ಮುಂಬೈ: ಇಂಗ್ಲೆಂಡ್ನಿಂದ ವಾಪಸ್ ಆಗಿರುವ ಶ್ರೀಲಂಕಾ ತಂಡದಲ್ಲಿ ಕೆಲವರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿರುವ ಕಾರಣ ಸಂಪೂರ್ಣ ತಂಡ ಕ್ವಾರಂಟೈನ್ಗೊಳಗಾಗಿದೆ. ಹೀಗಾಗಿ ಬರುವ ಜುಲೈ 13ರಿಂದ ಆರಂಭಗೊಳ್ಳಬೇಕಾಗಿದ್ದ ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ಜುಲೈ 17ಕ್ಕೆ ಮುಂದೂಡಿಕೆಯಾಗಿದೆ.
ಶ್ರೀಲಂಕಾ ಕ್ರಿಕೆಟ್ ಕ್ಯಾಂಪ್ನಲ್ಲಿ ಕೊರೊನಾ ವೈರಸ್ ದೃಢಪಟ್ಟಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಎಎನ್ಐ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಲಂಕಾದ ಬ್ಯಾಟಿಂಗ್ ಕೋಚ್ ಹಾಗೂ ವಿಶ್ಲೇಷಕರಿಗೆ ಕೊರೊನಾ ದೃಢಗೊಂಡಿದೆ. ಹೀಗಾಗಿ ಸಂಪೂರ್ಣ ತಂಡ ಕ್ವಾರಂಟೈನ್ನಲ್ಲಿದ್ದು, ಮುಂದಿನ ಕೆಲ ದಿನಗಳ ಕಾಲ ನಿರಂತರವಾಗಿ ಟೆಸ್ಟ್ಗೆ ಒಳಗಾಗಲಿದೆ.
-
India-Sri Lanka ODI series likely to be postponed to July 17, due to COVID19 cases in the Sri Lankan camp: BCCI president Sourav Ganguly to ANI
— ANI (@ANI) July 9, 2021 " class="align-text-top noRightClick twitterSection" data="
(file photo) pic.twitter.com/PJzuhEY0rN
">India-Sri Lanka ODI series likely to be postponed to July 17, due to COVID19 cases in the Sri Lankan camp: BCCI president Sourav Ganguly to ANI
— ANI (@ANI) July 9, 2021
(file photo) pic.twitter.com/PJzuhEY0rNIndia-Sri Lanka ODI series likely to be postponed to July 17, due to COVID19 cases in the Sri Lankan camp: BCCI president Sourav Ganguly to ANI
— ANI (@ANI) July 9, 2021
(file photo) pic.twitter.com/PJzuhEY0rN
ಈಗಾಗಲೇ ಆಯೋಜನೆಗೊಂಡಿರುವ ಪ್ರಕಾರ ಉಭಯ ತಂಡಗಳ ನಡುವಿನ ಕ್ರಿಕೆಟ್ ಸರಣಿ ಜುಲೈ 13ರಿಂದ ಆರಂಭಗೊಳ್ಳಬೇಕಾಗಿತ್ತು. ಮೊದಲು ಮೂರು ಏಕದಿನ ಪಂದ್ಯ ತದನಂತರ ಮೂರು ಟಿ-20 ಪಂದ್ಯಗಳು ನಡೆಯಬೇಕಾಗಿತ್ತು. ಆದರೆ ಇದೀಗ ವೇಳಾಪಟ್ಟಿ ಮರು ನಿಗದಿಯಾಗಲಿದೆ.
ಇದನ್ನೂ ಓದಿರಿ: 'ಹುಡ್ಗೀರು ಇಷ್ಟೊಂದು ಸಲ ತಮ್ಮ DP ಕೂಡ ಚೇಂಜ್ ಮಾಡಲ್ಲ': ಲಂಕಾ ಕ್ರಿಕೆಟ್ ಟ್ರೋಲ್ ಮಾಡಿದ ಜಾಫರ್