ETV Bharat / sports

ಆನ್‌ಫೀಲ್ಡ್ ಅಂಪೈರ್​ ಯಡವಟ್ಟು: 'ಹೊಸ ನಿಯಮಕ್ಕೆ ಬೇಡಿಕೆ ಇಡುವೆ'- ಕೊಹ್ಲಿ - ಅಂಪೈರ್ ತೀರ್ಪು ಪರಿಶೀಲಿಸುವ ಅವಕಾಶ

ಅವಕಾಶ ಸಿಕ್ಕರೆ ತಂಡದ ನಾಯಕನಾಗಿ ಹೊಸ ನಿಯಮಕ್ಕೆ ಬೇಡಿಕೆ ಇಡುವೆ ಎಂದು ಆರ್​ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

captain should have the option of reviewing wide
ಹೊಸ ನಿಯಮಕ್ಕೆ ಬೇಡಿಕೆ ಇಡುವೆ ಎಂದ ವಿರಾಟ್
author img

By

Published : Oct 15, 2020, 11:11 AM IST

ಹೈದರಾಬಾದ್: ಜಂಟಲ್​ಮನ್ಸ್‌ ಗೇಮ್ ಕ್ರಿಕೆಟ್​ನಲ್ಲಿ ಆಗಿಂದಾಗ್ಗೆ ಅಂಪೈರಿಂಗ್​ ಯಡವಟ್ಟುಗಳ ಬಗ್ಗೆ ಅಪಸ್ವರ ಕೇಳಿ ಬರುತ್ತಿರುತ್ತದೆ. ಅಂಪೈರ್​ ನೀಡಿದ ಒಂದು ಕೆಟ್ಟ ತೀರ್ಪಿನಿಂದ ಪಂದ್ಯದ ಫಲಿತಾಂಶವೇ ಬದಲಾಗಿರುವ ನಿದರ್ಶನಗಳು ಸಾಕಷ್ಟಿವೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿಯೂ ಇಂತಹ ಘಟನೆ ನಡೆದಿರುವುದನ್ನು ನೋಡಿದ್ದೇವೆ.

ಕೆ.ಎಲ್. ರಾಹುಲ್​ ಜೊತೆ ಪೂಮಾ ಇಂಡಿಯಾಗಾಗಿ ವಿರಾಟ್ ಕೊಹ್ಲಿ ಇನ್​ಸ್ಟಾಗ್ರಾಮ್​ ಮೂಲಕ ಲೈವ್‌ ನಡೆಸಿದ್ರು. ಈ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಇಬ್ಬರು ಕ್ರಿಕೆಟಿಗರು ಉತ್ತರ ನೀಡುತ್ತಿದ್ದರು. ನಿಮಗೆ ಅವಕಾಶ ಸಿಕ್ಕರೆ ಐಪಿಎಲ್​ನಲ್ಲಿ ನಿಮಗೆ ಅನುಕೂಲ ಆಗುವಂತೆ ಒಂದು ನಿಯಮ ತಿದ್ದುಪಡಿಗೆ ಬಯಸಿದರೆ ಏನು ಬದಲಾವಣೆ ಬಯಸುತ್ತೀರಿ? ಎಂದು ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಒಬ್ಬ ಬ್ಯಾಟ್ಸ್​​ಮನ್​ 100 ಮೀಟರ್​ಗಿಂತ ಹೆಚ್ಚಿನ ದೂರಕ್ಕೆ ಸಿಕ್ಸರ್​ ಸಿಡಿಸಿದ್ರೆ ಅದಕ್ಕೆ ಹೆಚ್ಚು ರನ್​ ನೀಡುವಂತೆ ಕೇಳುತ್ತೇನೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್, ಈ ಬಗ್ಗೆ ಮೊದಲು ನಿಮ್ಮ ತಂಡದ ಬೌಲರ್‌ಗಳ ಸಲಹೆ ಪಡೆದು ನಂತರ ಮನವಿ ಮಾಡಿ ಎಂದು ನಗುತ್ತಲೇ ತಿಳಿಸಿದರು.

ಇದೇ ಪ್ರಶ್ನೆಗೆ ಉತ್ತರಿಸಿದ ವಿರಾಟ್, ಒಬ್ಬ ನಾಯಕನಾಗಿ ನಾನಗೆ ಅವಕಾಶ ಸಿಕ್ಕರೆ ಆನ್​​ಫೀಲ್ಡ್​ ಅಂಪೈರ್​ ನೀಡುವ ವೈಡ್ ಅಥವಾ ನೋ ಬಾಲ್ ತೀರ್ಪನ್ನು ಮರು ಪರಿಶೀಲಿಸಲು ಅವಕಾಶ ಕೊಡಬೇಕೆಂದು ಕೇಳುವೆ ಎಂದಿದ್ದಾರೆ.​ ಯಾವುದಾದರೊಂದು ಪಂದ್ಯವನ್ನು ನಾವು ಒಂದು ರನ್​​ನಿಂದ ಸೋತರೆ ಅದೇ ಪಂದ್ಯದಲ್ಲಿ ಅಂಪೈರ್​ ಕೆಟ್ಟ ತೀರ್ಪು ನೀಡಿದ್ದರೆ ಅದರ ಪರಿಣಾಮ ದೊಡ್ಡದಿರುತ್ತದೆ. ಹೀಗಾಗಿ ಅಂಪೈರ್​ ತೀರ್ಪು ಪರಿಶೀಲಿಸುವ ಒಂದು ಅವಕಾಶ ನೀಡುವಂತೆ ಕೇಳುವೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಅಂಪೈರ್​ ನೀಡಿದ ಕೆಟ್ಟ ತೀರ್ಪಿನಿಂದ ನಾವು ಸೋಲು ಕಾಣಬೇಕಾಯ್ತು. ಇಂಥದ್ದೊಂದು ನಿಯಮ ಬರಬೇಕು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.