶತಕ : ಲಖನೌ ಸೂಪರ್ ಜೈಂಟ್ಸ್ 2022ನೇ ಐಪಿಎಲ್ನಲ್ಲಿ ನೂತನ ತಂಡವಾಗಿ ಕಾಲಿಟ್ಟಿದೆ. ಇದೀಗ ರಾಹುಲ್ ಫ್ರಾಂಚೈಸಿ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು. ದೀಪಕ್ ಹೂಡ ಮೊದಲ ಅರ್ಧಶತಕ ಸಿಡಿಸಿದರೆ, ಚಮೀರ ಮೊದಲ ವಿಕೆಟ್ ಪಡೆದುಕೊಂಡಿದ್ದರು.
ಇದನ್ನೂ ಓದಿ:ಕೆಕೆಆರ್ಗೆ ಮಾಜಿ ಆಟಗಾರರೇ ವಿಲನ್ಸ್.. ಸೋಲುಂಡ ಮೂರು ಪಂದ್ಯಗಳಲ್ಲೂ ಎಕ್ಸ್ಪ್ಲೇಯರ್ಗಳೇ ಕಂಟಕ!