ಅಬುಧಾಬಿ: ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೈದರಾಬಾದ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಇಂದು ಎರಡೂ ತಂಡಗಳೂ ಯಾವುದೇ ಬದಲಾವಣೆಯಿಲ್ಲದೇ ಕಣಕ್ಕಿಳಿಯುತ್ತಿವೆ. ಆರ್ಸಿಬಿ ಈ ಪಂದ್ಯದ ಜೊತೆಗ ಕೊನೆಯ ಪಂದ್ಯವನ್ನು ಗೆದ್ದರೆ ಅಗ್ರ ಎರಡು ಸ್ಥಾನ ಪಡೆಯುವ ಅವಕಾಶವಿದೆ.
-
#RCB have won the toss and they will bowl first against #SRH.
— IndianPremierLeague (@IPL) October 6, 2021 " class="align-text-top noRightClick twitterSection" data="
Live - https://t.co/UJxVQxyLNo #RCBvSRH #VIVOIPL pic.twitter.com/h6a4ZLkShI
">#RCB have won the toss and they will bowl first against #SRH.
— IndianPremierLeague (@IPL) October 6, 2021
Live - https://t.co/UJxVQxyLNo #RCBvSRH #VIVOIPL pic.twitter.com/h6a4ZLkShI#RCB have won the toss and they will bowl first against #SRH.
— IndianPremierLeague (@IPL) October 6, 2021
Live - https://t.co/UJxVQxyLNo #RCBvSRH #VIVOIPL pic.twitter.com/h6a4ZLkShI
ಪ್ರಸ್ತುತ ಆರ್ಸಿಬಿ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು ಮತ್ತ್ತು 4 ಸೋಲು ಕಂಡಿದ್ದು, 16 ಅಂಕಗಳನ್ನು ಹೊಂದಿದೆ. ಉಳಿದ ಪಂದ್ಯಗಳನ್ನು ಗೆದ್ದು ಅಗ್ರ ಎರಡಲ್ಲಿ ಮುಗಿಸುವ ಆಲೋಚನೆಯಲ್ಲಿದೆ. 13 ಪಂದ್ಯಗಳಿಂದ 18 ಅಂಕಗಳನ್ನು ಹೊಂದಿರುವ ಸಿಎಸ್ಕೆ 2ನೇ ಸ್ಥಾನದಲ್ಲಿದೆ. ಆದರೆ, ರನ್ರೇಟ್ನಲ್ಲಿ ಎಲ್ಲ ತಂಡಗಳಿಗಿಂತ ಉತ್ತಮವಾಗಿರುವುದರಿಂದ ಮೊದಲೆರಡು ಸ್ಥಾನ ಉಳಿಸಿಕೊಳ್ಳುವ ಅವಕಾಶ ಹೆಚ್ಚಿದೆ.
ಮ್ಯಾಕ್ಸ್‌ವೆಲ್, ಪಡಿಕ್ಕಲ್, ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಚಹಾಲ್, ಸಿರಾಜ್ ಮತ್ತು ಹರ್ಷಲ್ ಪಟೇಲ್ ಅತ್ಯುತ್ತಮ ಪ್ರದರ್ಶನ ತೋರಿ ಸತತ 3 ಪಂದ್ಯಗಳಲ್ಲಿ ಗೆಲ್ಲಲು ಆರ್ಸಿಬಿಗೆ ನೆರವಾಗಿದ್ದಾರೆ. ಹಾಗಾಗಿ ಇಂದಿನ ಪಂದ್ಯಗಳಲ್ಲಿ ಆರ್ಸಿಬಿ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ.
ಇನ್ನು ಈಗಾಗಲೇ ಲೀಗ್ನಿಂದ ಹೊರಬಿದ್ದಿರುವ ಹೈದರಾಬಾದ್ ತಂಡಕ್ಕೆ ಈ ಪಂದ್ಯವನ್ನು ಗೆದ್ದರೂ - ಸೋತರೂ ಕೊನೆಯ ಸ್ಥಾನದಿಂದ ಮೇಲೇರಲು ಸಹಾ ನೆರವಾಗುವುದಿಲ್ಲ. ಹಾಗಾಗಿ ಫ್ರಾಂಚೈಸಿ ಬೆಂಚ್ ಕಾದಿರುವ ಆಟಗಾರರಿಗೆ ಅವಕಾಶ ನೀಡಿ ಅವರ ಪ್ರತಿಭೆ ಅನಾವರಣ ಮಾಡುವ ಉದ್ದೇಶವನ್ನು ಮಾತ್ರ ಹೊಂದಿದೆ.
ಮುಖಾಮುಖಿ
ಎರಡೂ ತಂಡಗಳೂ 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಹೈದರಾಬಾದ್ ತಂಡ 10ರಲ್ಲಿ, ಆರ್ಸಿಬಿ 8ರಲ್ಲಿ ಜಯ ಸಾಧಿಸಿದೆ.
ಹೈದರಾಬಾದ್: ಜೇಸನ್ ರಾಯ್, ವೃದ್ಧಿಮಾನ್ ಸಹಾ (ವಿಕೀ), ಕೇನ್ ವಿಲಿಯಮ್ಸನ್ (ನಾಯಕ), ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್, ಉಮ್ರಾನ್ ಮಲಿಕ್
ಆರ್ಸಿಬಿ ಸಂಭಾವ್ಯ ತಂಡ: ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಶ್ರೀಕರ್ ಭರತ್ (ವಿಕೀ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿ ವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಶಹಬಾಜ್ ಅಹ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಾಲ್ ಮತ್ತು ಮೊಹಮ್ಮದ್ ಸಿರಾಜ್.