ಲಂಡನ್: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಆ್ಯಶಸ್ 2023 ಸರಣಿಯ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ವಿಕೆಟ್ ಉರುಳಿಸಲು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ವಿಭಿನ್ನ ಫೀಲ್ಡಿಂಗ್ ಸೆಟ್ ಮಾಡಿದ್ದರು. ಆಸ್ಟ್ರೇಲಿಯಾ ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ಏಕಾಂಗಿಯಾಗಿ ಶತಕ ಬಾರಿಸಿದ ಉಸ್ಮಾನ್ ಖವಾಜಾ ಆಂಗ್ಲ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಮೊದಲ ದಿನದ ಅಂತ್ಯಕ್ಕೆ ಕ್ರೀಸ್ಗಿಳಿದ ಖವಾಜಾ ಮೂರನೇ ದಿನವೂ ಆಟ ಮುಂದುವರೆಸಿದ್ದರು. ಇಂಗ್ಲೆಂಡ್ಗೆ ತಲೆನೋವಾಗಿದ್ದ ಖವಾಜಾ ವಿಕೆಟ್ ಕಬಳಿಸಲು ಆಕ್ರಮಣಕಾರಿ ಫೀಲ್ಡಿಂಗ್ ಸೆಟ್ ಮಾಡುವ ಮೂಲಕ ಸ್ಟೋಕ್ಸ್ ಕೊನೆಗೂ ಯಶಸ್ಸು ಕಂಡರು.
-
SIX catchers in and the plan works 👏
— England Cricket (@englandcricket) June 18, 2023 " class="align-text-top noRightClick twitterSection" data="
Khawaja gone for 141.
COME ON ENGLAND! 🏴 #EnglandCricket | #Ashes pic.twitter.com/6MLJcQxzCX
">SIX catchers in and the plan works 👏
— England Cricket (@englandcricket) June 18, 2023
Khawaja gone for 141.
COME ON ENGLAND! 🏴 #EnglandCricket | #Ashes pic.twitter.com/6MLJcQxzCXSIX catchers in and the plan works 👏
— England Cricket (@englandcricket) June 18, 2023
Khawaja gone for 141.
COME ON ENGLAND! 🏴 #EnglandCricket | #Ashes pic.twitter.com/6MLJcQxzCX
ನಾಲ್ಕು ಸೆಷನ್ ಬ್ಯಾಟಿಂಗ್ ಮಾಡಿದ ಖವಾಜಾ ತಮ್ಮ 15ನೇ ಟೆಸ್ಟ್ ಶತಕ ಪೂರೈಸಿದರು. ಹೀಗಾಗಿ ಇಂಗ್ಲೆಂಡ್ ತಂಡದ ಮೇಲೆ ಒತ್ತಡ ಹೇರಿದ್ದರು. 43.92 ಸ್ಟ್ರೈಕ್ ರೇಟ್‌ನಲ್ಲಿ 321 ಎಸೆತಗಳನ್ನು ಎದುರಿಸಿ 141 ರನ್ ಗಳಿಸಿದ ಎಡಗೈ ಬ್ಯಾಟರ್ ಆಂಗ್ಲರ ಏಳು ಮಂದಿ ಬೌಲರ್ಗಳನ್ನು ಯಶಸ್ವಿಯಾಗಿ ಎದುರಿಸಿದರು. ಇಂಗ್ಲೆಂಡ್ನಲ್ಲಿ ಖವಾಜಾ ಗಳಿಸಿದ ಮೊದಲ ಶತಕ ಇದಾಗಿದೆ.
2ನೇ ದಿನದಂದು 150 ರನ್ ಗಡಿ ದಾಟುವ ಮುನ್ನವೇ ಆಸ್ಟ್ರೇಲಿಯಾ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಹೀಗಾಗಿ ಆಸ್ಟ್ರೇಲಿಯಾದ ತಂಡಕ್ಕೆ ಆಂಗ್ಲರ ಮೊದಲ ಇನ್ನಿಂಗ್ಸ್ 393 ರನ್ಗೆ ತಿರುಗೇಟು ನೀಡಲು ದೊಡ್ಡ ಇನ್ನಿಂಗ್ಸ್ವೊಂದರ ಅಗತ್ಯವಿತ್ತು. ಆರಂಭಿಕರಾಗಿ ಕಣಕ್ಕಿಳಿದ ಖವಾಜಾ ಆಸೀಸ್ ಇನ್ನಿಂಗ್ಸ್ಗೆ ಬೆನ್ನೆಲುಬಾಗಿ ನಿಂತು ಶತಕದ ನಗೆ ಬೀರಿದರು.
-
The dismissal of Usman Khawaja.
— Johns. (@CricCrazyJohns) June 18, 2023 " class="align-text-top noRightClick twitterSection" data="
A great tactical move to get the well settled Khawaja. pic.twitter.com/y5EJ14qYGj
">The dismissal of Usman Khawaja.
— Johns. (@CricCrazyJohns) June 18, 2023
A great tactical move to get the well settled Khawaja. pic.twitter.com/y5EJ14qYGjThe dismissal of Usman Khawaja.
— Johns. (@CricCrazyJohns) June 18, 2023
A great tactical move to get the well settled Khawaja. pic.twitter.com/y5EJ14qYGj
ಖವಾಜಾ ರನ್ ಗಳಿಕೆಗೆ ಕಡಿವಾಣ ಹಾಕುವ ಸಲುವಾಗಿ ಸ್ಟೋಕ್ಸ್ ಅನೇಕ ಬೌಲಿಂಗ್ ಬದಲಾವಣೆ ಮಾಡಿದರು. ಖವಾಜಾಗೆ ಸ್ಟ್ರೈಕ್ ಬದಲಾವಣೆ ಮಾಡಲು ಅವಕಾಶ ಸಿಗದ ನಿಟ್ಟಿನಲ್ಲಿ ಕಟ್ಟಿಹಾಕಿದರು. ಆದರೆ ಧೃತಿಗೆಡದ ಖವಾಜಾ ತಾಳ್ಮೆಯ ಆಟ ಮುಂದುವರೆಸಿದ್ದರು. ಈ ವೇಳೆ ಇಂಗ್ಲೆಂಡ್ ನಾಯಕ ವಿಭಿನ್ನ ಬದಲಾವಣೆ ಮೂಲಕ ಪ್ರತ್ಯಸ್ತ್ರ ಹೂಡಿದರು. ಸ್ಟೋಕ್ಸ್ ಮಾಡಿದ ಹೊಸ ಕ್ಷೇತ್ರರಕ್ಷಣಾ ತಂತ್ರಗಳಿಂದ ಒತ್ತಡಕ್ಕೆ ಸಿಲುಕಿದಂತೆ ಕಂಡುಬಂದ ಖವಾಜಾ ಮುನ್ನುಗ್ಗಿ ಆಡುವ ಯತ್ನದಲ್ಲಿ ವಿಫಲರಾಗಿ ವಿಕೆಟ್ ಕಳೆದುಕೊಂಡರು.
113ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಇಂಗ್ಲೆಂಡ್ ವೇಗಿ ಓಲಿ ರಾಬಿನ್ಸನ್ ಯಾರ್ಕರ್ ಎಸೆದು ಯಶಸ್ಸು ಕಂಡರು. ಕ್ರೀಸ್ನಿಂದ ಮುಂದೆ ಬಂದು ಬಾರಿಸಲು ಮುಂದಾದ ಖವಾಜಾ ಕ್ಲೀನ್ ಬೌಲ್ಡ್ ಆದರು. ಈ ತಂತ್ರಕ್ಕಾಗಿ ಸ್ಟೋಕ್ಸ್ ಆರು ಮಂದಿ ಫೀಲ್ಡರ್ಗಳನ್ನು ಅರ್ಧ ಕ್ರೀಸ್ ಮುಂಭಾಗದಲ್ಲಿ ಬ್ಯಾಟರ್ಗೆ ಎದುರಾಗಿ ನಿಲ್ಲಿಸಿದ್ದರು. ಇದರಿಂದ ಪ್ರೇರಿತಗೊಂಡು ಖವಾಜಾ ವಿಕೆಟ್ ಬಿಟ್ಟು ಮುಂದೆ ಬಂದಿದ್ದರು. ಕೊನೆಗೆ ಬೆನ್ ಸ್ಟೋಕ್ಸ್ ಕ್ಷೇತ್ರರಕ್ಷಣಾ ರಣತಂತ್ರ ಯಶಸ್ಸು ಕಂಡಿತು.
ಎಂದಿನಂತೆ ಇನ್ನಿಂಗ್ಸ್ನುದ್ದಕ್ಕೂ ಏಕಾಗ್ರತೆ, ತಾಳ್ಮೆ ತೋರಿದ ಖವಾಜಾ 14 ಬೌಂಡರಿ ಮತ್ತು 3 ಸಿಕ್ಸ್ರ್ ಸಹಿತ 141 ರನ್ ಬಾರಿಸಿದರು. ಜೊತೆಗೆ ಆರಂಭಿಕರಾಗಿ ಆಸೀಸ್ ಪರ 2,000 ರನ್ ಗಳಿಸಿದ ದಾಖಲೆಗೆ ಪಾತ್ರರಾದರು.
ಇದನ್ನೂ ಓದಿ: Ashes 2023: ಆಸ್ಟ್ರೇಲಿಯಾಕ್ಕೆ ಕವಾಜಾ ಶತಕದ ನೆರವು.. 7 ರನ್ ಹಿನ್ನಡೆಯಿಂದ ಅನುಭವಿಸಿದ ಕಾಂಗರೂ ಪಡೆ