ಕರಾಚಿ(ಇಸ್ಲಾಮಾಬಾದ್): ಐಸಿಸಿ ಟಿ20 ವಿಶ್ವಪ್ನಲ್ಲಿ ಪಾಕ್ ವಿರುದ್ಧ ಭಾರತ 10 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. ಈ ವಿಚಾರವಾಗಿ ಮಾತನಾಡಿರುವ ಪಾಕ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಇಂಜಮಾಮ್-ಉಲ್-ಹಕ್, ಉಭಯ ತಂಡಗಳ ನಡುವಿನ ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನವೇ ಟೀಂ ಇಂಡಿಯಾ ಒತ್ತಡಕ್ಕೊಳಗಾಗಿ ಹೆದರಿತ್ತು ಎಂದಿದ್ದಾರೆ.
ಸುದ್ದಿಗೋಷ್ಠಿವೊಂದರಲ್ಲಿ ಭಾಗಿಯಾಗಿದ್ದ ವೇಳೆ ಮಾತನಾಡಿರುವ ಪಾಕ್ ಮಾಜಿ ಕ್ಯಾಪ್ಟನ್, ಪಾಕ್ ವಿರುದ್ಧದ ಟಿ20 ಪಂದ್ಯ ಆರಂಭವಾಗುವ ಮೊದಲೇ ಭಾರತ ತಂಡ ಒತ್ತಡದಲ್ಲಿತ್ತು, ಜೊತೆಗೆ ಹೆದರಿತ್ತು. ಟಾಸ್ ಮಾಡಲು ಬಂದ ವಿರಾಟ್ ಕೊಹ್ಲಿ ಅವರನ್ನು ನೋಡಿದಾಗ ಆತಿಥೇಯರು ಒತ್ತಡದಲ್ಲಿದ್ದರು ಎಂಬುದು ಸ್ಪಷ್ಟವಾಗಿತ್ತು ಎಂದು ಹೇಳಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದ್ದ ಟೀಂ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಮತ್ತಷ್ಟು ಒತ್ತಡಕ್ಕೆ ಸಿಲುಕಿಕೊಂಡಿತ್ತು. ಈ ವೇಳೆ ನಮ್ಮ ತಂಡದ ಬಾಡಿ ಲಾಂಗ್ವೇಜ್ ಅವರಿಗಿಂತಲೂ ಉತ್ತಮವಾಗಿತ್ತು. ಮೈದಾನದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಅವರೇ ಒತ್ತಡದಲ್ಲಿದ್ದರು ಎಂದಿದ್ದಾರೆ.
ಇದನ್ನೂ ಓದಿ: New Covid variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೋವಿಡ್ ಕರಿನೆರಳು, ಮುಂದೂಡಿಕೆ?
ಭಾರತ ತಂಡ ಯಾವತ್ತೂ ಅವರು ಆಡಿದ ರೀತಿಯಲ್ಲಿ ಪಾಕ್ ವಿರುದ್ಧ ಆಡಲಿಲ್ಲ. ಅವರದು ಉತ್ತಮ ಟಿ20 ತಂಡವಾಗಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ 2-3 ವರ್ಷಗಳ ಭಾರತದ ಪ್ರದರ್ಶನ ನೋಡಿದರೆ ಗೊತ್ತಾಗುತ್ತದೆ ಎಂದು ಹೇಳಿದರು.
ಪಾಕ್ ವಿರುದ್ಧದ ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ತುಂಬಾ ಟೀಕೆ ಎದುರಿಸಿತು. ಈ ವೇಳೆ 3-4 ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡಿದ್ದರು. ಆದರೆ ಸ್ಯಾಂಟ್ನರ್ ಮತ್ತು ಸೋಧಿ ಬೌಲಿಂಗ್ ದಾಳಿ ಎದುರಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ 10 ವಿಕೆಟ್ಗಳ ಅಂತರ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ 8 ವಿಕೆಟ್ಗಳ ಅಂತರದ ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿತ್ತು. ಜೊತೆಗೆ, ಸೂಪರ್-12 ಹಂತದಿಂದ ಹೊರಬಿದ್ದಿತ್ತು.