ETV Bharat / sports

ಬಾಂಗ್ಲಾ ವಿರುದ್ಧ 2-0 ಅಂತರದಲ್ಲಿ ಸರಣಿ ಗೆದ್ದ ವಿಂಡೀಸ್​​

ಬಾಂಗ್ಲಾದೇಶದ ವಿರುದ್ಧದ ಎರಡು ಟೆಸ್ಟ್​​ಗಳ ಸರಣಿಯನ್ನು ವೆಸ್ಟ್​ ಇಂಡೀಸ್​ 2-0 ಅಂತರದಲ್ಲಿ ವಶಪಡಿಸಿಕೊಂಡಿತು.

Warrican, Braithwaite help visitors win series 2-0
ಸರಣಿ ಗೆದ್ದ ವಿಂಡೀಸ್​​
author img

By

Published : Feb 15, 2021, 3:03 PM IST

ಢಾಕಾ( ಬಾಂಗ್ಲಾದೇಶ): ಶೇರ್​ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಟೆಸ್ಟ್​​ನಲ್ಲಿ ಬಿಗಿ ಬೌಲಿಂಗ್​ ದಾಳಿಯಿಂದಾಗಿ ಗುರಿ ನೀಡಲಾಗಿದ್ದ ಅಲ್ಪಮೊತ್ತವನ್ನು ಬೆನ್ನಟ್ಟಲಾಗದೇ ಬಾಂಗ್ಲಾದೇಶವು ವೆಸ್ಟ್​ ಇಂಡೀಸ್​ ತಂಡದ ಮುಂದೆ ಮಂಡಿಯೂರಿತು. ಈ ಮೂಲಕ ವಿಂಡೀಸ್​ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.

ಟೆಸ್ಟ್‌ನ ಅಂತಿಮ ದಿನದಂದು 231 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಉತ್ತಮ ಆರಂಭ ಪಡೆದರಾದರೂ ವಿಂಡೀಸ್​ ದಾಳಿಗೆ 213ಗೆ ಧೂಳೀಪಟವಾಯಿತು. ರಕೀಮ್​ ಕಾರ್ನವಾಲ್​ಗೆ 4 ವಿಕೆಟ್​, ಜೋನಲ್​ ಮತ್ತು ಕ್ರೆಗ್​ ಬ್ರಾಥ್​ವೈಟ್​ ತಲಾ ಮೂರು ವಿಕೆಟ್​ ಪಡೆದು ವಿಂಡೀಸ್​​ಗೆ ಗೆಲುವಿನ ಕೊಡುಗೆ ನೀಡಿದರು.

ಆರಂಭಿಕ ಆಟಗಾರರಾದ ತಮೀಮ್​ ಇಕ್ಬಾಲ್ (50)​ ಮತ್ತು ಸೌಮ್ಯ ಸರ್ಕಾರ್ (13)​ ಮೊದಲ ವಿಕೆಟ್​ಗೆ 59 ರನ್​ಗಳ ಜೊತೆಯಾಟ ನೀಡಿದರು. ನಜ್ಮಲ್​ ಹೊಸೈನ್​ ಶಾಂಟೋ (11), ಮೊಮಿನುಲ್​ ಹಕ್​​ (26), ಮುಷ್ಫಿಕರ್ ರಹೀಂ (14), ಮೊಹಮ್ಮದ್ ಮಿಥನ್​ (10) ಸೇರಿದಂತೆ ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ.

ಒಂಬತ್ತು ವಿಕೆಟ್ ಪಡೆದ ರಕೀಮ್​ ಕಾರ್ನ್‌ವಾಲ್​​ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಎರಡು ಪಂದ್ಯಗಳ ಸರಣಿಯಲ್ಲಿ 231 ರನ್ ಗಳಿಸಿದ್ದಕ್ಕಾಗಿ ಬೊನ್ನರ್​​​ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

ಸಂಕ್ಷಿಪ್ತ ಸ್ಕೋರ್​: ವೆಸ್ಟ್​ ಇಂಡೀಸ್​ ಮೊದಲ ಇನ್ನಿಂಗ್ಸ್​- 409 (ಎನ್​.ಬೋನಾರ್ 90, ಜೋಷ್​ ಡಿ ಸಿಲ್ವಾ 92; ಅಬು ಜಯದ್​ 98/4, ತಾಯಿಜುಲ್​ ಇಸ್ಲಾಂ 108/4)

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್​-296 (ರಹೀಂ 54, ಲಿತ್ತನ್​ ದಾಸ್​ 71, ಮೆಹದಿ ಹಸನ್ 57; ಆರ್.ಕಾರ್ನ್​ವಾಲ್ 74/5, ಗೇಬ್ರಿಯಲ್​ 70/3)

ವಿಂಡೀಸ್​ ಎರಡನೇ ಇನ್ನಿಂಗ್ಸ್​-117-ಎನ್​.ಬೋನಾರ್​ 38; ತಾಯಿಜುಲ್​ ಇಸ್ಲಾಂ 36/4, ನಯೀಮ್​ 34/3

ಬಾಂಗ್ಲಾ ಎರಡನೇ ಇನ್ನಿಂಗ್ಸ್​-ಮೆಹದಿ ಹಸನ್​ ತಮೀಮ್​ ಇಕ್ಬಾಲ್ 50; ಕಾರ್ನ್​ವಾಲ್​ 105/4, ಕ್ರೆಗ್​ ಬ್ರಾಥ್​ವೈಟ್​ 25/3

ETV Bharat Logo

Copyright © 2024 Ushodaya Enterprises Pvt. Ltd., All Rights Reserved.