ETV Bharat / sports

ತವರಿಗೆ ಮರಳಲಿದ್ದಾರೆ ಸ್ಟಾರ್​ ಪ್ಲೇಯರ್ಸ್​, ಆರ್​ಸಿಬಿ ಸೇರಿದಂತೆ 3 ತಂಡಗಳಿಗೆ ಆಘಾತ! - ಐಪಿಎಲ್​

ಐಪಿಎಲ್​ನ ವಿದೇಶಿ ಸ್ಟಾರ್​ ಪ್ಲೇಯರ್​ಗಳಾದ ವಾರ್ನರ್​,ಸ್ಮಿತ್​,ಬೆನ್​ಸ್ಟೋಕ್ಸ್​,ಮೊಯಿನ್​ ಅಲಿ ಹಾಗು ಆರ್ಚರ್‌ಗೆ ರಾಷ್ಟ್ರೀಯ ತಂಡದಿಂದ ಕರೆ ಬಂದಿರುವುದರಿಂದ ಈ ತಿಂಗಳ ಕೊನೆಯಲ್ಲಿ ಸ್ವದೇಶಕ್ಕೆ ಮರಳಲಿದ್ದಾರೆ.

ತವರಿಗೆ ಮರಳಲಿರುವ ಸ್ಟಾರ್‌ ಪ್ಲೇಯರ್ಸ್‌
author img

By

Published : Apr 24, 2019, 8:01 PM IST

ಹೈದರಾಬಾದ್​: 12ನೇ ಆವೃತ್ತಿಯ ಐಪಿಎಲ್​ನಲ್ಲಿ ಟಾಪ್​ ಸ್ಕೋರರ್​ ಆಗಿರುವ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್, ಇಂಗ್ಲೆಂಡ್​ನ ಜಾನಿ ಬೈರ್ಸ್ಟೋವ್, ಆರ್​ಸಿಬಿಯ ಆಧಾರಸ್ಥಂಭವಾಗಿದ್ದ ಮೊಯಿನ್​ ಅಲಿ, ಸ್ಟೋಯ್ನಿಸ್​ ​ ಸದ್ಯದಲ್ಲೇ ಐಪಿಎಲ್​ನಿಂದ ಹೊರ ನಡೆಯಲಿದ್ದಾರೆ.

ಪಾಕಿಸ್ತಾನದ v/s ಇಂಗ್ಲೆಂಡ್​ ಏಕದಿನ ಸರಣಿ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದ ಪರ ಆಡಲು ಜಾನಿ ಬೈರ್ಸ್ಟೋವ್,ಬೆನ್​ಸ್ಟೋಕ್ಸ್​, ಮೊಯಿನ್​ ಅಲಿ ಹಾಗೂ ಜೋಫ್ರಾ ಇಂಗ್ಲೆಂಡ್​ಗೆ ಮರಳಲಿದ್ದಾರೆ. ಚೊಚ್ಚಲ ಐಪಿಎಲ್​ನಲ್ಲೇ ಭರ್ಜರಿ ಬ್ಯಾಟಿಂಗ್ ಮೂಲಕ ರಂಜಿಸಿದ ಬೈರ್ಸ್ಟೋವ್,​ ವಾರ್ನರ್‌ರೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದರು. ಹೈದರಾಬಾದ್​ ತಂಡದ ಬೆನ್ನೆಲುಬಾಗಿದ್ದ ಈ ಆರಂಭಿಕ ಜೋಡಿ ಇಬ್ಬರ ಸೇವೆಯನ್ನು ಮಿಸ್​ ಮಾಡಿಕೊಳ್ಳುತ್ತಿದೆ.

ಈ ಸಮಸ್ಯೆ ಕೇವಲ ಸನ್​ರೈಸರ್ಸ್​ಗೆ ಮಾತ್ರವಲ್ಲದೆ, ರಾಜಸ್ಥಾನ, ಆರ್​ಸಿಬಿ ತಂಡಗಳಿಗೂ ತಟ್ಟಿದೆ. ಆರ್​ಸಿಬಿಗೆ ಕಳೆದೆರಡು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮೊಯಿನ್​ ಅಲಿ, ಮಾರ್ಕಸ್​ ಸ್ಟೋಯ್ನಿಸ್​ ಸ್ವದೇಶಕ್ಕೆ ಮರಳಬೇಕಾಗಿದೆ. ಮೊಯಿನ್​ಗೆ ರಾಷ್ಟ್ರೀಯ ತಂಡದಿಂದ ಕರೆ ಬಂದರೆ, ಸ್ಟೋಯ್ನಿಸ್​ ವಿಶ್ವಕಪ್​ ಶಿಬಿರದಲ್ಲಿ ಪಾಲ್ಗೊಳ್ಳಲು ಹೊರಟಿದ್ದಾರೆ.

ಸ್ಟೋಯ್ನಿಸ್​ ಜೊತೆಗೆ 'ಆರೆಂಜ್​ ಕ್ಯಾಪ್​' ಪಡೆದಿರುವ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್, ರಾಜಸ್ಥಾನ ತಂಡದಲ್ಲಿರುವ ಸ್ಟಿವ್​ ಸ್ಮಿತ್​, ಆ್ಯಶ್ಟನ್​ ಟರ್ನರ್​​ ವಿಶ್ವಕಪ್​ಗೂ ಮುನ್ನ ನಡೆಯಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಇದೇ ತಿಂಗಳ ಕೊನೆಗೆ ಅಥವಾ ಮೇ ಮೊದಲ ವಾರದಲ್ಲಿ ತವರಿಗೆ ಮರಳಲಿದ್ದಾರೆ. ವಾರ್ನರ್ ಹಾಗೂ ಸ್ಮಿತ್​​ ಬಾಲ್​​ ಟ್ಯಾಂಪರಿಂಗ್​ ಪ್ರಕರಣದ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಇದೀಗ ಈ ವಿದೇಶಿ ಆಟಗಾರರ ಗೈರಿನಲ್ಲಿ ಕೊನೆಯ 2-3 ಪಂದ್ಯ ಆಡಬೇಕಾಗಿದೆ. ಈ ಮೂರು ತಂಡಗಳು ಹೊರ ಹೋಗುತ್ತಿರುವ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಹಿನ್ನೆಲೆಯಲ್ಲಿ ಮುಂಬರುವ ಪಂದ್ಯಗಳಲ್ಲಿ ಗೆಲುವು ಕಠಿಣವಾಗಲಿದೆ.

ಈಗಾಗಲೇ ಮೂರು ತಂಡಗಳು ಪ್ಲೇ ಆಫ್​ ರೇಸ್​ನಿಂದ ಹೊರಬಿದ್ದಿದ್ದು, ಲೆಕ್ಕಾಚಾರದ ಆಧಾರದ ಮೇಲೆ ಕೊನೆ ಆಸೆ ಇಟ್ಟುಕೊಂಡಿವೆ. ಹೀಗಾಗಿ ಸಿಎಸ್​ಕೆ, ಡೆಲ್ಲಿ ಹಾಗೂ ಮುಂಬೈ ತಂಡಗಳು ಪ್ಲೇ ಆಫ್​ಗೆ ತುಂಬಾ ಹತ್ತಿರದಲ್ಲಿವೆ. ಉಳಿದ ಒಂದು ಸ್ಥಾನಕ್ಕಾಗಿ ಕೊನೆಯ 5 ತಂಡಗಳ ನಡುವೆ ಬಿಗ್​ ಫೈಟ್​ ನಡೆಯಲಿವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.