ಸೌಥಾಂಪ್ಟನ್: ಇಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 5ನೇ ದಿನವಾದ ನಿನ್ನೆ ನ್ಯೂಜಿಲೆಂಡ್ ವಿರುದ್ಧ ಭಾರತ 32 ರನ್‌ಗಳ ಮುನ್ನಡೆ ಪಡೆದಿದೆ. ಕಿವೀಸ್ ತಂಡವನ್ನು 249 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದ ಕೊಹ್ಲಿ ಪಡೆ, ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದು, ಎರಡು ವಿಕೆಟ್ ನಷ್ಟಕ್ಕೆ 64 ರನ್‌ಗಳಿಸಿ ಮೀಸಲು ದಿನವಾದ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ಭಾರತದ ಪರ 2ನೇ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ಲ್ ಕ್ರಮವಾಗಿ 30 ಹಾಗೂ 8 ರನ್‌ಗಳಿಸಿ ಟೀಂ ಸೌಥಿ ಎಲ್‌ಬಿ ಬಲೆಗೆ ಬಿದ್ದರು. 25 ರನ್‌ಗಳ ಅಂತರದಲ್ಲಿ ಆರಂಭಿಕರ ವಿಕೆಟ್ ಪತನದ ಬಳಿಕ ಟೆಸ್ಟ್ ಪರಿಣಿತ ಬ್ಯಾಟ್ಸಮನ್ ಚೇತೇಶ್ವರ ಪೂಜಾರ 12 ರನ್ ಹಾಗೂ ನಾಯಕ ವಿರಾಟ್ ಕೊಹ್ಲಿ 8 ರನ್‌ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಇದನ್ನೂ ಓದಿ: WTC Final: ಇಶಾಂತ್, ಶಮಿ ದಾಳಿಗೆ ಬೆದರಿದ ಕಿವೀಸ್- ಬೋಜನ ವಿರಾಮಕ್ಕೆ ತಂಡದ ಮೊತ್ತ 135ಕ್ಕೆ 5
ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 249ರನ್‌ಗಳಿಸಿ ಸರ್ವ ಪತನಗೊಂಡು 32 ರನ್‌ಗಳ ಮುನ್ನಡೆ ಪಡೆಯಿತು. ಭಾರತದ ಪರ ವೇಗಿ ಶಮಿ ಮಾರಕ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಕೇನ್ ವಿಲಿಯಮ್ಸನ್ ಪಡೆಗೆ ಆಘಾತ ನೀಡಿದರು. ಶಮಿ 8 ಮೇಡನ್ ಓವರ್‌ಗಳ ಸಹಿತ 4 ವಿಕೆಟ್ ಪಡೆದು 76 ರನ್ ಬಿಟ್ಟುಕೊಟ್ಟರು.