ETV Bharat / sports

ಟೆಸ್ಟ್​​ ಪಂದ್ಯ ರದ್ದು ಬೆನ್ನಲ್ಲೇ ದುಬೈಗೆ ಬಂದಿಳಿದ ರೋಹಿತ್​, ಜಸ್ಪ್ರೀತ್​ ಬುಮ್ರಾ - ಮ್ಯಾಂಚೆಸ್ಟರ್​ನಿಂದ ದುಬೈಗೆ ಬಂದ ಪ್ಲೇಯರ್ಸ್​

ಮುಂಬೈ ಇಂಡಿಯನ್ಸ್ ತಂಡದ ಪ್ಲೇಯರ್ಸ್​ಗಳಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ ಕುಟುಂಬದೊಂದಿಗೆ ದುಬೈಗೆ ಬಂದಿಳಿದಿದ್ದಾರೆ.

mumbai indians players
mumbai indians players
author img

By

Published : Sep 11, 2021, 3:45 PM IST

ದುಬೈ: ಇಂಗ್ಲೆಂಡ್​ ವಿರುದ್ಧದ ಫೈನಲ್​ ಟೆಸ್ಟ್​ ಪಂದ್ಯ ರದ್ದುಗೊಳ್ಳುತ್ತಿದ್ದಂತೆ ಮುಂಬೈ ಇಂಡಿಯನ್ಸ್ ತಂಡದ ಪ್ಲೇಯರ್ಸ್​ ದುಬೈಗೆ ಬಂದಿಳಿದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಫೋಟೋ ರಿಲೀಸ್ ಮಾಡಿರುವ ಮುಂಬೈ ಇಂಡಿಯನ್ಸ್​​​ ತಂಡ ಟ್ವಿಟರ್​ನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದೆ.

ನಿನ್ನೆಯಿಂದ ಮ್ಯಾಂಚೆಸ್ಟರ್​ ಮೈದಾನದಲ್ಲಿ ಆರಂಭಗೊಳ್ಳಬೇಕಾಗಿದ್ದ ಫೈನಲ್​ ಟೆಸ್ಟ್​ ಪಂದ್ಯ ಕೊರೊನಾ ವೈರಸ್​ ಕಾರಣ ರದ್ದುಗೊಂಡಿದೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದಲ್ಲಿನ ಕ್ಯಾಪ್ಟನ್​ ರೋಹಿತ್​ ಶರ್ಮಾ, ವೇಗದ ಬೌಲರ್​ ಜಸ್ಪ್ರೀತ್​ ಬುಮ್ರಾ ಹಾಗೂ ಸ್ಫೋಟಕ ಬ್ಯಾಟ್ಸ್​​ಮನ್​ ಸೂರ್ಯಕುಮಾರ್​ ಯಾದವ್​ ವಿಶೇಷ ಚಾರ್ಟರ್​ ವಿಮಾನದಲ್ಲಿ ಆಗಮಿಸಿದ್ದು, ದುಬೈ ತಲುಪಿದ್ದಾರೆ.

ಕೆಲ ಗಂಟೆಗಳ ಹಿಂದೆ ದುಬೈಗೆ ಆಗಮಿಸಿರುವ ಪ್ಲೇಯರ್ಸ್​ ಮುಂದಿನ ಆರು ದಿನಗಳ ಕಾಲ ಕ್ವಾರಂಟೈನ್​​ಗೊಳಗಾಗಲಿದ್ದು, ಸೆಪ್ಟೆಂಬರ್​ 19ರಂದು ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ನಡೆಯಲಿರುವ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ಐಪಿಎಲ್​​​ ಹಾಗೂ ಹಣಕ್ಕೋಸ್ಕರ ಮ್ಯಾಂಚೆಸ್ಟರ್​ ಟೆಸ್ಟ್​​ ಪಂದ್ಯ ರದ್ಧು : ಮೈಕಲ್​ ವಾನ್​​ ಆರೋಪ

ಮ್ಯಾಂಚೆಸ್ಟರ್​ನಿಂದ ದುಬೈಗೆ ಆಗಮಿಸುವುದಕ್ಕೂ ಮುಂಚಿತವಾಗಿ ಅವರಿಗೆ ಮಾಡಿಸಲಾಗಿರುವ ಆರ್​ಟಿ-ಪಿಸಿಆರ್​ ವರದಿ ನೆಗೆಟಿವ್​ ಬಂದಿದ್ದು, ದುಬೈಗೆ ಬರುತ್ತಿದ್ದಂತೆ ಅವರನ್ನ ಮತ್ತೊಮ್ಮೆ ಕೋವಿಡ್ ಟೆಸ್ಟ್​ಗೊಳಪಡಿಸಲಾಗುವುದು ಎಂದು ಪ್ರಾಂಚೈಸಿ ಹೇಳಿಕೊಂಡಿದೆ. ರಾಯಲ್​ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್​ ಸೇರಿದಂತೆ ವಿವಿಧ ತಂಡದ ಪ್ಲೇಯರ್ಸ್ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ದುಬೈಗೆ ಬರುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.