ದುಬೈ: ನಿನ್ನೆ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್-2020ರ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೂಪರ್ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು.
ಪಂದ್ಯದ ನಂತರದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಮಹೇಲಾ ಜಯವರ್ಧನೆ, ಇಶಾನ್ ಕಿಶನ್ ಅವರ ಆಟದ ಪರಿಪೂರ್ಣತೆಯನ್ನು ಶ್ಲಾಘಿಸಿದರು.
"ಚೆಂಡನ್ನು ಸ್ವಲ್ಪಮಟ್ಟಿಗೆ ಹಿಡಿಯುವಂತಹ ಪರಿಸ್ಥಿತಿಯನ್ನು ಎರಡೂ ಕಡೆಯವರು ಎದುರಿಸಬೇಕಾಗಿತ್ತು. ನಾವು ಸರಿಯಾಗಿಯೇ ಚೇಸಿಂಗ್ ಮಾಡಿದ್ದೇವೆ. ನಾವು ಬಹುಶಃ ಕೆಲ ರನ್ಗಳನ್ನು ನೀಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಚೆಂಡಿನೊಂದಿಗೆ ನಾವು ಸಾಕಷ್ಟು ಶಿಸ್ತುಬದ್ಧವಾಗಿರಲಿಲ್ಲ" ಎಂದು ಅವರು ಹೇಳಿದರು.
"ಸೂಪರ್ ಓವರ್‌ನಲ್ಲಿ ನಾವು ಅಕ್ಷರಶಃ ಮೂರು ಡಾಟ್ ಬಾಲ್ ಹೊಂದಿದ್ದೆವು ಎಂದು ನಾನು ಭಾವಿಸುತ್ತೇನೆ. ಅದರಲ್ಲಿ ನಾವು ವಿಕೆಟ್ ಕೂಡ ಕಳೆದುಕೊಂಡೆವು" ಎಂದು ಹೇಳಿದರು.
ಈ ಗೆಲುವಿನ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ಮೂರನೇ ಸ್ಥಾನಕ್ಕೆ ಏರಿದರೆ ಎಂಐ ಐದನೇ ಸ್ಥಾನಕ್ಕೆ ಕುಸಿದಿದೆ.