ಪಂಜಾಬ್: ಮೊಹಾಲಿಯಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಕೋಲ್ಕತ್ತಾ ನೈಟ್ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ನೈಟ್ರೈಡರ್ಸ್ ತಂಡ ಪಂಜಾಬ್ ವಿರುದ್ಧ 7 ವಿಕೆಟ್ಗಳ ಅಂತರದಲ್ಲಿ ಜಯಗಳಿಸಿದೆ.
-
🤜🤛#KKR pic.twitter.com/yGnu8enbYU
— IndianPremierLeague (@IPL) May 3, 2019 " class="align-text-top noRightClick twitterSection" data="
">🤜🤛#KKR pic.twitter.com/yGnu8enbYU
— IndianPremierLeague (@IPL) May 3, 2019🤜🤛#KKR pic.twitter.com/yGnu8enbYU
— IndianPremierLeague (@IPL) May 3, 2019
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 183 ರನ್ ಪೇರಿಸಿತು. ಕಿಂಗ್ಸ್ ಇಲೆವೆನ್ ಪರ ಸ್ಯಾಮ್ ಕರನ್ 55, ನಿಕೋಲಸ್ ಪೂರನ್ 48, ಮಯಾಂಕ್ ಅಗರ್ವಾಲ್ 36 ಮತ್ತು ಕೆಲ್ ರಾಹುಲ್ 36 ರನ್ ಗಳಿಸಿದ್ರು. ಕೋಲ್ಕತ್ತಾ ಪರ ಸಂದೀಪ್ ವಾರಿಯರ್ 2, ಹ್ಯಾರಿ ಗರ್ನಿ, ರಸೆಲ್, ನಿತಿಶ್ ರಾಣ ತಲಾ ಒಂದು ವಿಕೆಟ್ ಪಡೆದ್ರು.
ಪಂಜಾಬ್ ನೀಡಿದ್ದ 184 ರನ್ಗಳ ಗುರಿ ಬೆನ್ನತ್ತಿದ ಕೆಕೆಆರ್ ಇನ್ನೆರಡು ಓವರ್ಗಳು ಬಾಕಿ ಇರುವಾಗಲೇ ಮೂರು ವಿಕೆಟ್ ಕಳೆದುಕೊಂಡು 185 ರನ್ ಗಳಿಸಿ 7 ವಿಕೆಟ್ಗಳ ಗೆಲುವು ದಾಖಲಿಸಿತು. ಕೋಲ್ಕತ್ತಾ ಪರ ಶುಬ್ಮನ್ ಗಿಲ್ 65, ಕ್ರಿಸ್ ಲಿನ್ 46, ರಸೆಲ್ 24 ರನ್ಗಳಿಸಿ ಮಿಂಚಿದ್ರು.
ಈ ಮೂಲಕ 2 ಅಂಕ ಪಡೆದುಕೊಂಡ ಶಾರೂಖ್ ಪಡೆ ಪ್ಲೇ ಆಫ್ ಕನಸನ್ನ ಜೀವಂತವಾಗಿರಿಸಿಕೊಂಡಿದೆ. ನಾಳೆ ನಡೆಯುವ ಮುಂಬೈ ವಿರುದ್ಧದ ಪಂದ್ಯದಲ್ಲಿ ಉತ್ತಮ ರನ್ ರೇಟ್ನೊಂದಿಗೆ ಗೆಲುವು ದಾಖಲಿಸಿದ್ರೆ ಪ್ಲೇ ಆಫ್ಗೆ ಪ್ರವೇಶಿಸುವ ಸಾಧ್ಯತೆ ಇದೆ. ಇತ್ತ ಗೆಲ್ಲಲೇಬೇಕಾದ ಪಂದ್ಯ ಕೈ ಚೆಲ್ಲಿದ ಪಂಜಾಬ್ ತಂಡ, ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದೆ.