ಮೆಲ್ಬೋರ್ನ್ : ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ನಡೆಯುತ್ತಿದ್ದು ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿದೆ. ಕೆಲ ಬದಲಾವಣೆಗಳೊಂದಿಗೆ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದೆ. ಕಳೆದ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ವೃದ್ಧಿಮಾನ್ ಸಹಾಗೆ ವಿಶ್ರಾಂತಿ ನೀಡಿದ್ರೆ, ಪೃಥ್ವಿ ಶಾ ಅವರನ್ನು ಕೈಬಿಡಲಾಗಿದೆ. ನಾಯಕ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ತಂಡದಲ್ಲಿ ಆಡುತ್ತಿಲ್ಲ. ಇನ್ನು ವೇಗಿ ಮೊಹಮ್ಮದ್ ಶಮಿ ಗಾಯದಿಂದ ಹೊರಗುಳಿದಿದ್ದಾರೆ.
-
Australia have won the toss and opted to bat first in the Boxing Day Test at MCG. #AUSvIND pic.twitter.com/vNykQz71G0
— BCCI (@BCCI) December 25, 2020 " class="align-text-top noRightClick twitterSection" data="
">Australia have won the toss and opted to bat first in the Boxing Day Test at MCG. #AUSvIND pic.twitter.com/vNykQz71G0
— BCCI (@BCCI) December 25, 2020Australia have won the toss and opted to bat first in the Boxing Day Test at MCG. #AUSvIND pic.twitter.com/vNykQz71G0
— BCCI (@BCCI) December 25, 2020
ಅವರ ಸ್ಥಾನವನ್ನು ಶುಬ್ಮನ್ ಗಿಲ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್ ಮತ್ತು ರಿಷಭ್ ಪಂತ್ ತುಂಬಲಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನೆಡಸಲಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 100ನೇ ಟೆಸ್ಟ್ಗೆ ಸಾಕ್ಷಿಯಾಗಲಿದೆ.