ದುಬೈ: ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಜೂನ್ 3ರಂದು ಇಂಗ್ಲೆಂಡ್ಗೆ ಬಂದಿಳಿಯಲಿದೆ ಎಂದು ತಿಳಿಸಿರುವ ಐಸಿಸಿ, ತಂಡದವರು ಹೋಟೆಲ್ನಲ್ಲಿ ಐಸೊಲೇಷನ್ ಆಗಲಿದ್ದಾರೆ. ಆದರೆ ಅಲ್ಲಿ ಕಠಿಣ ಕ್ವಾರಂಟೈನ್ ಆಗಲಿದೆಯೇ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ನ್ಯೂಜಿಲ್ಯಾಂಡ್ ಮತ್ತು ಭಾರತ ತಂಡ ಸೌತಾಂಪ್ಟನ್ನಲ್ಲಿ ಜೂನ್ 18ರಿಂದ 22ರವರೆಗೆ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ನಡೆಯಲಿದೆ. ನ್ಯೂಜಿಲ್ಯಾಂಡ್ ತಂಡ ಈಗಾಗಲೇ ಕ್ವಾರಂಟೈನ್ ಮುಗಿಸಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಿದ್ಧವಾಗುತ್ತಿದೆ. ಭಾರತ ತಂಡ ಕೂಡ ಜೂನ್ 3ರಂದು ಇಂಗ್ಲೆಂಡ್ನಲ್ಲಿ ಇಳಿಯುತ್ತಿದ್ದಂತೆ ಕೋವಿಡ್ ಟೆಸ್ಟ್ಗೆ ಒಳಗಾಗಲಿದೆ ಎಂದು ತಿಳಿದುಬಂದಿದೆ.
"17 ಮೇ 2021 ರಂದು ಬಿಡುಗಡೆಯಾದ ದಿ ಹೆಲ್ತ್ ಪ್ರೊಟೆಕ್ಷನ್ (ಕೊರೊನಾವೈರಸ್, ಇಂಟರನ್ಯಾಷನಲ್ ಟ್ರಾವೆಲ್ ಅಂಡ್ ಆಪರೇಟರ್ ಲಿಯಾಬಿಲಿಟಿ) ರೆಗ್ಯುಲೇಷನ್ಸ್ 2021 ರಲ್ಲಿ ವಿವರಿಸಿರುವಂತೆ WTC ಫೈನಲ್ ಪಂದ್ಯಕ್ಕೆ ಯುಕೆ ಸರ್ಕಾರವು ಈಗ ವಿನಾಯಿತಿ ನೀಡಿದೆ" ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಯುಕೆಗೆ ದಾವಿಸುತ್ತಿದ್ದಂತೆ ನೇರವಾಗಿ ಹ್ಯಾಂಪ್ಷೈರ್ ಬೌಲ್ನಲ್ಲಿರುವ ಹೋಟೆಲ್ಗೆ ತೆರಳಲಿದ್ದಾರೆ. ಅಲ್ಲಿ ಕ್ವಾರಂಟೈನ್ಗೆ ಒಳಗಾಗುವ ಮುನ್ನ ಅವರನ್ನು ಮತ್ತೆ ಪರೀಕ್ಷಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಐಸಿಸಿ ತಿಳಿಸಿದೆ.
ಆದರೆ ಈ ಪ್ರಕಟಣೆಯಲ್ಲಿ ಭಾರತ ತಂಡ ಹೋಟೆಲ್ನಲ್ಲಿ ಕಠಿಣ ಕ್ವಾರಂಟೈನ್ಗೆ ಒಳಗಾಗಾಲಿದೆಯೇ ಎಂಬುದನ್ನು ಐಸಿಸಿ ಸ್ಪಷ್ಟಪಡಿಸಿಲ್ಲ. ಇಸಿಬಿ ನ್ಯೂಜಿಲ್ಯಾಂಡ್ ತಂಡಕ್ಕೆ ತರಬೇತಿಗೂ ಮುನ್ನ 3 ದಿನಗಳ ಕಡ್ಡಾಯ ರೂಮ್ ಕ್ವಾರಂಟೈನ್ಗೆ ಒಳಪಡಿಸಿತ್ತು. ಈ ಅವಧಿಯಲ್ಲಿ ನಿರಂತರ ಕೋವಿಡ್ ಟೆಸ್ಟ್ಗಳು ನಡೆಯುತ್ತಿದ್ದವು. ಆದರೆ ಭಾರತ ತಂಡ ಮುಂಬೈನಲ್ಲೇ 14 ದಿನಗಳ ಕಠಿಣ ಕ್ವಾರಂಟೈನ್ಗೆ ಒಳಗಾಗಿರುವುದರಿಂದ ಇಂಗ್ಲೆಂಡ್ನಲ್ಲಿ ಸಾಮಾನ್ಯ ಕ್ವಾರಂಟೈನ್ಗೆ ಒಳಗಾಗಬಹುದು ಎನ್ನಲಾಗುತ್ತಿದೆ.
ಇದನ್ನು ಓದಿ:ಸೆಪ್ಟೆಂಬರ್ನಲ್ಲಿ ಐಪಿಎಲ್ ಪುನಾರಂಭ: ಈ ದೇಶಗಳ ಆಟಗಾರರು ಬರೋದು ಡೌಟ್!