ETV Bharat / sports

ರಿಯಲ್​ ಎಸ್ಟೇಟ್​ ವ್ಯವಹಾರ ಶುರು ಮಾಡಿದ ಯುವ ಕ್ರಿಕೆಟರ್​ ಇಶಾನ್ ಕಿಶನ್

author img

By

Published : Dec 14, 2022, 7:35 PM IST

ರಾಂಚಿಯಲ್ಲಿ ಎಂ.ಎಸ್‌ ಧೋನಿ ಫಾರ್ಮ್ ಹೌಸ್‌ ಸಮೀಪದಲ್ಲೇ ಶಗುನ್ ಇಶಾನ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ರಿಯಲ್ ಎಸ್ಟೇಟ್‌ ಉದ್ಯಮ ಆರಂಭಿಸಲು ಯುವ ಕ್ರಿಕೆಟಿಗ ಇಶಾನ್ ಕಿಶನ್ ನಿರ್ಧರಿಸಿದ್ದಾರೆ.

indian-cricketer-ishan-kishan-in-real-estate-business
ರಿಯಲ್​ ಎಸ್ಟೇಟ್​ಗೆ ಯುವ ಕ್ರಿಕೆಟರ್​ ಎಂಟ್ರಿ... ಎಂಎಸ್​​ ಧೋನಿ ನೆರೆಯವರಾದ ಇಶಾನ್ ಕಿಶನ್!

ರಾಂಚಿ(ಜಾರ್ಖಂಡ್​): ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಕಂ​ ಎಡಗೈ ಬ್ಯಾಟರ್​ ಇಶಾನ್ ಕಿಶನ್ ಜಾರ್ಖಂಡ್​ ರಾಜಧಾನಿ ರಾಂಚಿಯಲ್ಲಿ ರಿಯಲ್​ ಎಸ್ಟೇಟ್​ ಪ್ರಾಜೆಕ್ಟ್​ ಆರಂಭಿಸಲು ಮುಂದಾಗಿದ್ದಾರೆ. ಇಲ್ಲಿನ ಸಿಮ್ಲಿಯಾ ರಿಂಗ್ ರಸ್ತೆಯಲ್ಲಿರುವ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಫಾರ್ಮ್‌ಹೌಸ್‌ ಸಮೀಪದಲ್ಲಿ ಇಶಾನ್​ ಕಿಶನ್ ಅವರ ಶಗುನ್ ಇಶಾನ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಶುರುವಾಗಲಿದೆ.

ರಾಂಚಿಯ ಜೆಎಸ್‌ಸಿಎ ಮೈದಾನದಲ್ಲಿ ಜಾರ್ಖಂಡ್ ಮತ್ತು ಕೇರಳ ತಂಡಗಳ ನಡುವೆ ರಣಜಿ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಶಾನ್ ಕಿಶನ್ ಜಾರ್ಖಂಡ್‌ ಪರ ಆಡುತ್ತಿದ್ದಾರೆ. ಇತ್ತೀಚೆಗೆ, ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅತಿ ವೇಗದ ದ್ವಿಶತಕ ಸಿಡಿಸಿ ದಾಖಲೆ ಮಾಡಿದ್ದಾರೆ. ಕೇವಲ 126 ಎಸೆತಗಳಲ್ಲಿ 200 ರನ್ ಗಳಿಸಿದ್ದ ಕ್ರಿಕೆಟಿಗ​ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಇದನ್ನೂ ಓದಿ: ಮಗನ ಅತ್ಯದ್ಭುತ ಆಟ ನೋಡಿ ಹೆಮ್ಮೆ ಆಗುತ್ತಿದೆ.. ಇಶಾನ್ ಕಿಶನ್​ ಪೋಷಕರ ಸಂತಸ

ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನದಿಂದ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್‌ ಸೇರಿಕೊಂಡಿದ್ದರು. ಇಶಾನ್​ ಮೂಲತಃ ಬಿಹಾರದವರು. ಕ್ರಿಕೆಟ್​ನಲ್ಲಿ ಜಾರ್ಖಂಡ್‌ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಅಜ್ಜಿ ಡಾ.ಸಾವಿತ್ರಿ ಶರ್ಮಾ ಬಿಹಾರದ ಪ್ರಸಿದ್ಧ ಸ್ತ್ರೀರೋಗತಜ್ಞರು. ಅಜ್ಜ ಶತ್ರುಘ್ನ ಪ್ರಸಾದ್ ಸಿಂಗ್ ನಿವೃತ್ತ ಇಂಜಿನಿಯರ್. ತಂದೆ ಪ್ರಣವ್ ಕುಮಾರ್ ಪಾಂಡೆ ಪ್ರಸಿದ್ಧ ಔಷಧಿ ಪೂರೈಕೆದಾರರು. ಇದರ ಜೊತೆಗೆ, ರಿಯಲ್ ಎಸ್ಟೇಟ್ ಕೆಲಸವೂ ಇದೆ. ಪೋಷಕರು ಪಾಟ್ನಾದಲ್ಲಿ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ವಿಶ್ವದಾಖಲೆಯ ದ್ವಿಶತಕ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.