ಮುಂಬೈ: ಡೇವಿಡ್ ಮಿಲ್ಲರ್ ಮತ್ತು ರಾಹುಲ್ ತೆವಾಟಿಯಾ ಅಬ್ಬರದ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 171 ರನ್ಗಳ ಸವಾಲಿನ ಮೊತ್ತವನ್ನು ಗುಜರಾತ್ ಟೈಟನ್ಸ್ 4 ವಿಕೆಟ್ ಕಳೆದುಕೊಂಡು ಇನ್ನೂ 3 ಎಸೆತಗಳಿರುವಂತೆ ತಲುಪುವ ಮೂಲಕ ಟೂರ್ನಿಯಲ್ಲಿ ತಮ್ಮ ನಾಗಾಲೋಟವನ್ನು ಮುಂದುವರಿಸಿದೆ
ಮೊದಲು ಬ್ಯಾಟಿಂಗ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬ್ಯಾಟಿಂಗ್ ಮಾಡುವ ಅಚ್ಚರಿಯ ನಿರ್ಧಾರ ತೆಗೆದುಕೊಂಡಿತು. ವಿರಾಟ್ ಕೊಹ್ಲಿ 53 ಮತ್ತು ರಜತ್ ಪಾಟೀದಾರ್ 52 ಮತ್ತು ಮ್ಯಾಕ್ಸ್ವೆಲ್ ಅವರ 33 ರನ್ಗಳ ನೆರವಿನಿಂದ ಟೈಟನ್ಸ್ಗೆ 171 ರನ್ಗಳ ಗುರಿ ನೀಡಿತ್ತು.
ಸವಾಲಿನ ಗುರಿ ಬೆನ್ನಟ್ಟಿದ ಟೈಟನ್ಸ್ಗೆ ವೃದ್ಧಿಮಾನ್ ಸಹಾ ಮತ್ತು ಶುಬ್ಮನ್ ಗಿಲ್ ಮೊದಲ ವಿಕೆಟ್ಗೆ 51 ರನ್ಗಳ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿಕೊಟ್ಟರು. 22 ಎಸೆತಗಳಲ್ಲಿ 4 ಬೌಂಡರಿ ಸಹಿತ 29 ರನ್ಗಳಿಸಿದ್ದ ಸಹಾ ಹಸರಂಗಗೆ ವಿಕೆಟ್ ಒಪ್ಪಿಸಿದರು. ನಂತರದ ಓವರ್ನಲ್ಲೇ 28 ಎಸೆತಗಳಲ್ಲಿ 31 ರನ್ಗಳಿಸಿದ್ದ ಶುಬ್ಮನ್ ಗಿಲ್ ಶಹಬಾಜ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
-
Tewatia and Miller do it again! 🔥🔥#GT chase down the target in the final over 👏👏#TATAIPL #GTvRCB pic.twitter.com/kMGj8UrJ8m
— IndianPremierLeague (@IPL) April 30, 2022 " class="align-text-top noRightClick twitterSection" data="
">Tewatia and Miller do it again! 🔥🔥#GT chase down the target in the final over 👏👏#TATAIPL #GTvRCB pic.twitter.com/kMGj8UrJ8m
— IndianPremierLeague (@IPL) April 30, 2022Tewatia and Miller do it again! 🔥🔥#GT chase down the target in the final over 👏👏#TATAIPL #GTvRCB pic.twitter.com/kMGj8UrJ8m
— IndianPremierLeague (@IPL) April 30, 2022
ಉತ್ತಮ ಆರಂಭ ಪಡೆದಿದ್ದ ಟೈಟನ್ಸ್ಗೆ ಶಹಬಾಜ್ ನಾಯಕ ಹಾರ್ದಿಕ್ ಪಾಂಡ್ಯ(3) ವಿಕೆಟ್ ಪಡೆಯುವ ಮೂಲಕ ಮತ್ತೊಂದು ಹೊಡೆತ ನೀಡಿದರು. ಯುವ ಬ್ಯಾಟರ್ ಸಾಯಿ ಸುದರ್ಶನ್ ಕೂಡ 20 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಒಂದು ಹಂತದಲ್ಲಿ100ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಟೈಟನ್ಸ್ 36 ಎಸೆತಗಳಲ್ಲಿ ಎಸೆತಗಳಲ್ಲಿ 71 ರನ್ಗಳಿಸಿಬೇಕಾದ ಒತ್ತಡದಲ್ಲಿತ್ತು. ಆದರೆ ತೆವಾಟಿಯಾ ಮತ್ತು ಮಿಲ್ಲರ್ ಮುರಿಯದ 5ನೇ ವಿಕೆಟ್ಗೆ 76 ರನ್ಗಳ ಜೊತೆಯಾಟ ನಡೆಸಿ ಟೈಟನ್ಸ್ಗೆ ಕೊನೆಯ ಓವರ್ನಲ್ಲಿ ಮತ್ತೊಂದು ಜಯ ತಂದುಕೊಟ್ಟರು.
ತೆವಾಟಿಯಾ 25 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 43 ಮತ್ತು ಮಿಲ್ಲರ್ 24 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 39 ರನ್ಗಳಿಸಿ ಜಯದ ರೂವಾರಿಗಳಾದರು.
ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರ ಜೊತೆಗೆ ತನ್ನ ಪ್ಲೇ ಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿತು. ಇತ್ತ 10 ಪಂದ್ಯಗಳಲ್ಲಿ 5ನೇ ಸೋಲು ಕಂಡ ಆರ್ಸಿಬಿ ಪ್ಲೇ ಆಫ್ ದಾರಿ ಮತ್ತಷ್ಟು ಕಠಿಣವಾಗಿದೆ. ಉಳಿದಿರುವ 4 ಪಂದ್ಯಗಲ್ಲಿ ಕನಿಷ್ಠ 3 ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿತು.
ಇದನ್ನೂ ಓದಿ:14 ಪಂದ್ಯಗಳ ಬಳಿಕ ಐಪಿಎಲ್ನಲ್ಲಿ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ!