ETV Bharat / sports

ಪಿಂಕ್​ ಸಿಟಿಯಲ್ಲಿ ಪಂತ್​​ ಅಬ್ಬರ... ಆರ್​ಆರ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಜಯ

author img

By

Published : Apr 22, 2019, 11:53 PM IST

ಪಿಂಕ್​ ಸಿಟಿಯಲ್ಲಿ ಪಿಂಕ್​ ಬಾಯ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಭರ್ಜರಿ ಜಯ ಗಳಿಸಿದೆ. ರಾಜಸ್ಥಾನ್​ ರಾಯಲ್ಸ್ ನೀಡಿದ ಸವಾಲಿನ ಮೊತ್ತ ಬೆನ್ನತ್ತಿದ ಡಿಡಿ ತಂಡವು ರಿಷಬ್​ ಪಂತ್​ ಭರ್ಜರಿ ಅರ್ಧಶತಕದ ನೆರವಿನಿಂದ 6 ವಿಕೆಟ್​ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ ರಾಯಲ್ಸ್​ ಪರ ಅಜಿಂಕ್ಯಾ ರಹಾನೆ ಸಿಡಿಸಿದ ಆಕರ್ಷಕ ಶತಕ ವ್ಯರ್ಥವಾಯ್ತು.

ಡೆಲ್ಲಿ ಕ್ಯಾಪಿಟಲ್ಸ್​ಗೆ ರೋಚಕ ಜಯ

ಜೈಪುರ: ತವರಿನ ಅಂಗಳದಲ್ಲೇ ರಾಜಸ್ಥಾನ್​ ರಾಯಲ್ಸ್​ ನೀಡಿದ ಬೃಹತ್​ ಮೊತ್ತದ ಹೊರತಾಗಿಯೂ, ಡೆಲ್ಲಿ ಬಾಯ್ಸ್​ ಆರ್​ಆರ್​ ವಿರುದ್ಧ ಭರ್ಜರಿ ಜಯ ಸಾಧಿಸಿದೆ.

ಇಲ್ಲಿನ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ನೀಡಿದ 191 ರನ್​ಗಳ ಬೃಹತ್ ​ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ 6 ವಿಕೆಟ್​ಗಳ ಭರ್ಜರಿ ಜಯ ಗಳಿಸಿತು.

ರಹಾನೆ ಶತಕ ವ್ಯರ್ಥ...

ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ ರಾಜಸ್ಥಾನ್​​ ರಾಯಲ್ಸ್​ ಆಟಗಾರರು ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್​ ನಡೆಸಿದರು. ಆರಂಭದಲ್ಲೇ ಸಂಜು ಸ್ಯಾಮ್ಸನ್​ ಶೂನ್ಯ ಸಂಪಾದಿಸಿ ರನ್​ ಔಟ್​ ಆದರು. ಬಳಿಕ ನಾಯಕ ಸ್ಮಿತ್​ ಜೊತೆ ಸೇರಿದ ಆರಂಭಿಕ ಆಟಗಾರ ಅಜಿಂಕ್ಯಾ ರಹಾನೆ, ಭರ್ಜರಿ ಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. 63 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 11 ಬೌಂಡರಿಗಳ ನೆರವಿನಿಂದ ಒಟ್ಟು 105 ರನ್​ ಚಚ್ಚಿದ ರಹಾನೆ ಅಜೇಯರಾಗಿ ಉಳಿದರು. ಬಳಿಕ ಸ್ಮಿತ್​ ಅರ್ಧಶತಕ ಸಿಡಿಸಿ ಅಕ್ಸರ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ಆಟಗಾರರು ಹೆಚ್ಚು ರನ್​ ಕಲೆಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ರಾಜಸ್ಥಾನ್​ ರಾಯಲ್ಸ್​ 6 ವಿಕೆಟ್​ ಕಳೆದುಕೊಂಡು 191 ರನ್​ ಗಳಿಸಿತು.

ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ ಉತ್ತಮ ಆರಂಭ ಪಡೆಯಿತು. ಶಿಖರ್​ ಧವನ್​ ಅರ್ಧಶತಕ ಸಿಡಿಸಿ ಔಟಾದರೆ, ನಾಯಕ ಶ್ರೇಯಸ್​ ಅಯ್ಯರ್​ 4 ರನ್​ಗಳಿಸಿ ನಿರ್ಗಮಿಸಿ ನಿರಾಸೆ ಮೂಡಿಸಿದರು. ಬಳಿಕ ಜೊತೆಯಾದ ಪ್ರಥ್ವಿ ಶಾ ಹಾಗೂ ರಿಶಬ್​ ಪಂತ್​ ಜವಾಬ್ದಾರಿಯುತ ಆಟವಾಡಿದರು. ಶಾ 42 ರನ್​ ಗಳಿಸಿ ಔಟಾದರೆ, ಪಂತ್​ 78 ರನ್ ಗಳಿಸುವ ಮೂಲಕ ವಿಜಯದ ರನ್​ ಬಾರಿಸಿ ತಂಡಕ್ಕೆ ಗೆಲುವಿನ ಕಾಣಿಕೆ ಕೊಟ್ಟರು. ಈ ಮೂಲಕ ಡೆಲ್ಲಿ 6 ವಿಕೆಟ್​ಗಳಿಂದ ರಾಜಸ್ಥಾನ್​ ಮಣಿಸಿ ವಿಜಯದ ನಗೆ ಬೀರಿತು.

Intro:Body:

cricket

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.