ದುಬೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದು, ಟಾಸ್ ಸೋತ ರಿಷಬ್ ಪಂತ್ ಪಡೆ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಕೆ ಮಾಡಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಡೆಲ್ಲಿ ತಂಡದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ತಂಡಕ್ಕೆ ಬದ್ರ ಬುನಾದಿ ಹಾಕಿಕೊಟ್ಟರು. ಮೊದಲ 10 ಓವರ್ಗಳಲ್ಲಿ ಈ ಜೋಡಿ 88ರನ್ಗಳಿಕೆ ಮಾಡಿತು. ಶಾ 38 ಎಸೆತಗಳಲ್ಲಿ 48 ರನ್ಗಳಿಕೆ ಮಾಡಿದರೆ, ಶಿಖರ್ ಧವನ್ 35 ಎಸೆತಗಳಲ್ಲಿ 43ರನ್ಗಳಿಕೆ ಮಾಡಿದರು.
-
Innings Break!
— IndianPremierLeague (@IPL) October 8, 2021 " class="align-text-top noRightClick twitterSection" data="
Siraj brings the innings to a close by getting the scalp of Hetmyer.#DelhiCapitals post a total of 164/5 on the board. #RCB chase coming up shortly. Stay tuned!
Scorecard - https://t.co/z5hns662XQ #RCBvDC #VIVOIPL pic.twitter.com/8909xKDPiU
">Innings Break!
— IndianPremierLeague (@IPL) October 8, 2021
Siraj brings the innings to a close by getting the scalp of Hetmyer.#DelhiCapitals post a total of 164/5 on the board. #RCB chase coming up shortly. Stay tuned!
Scorecard - https://t.co/z5hns662XQ #RCBvDC #VIVOIPL pic.twitter.com/8909xKDPiUInnings Break!
— IndianPremierLeague (@IPL) October 8, 2021
Siraj brings the innings to a close by getting the scalp of Hetmyer.#DelhiCapitals post a total of 164/5 on the board. #RCB chase coming up shortly. Stay tuned!
Scorecard - https://t.co/z5hns662XQ #RCBvDC #VIVOIPL pic.twitter.com/8909xKDPiU
ಜೊತೆಯಾಟ ಮುರಿದ ಹರ್ಷಲ್
ಉತ್ತಮವಾಗಿ ಆಡುತ್ತಿದ್ದ ಧವನ್ - ಶಾ ಜೋಡಿಯನ್ನ ಬೇರ್ಪಡಿಸುವಲ್ಲಿ ಹರ್ಷಲ್ ಪಟೇಲ್ ಯಶಸ್ವಿಯಾದರು. 43ರನ್ಗಳಿಸಿದ್ದ ಶಿಖರ್ ವಿಕೆಟ್ ಪಡೆದು ತಂಡಕ್ಕೆ ಮೆಲುಗೈ ತಂದುಕೊಟ್ಟರು. ಇದರ ಬೆನ್ನಲ್ಲೇ 48 ರನ್ಗಳಿಕೆ ಮಾಡಿದ್ದ ಶಾ ಕೂಡ ವಿಕೆಟ್ ಒಪ್ಪಿಸಿದರು.
ಇದಾದ ಬಳಿಕ ಬಂದ ಪಂತ್ 10ರನ್, ಅಯ್ಯರ್ 18 ರನ್, ಹೆಟ್ಮಾಯರ್ 29 ರನ್ಗಳಿಕೆ ಮಾಡಿ ತಂಡದ ಮೊತ್ತ 150ರ ಗಡಿ ದಾಟುವಂತೆ ಮಾಡಿದರು. ಕೊನೆಯದಾಗಿ ರಿಪಲ್ ಪಟೇಲ್ 7ರನ್ಗಳಿಕೆ ಮಾಡಿದರು.
ತಂಡ ಕೊನೆಯದಾಗಿ 164 ರನ್ಗಳಿಸಿದ್ದು, ಇದೀಗ ಬೆಂಗಳೂರು ತಂಡದ ಗೆಲುವಿಗೆ 165ರನ್ ಟಾರ್ಗೆಟ್ ನೀಡಿದೆ. ಬೆಂಗಳೂರು ತಂಡದ ಪರ ಸಿರಾಜ್ 2ವಿಕೆಟ್ ಪಡೆದುಕೊಂಡರೆ, ಹರ್ಷಲ್, ಕ್ರಿಸ್ಟಿಯನ್ ಹಾಗೂ ಜಾರ್ಜ್ ತಲಾ 1ವಿಕೆಟ್ ಕಬಳಿಸಿದರು.