ಐಪಿಎಲ್ನ ಬಲಿಷ್ಠ ತಂಡಗಳಾದ ಆರ್ಸಿಬಿ ಹಾಗೂ ಸಿಎಸ್ಕೆ ಇಂದು ಚೆನ್ನೈನ ಎಂಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು ಮೊದಲ ಜಯ ಯಾರಪಾಲಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ಅಂಕಿ ಅಂಶಗಳ ಪ್ರಕಾರ ಚೆನ್ನೈ ಸ್ಟ್ರಾಂಗ್:
ಚೆನ್ನೈ vs ಆರ್ಸಿಬಿ
ಕಳೆದ 11 ಆವೃತ್ತಿಗಳ ಅಂಕಿ-ಅಂಶ ಗಮನಿಸಿದರೆ ಸಿಎಸ್ಕೆ ಆರ್ಸಿಬಿಗಿಂತ ಮುಂದಿದೆ. ಒಟ್ಟು 23 ಪಂದ್ಯಗಳಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು, ಸಿಎಸ್ಕೆ 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆರ್ಸಿಬಿ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದು ಪಂದ್ಯ ರದ್ದಾಗಿದೆ.
ಧೋನಿ vs ಕೊಹ್ಲಿ
ಆರ್ಸಿಬಿ ವಿರುದ್ಧ ಅತಿ ಹೆಚ್ಚು ರನ್ಗಳಿಸಿರುವವರಲ್ಲಿ ಧೋನಿ ಮೊದಲ ಸ್ಥಾನದಲ್ಲಿದ್ದಾರೆ. ಧೋನಿ ಆರ್ಸಿಬಿ ವಿರುದ್ಧ 710 ರನ್ಗಳಿಸಿದ್ದಾರೆ. 2ನೇ ಸ್ಥಾನದಲ್ಲಿ ಗಂಬೀರ್(647), ಮೂರನೇ ಸ್ಥಾನದಲ್ಲಿ ರೈನಾ (642) ರನ್ಗಳಿಸಿ ನಂತರ ಸ್ಥಾನದಲ್ಲಿದ್ದಾರೆ.
ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 21 ಇನಿಂಗ್ಸ್ಗಳಲ್ಲಿ 732 ರನ್ಗಳಿಸುವ ಮೂಲಕ ಅತಿ ಹೆಚ್ಚು ರನ್ಗಳಿಸಿದ ಆಟಗಾರರಾಗಿದ್ದಾರೆ. 606 ರನ್ಗಳಿಸಿರುವ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದಾರೆ.
ರೈನಾ vs ಕೊಹ್ಲಿ
ಇದೇ ಪಂದ್ಯದಲ್ಲಿ ಕೊಹ್ಲಿ- ರೈನಾ 5000 ರನ್ ಪೂರ್ತಿಗೊಳಿಸಲು ಅವಕಾಸವಿದ್ದು, ಮೊದಲು ಬ್ಯಾಟಿಂಗ್ ನಡೆಸುವ ತಂಡದ ಮೇಲೆ ಈ ದಾಖಲೆ ಯಾರ ಪಾಲಾಗಲಿದೆ ಎಂದು ನಿರ್ಧಾರವಾಗಲಿದೆ.
150 ಐಪಿಎಲ್ ಪಂದ್ಯವಾಡಿರುವ ಚೆನ್ನೈ 60.67 ಸರಾಸರಿಯೊಂದಿಗೆ 91 ಜಯ ಸಾಧಿಸಿ ಐಪಿಎಲ್ನ ಯಶಸ್ವಿ ತಂಡವೆನಿಸಿದೆ. ಆದರೆ ಆರ್ಸಿಬಿ 19 ಪಂದ್ಯಗಳನ್ನಾಡಿದ್ದು 79 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಆಡುವ ಸಂಭವನೀಯ 11ರ ಬಳಗ
ಆರ್ಸಿಬಿ: ಮೊಯಿನ್ ಅಲಿ, ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ(ಕ್ಯಾಪ್ಟನ್), ಎಬಿ ಡಿವಿಲಿಯರ್ಸ್, ಶಿಮ್ರಾನ್ ಹೇಟ್ಮೇರ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಥಿಮ್ ಸೌಥಿ/ಕಾಲಿನ್ ಡಿ ಗ್ರ್ಯಾಂಡ್ಹೋಮ್, ಉಮೇಶ್ ಯಾದವ್, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್
ಸಿಎಸ್ಕೆ: ಅಂಬಾಟಿ ರಾಯುಡು, ಶೇನ್ ವ್ಯಾಟ್ಸನ್, ಸುರೇಶ್ ರೈನಾ,ಎಂಎಸ್ ಧೋನಿ (ಕ್ಯಾಪ್ಟನ್), ಫಾಫ್ ಡು ಪ್ಲೆಸಿಸ್,ಬಿಲ್ಲಿಂಗ್ಸ್, ಕೇದಾರ್ ಜಾಧವ್,ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಮೋಹಿತ್ ಶರ್ಮಾ, ಇಮ್ರಾನ್ ತಾಹೀರ್