ಅಬುಧಾಬಿ: ಬ್ಯಾಟರ್ಸ್ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 171 ರನ್ಗಳ ಸವಾಲಿನ ಮೊತ್ತವನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ.
-
A late surge from @DineshKarthik and @NitishRana_27 gives us a fighting total 💪
— KolkataKnightRiders (@KKRiders) September 26, 2021 " class="align-text-top noRightClick twitterSection" data="
Now over to our bowling unit 🤞#CSKvKKR #KKR #AmiKKR #IPL2021 pic.twitter.com/FPLfzaLmlo
">A late surge from @DineshKarthik and @NitishRana_27 gives us a fighting total 💪
— KolkataKnightRiders (@KKRiders) September 26, 2021
Now over to our bowling unit 🤞#CSKvKKR #KKR #AmiKKR #IPL2021 pic.twitter.com/FPLfzaLmloA late surge from @DineshKarthik and @NitishRana_27 gives us a fighting total 💪
— KolkataKnightRiders (@KKRiders) September 26, 2021
Now over to our bowling unit 🤞#CSKvKKR #KKR #AmiKKR #IPL2021 pic.twitter.com/FPLfzaLmlo
ಟಾಸ್ ಗೆದ್ದ ಕೆಕೆಆರ್ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಹಿಂದಿನ ಪಂದ್ಯಗಳಲ್ಲಿ ಪಡೆದ ಆರಂಭವನ್ನು ಪಡೆದುಕೊಳ್ಳುವಲ್ಲಿ ವಿಫಲವಾಯಿತು. ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ಗೆ ಮುಂದಾದ ಗಿಲ್ ಕೇವಲ 9 ರನ್ಗಳಿಸಿ ರನ್ಔಟ್ ಆದರು. ನಂತರ ವೆಂಕಟೇಶ್ ಅಯ್ಯರ್ ಕೂಡ ಕೇವಲ18 ರನ್ಗಳಿಸಿ ಠಾಕೂರ್ ಬೌಲಿಂಗ್ನಲ್ಲಿ ಧೋನಿಗೆ ಕ್ಯಾಚಿತ್ತು ಔಟಾದರು. ನಂತರ ಬಂದ ನಾಯಕ ಮಾರ್ಗನ್ (8) ಡುಪ್ಲೆಸಿಸ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು.
ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಉತ್ತಮವಾಗಿ ಆಡಿದ ರಾಹುಲ್ ತ್ರಿಪಾಠಿ 33 ಎಸೆತಗಳಲ್ಲಿ 4 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 45 ರನ್ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಇವರು ಜಡೇಜಾ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಕೊನೆಯಲ್ಲಿ ಅಬ್ಬರಿಸಿದ ಸ್ಫೋಟಕ ದಾಂಡಿಗ ರಸೆಲ್ 15 ಎಸೆತಗಳಲ್ಲಿ 20, ದಿನೇಶ್ ಕಾರ್ತಿಕ್ 11 ಎಸೆತಗಳಲ್ಲಿ 26, ನಿತೀಶ್ ರಾಣಾ 27 ಎಸೆತಗಳಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 37 ರನ್ಗಳಿಸಿ ತಂಡದ ಮೊತ್ತವನ್ನು 171ಕ್ಕೇರಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಶಾರ್ದೂಲ್ ಠಾಕೂರ್ 20ಕ್ಕೆ 2, ಜೋಶ್ ಹೆಜಲ್ವುಡ್ 40ಕ್ಕೆ 2, ಜಡೇಜಾ 21ಕ್ಕೆ 1 ವಿಕೆಟ್ ಪಡೆದರು.