ನವದೆಹಲಿ: ಕಾಂಗರೂ ನಾಡಿನಲ್ಲಿ ನಡೆಯುವ ಟಿ20 ವಿಶ್ವಕಪ್ ಸಮರಕ್ಕೆ ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿದೆ. ಅದಕ್ಕೂ ಮೊದಲು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲಿದೆ. ಈ ಮಧ್ಯೆಯೇ ತಂಡದ ಹೊಸ ಜರ್ಸಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಿಡುಗಡೆ ಮಾಡಿದೆ.
ಮಿಂಚುತ್ತಿದೆ ಭಾರತದ ಹೊಸ ಜರ್ಸಿ: ಟೀಮ್ ಇಂಡಿಯಾದ ಹೊಸ ಜೆರ್ಸಿಯನ್ನು ಬಿಸಿಸಿಐ ಭಾನುವಾರ ಅನಾವರಣಗೊಳಿತು. ಭಾರತ ತಂಡದ ಹೊಸ ಜೆರ್ಸಿ ಸಂಪೂರ್ಣವಾಗಿ ಆಕಾಶ ನೀಲಿಯಿಂದ ಕೂಡಿದ್ದು, ತೋಳಿನ ಭಾಗದಲ್ಲಿ ಮಾತ್ರ ಗಾಢ ನೀಲಿಯಲ್ಲಿದೆ. ಜೆರ್ಸಿ ಪ್ರಾಯೋಜಕತ್ವ ಪಡೆದಿರುವ ಎಂಪಿಎಲ್ ಜೆರ್ಸಿಯ ಬಲಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಕಾಣಬಹುದು.
ಹಳೆಯದಕ್ಕಿಂತ ಭಿನ್ನ ಹೊಸ ಜರ್ಸಿ: ಟೀಂ ಇಂಡಿಯಾದ ಹಳೆ ಜರ್ಸಿಗೂ ಹೊಸ ಜರ್ಸಿಗೂ ತುಂಬಾ ವ್ಯತ್ಯಾಸವಿದೆ. ಈ ಹಿಂದಿನ ಜರ್ಸಿ ಸಂಪೂರ್ಣವಾಗಿ ಗಾಢ ನೀಲಿಯಿಂದ ಕೂಡಿದ್ದರೆ, ಇದು ಆಕಾಶ ನೀಲಿಯಿಂದ ರೂಪಿಸಲಾಗಿದೆ. ತೋಳಿನ ಭಾಗವನ್ನು ಮಾತ್ರ ಗಾಢ ನೀಲಿಯಲ್ಲಿ ಉಳಿಸಿಕೊಳ್ಳಲಾಗಿದೆ.
ಹೊಸ ಜರ್ಸಿ ಬಿಡುಗಡೆ ಮಾಡಿರುವ ಬಿಸಿಸಿಐ, “ಇದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗಾಗಿ, ಎಂಪಿಎಲ್ ಹೊಸ ಜರ್ಸಿಯನ್ನು ಪ್ರಸ್ತುತಪಡಿಸುತ್ತಿದೆ" ಎಂದು ಬರೆದು ಟ್ವೀಟ್ ಮಾಡಿದೆ.
-
To every cricket fan out there, this one’s for you.
— BCCI (@BCCI) September 18, 2022 " class="align-text-top noRightClick twitterSection" data="
Presenting the all new T20 Jersey - One Blue Jersey by @mpl_sport. #HarFanKiJersey#TeamIndia #MPLSports #CricketFandom pic.twitter.com/3VVro2TgTT
">To every cricket fan out there, this one’s for you.
— BCCI (@BCCI) September 18, 2022
Presenting the all new T20 Jersey - One Blue Jersey by @mpl_sport. #HarFanKiJersey#TeamIndia #MPLSports #CricketFandom pic.twitter.com/3VVro2TgTTTo every cricket fan out there, this one’s for you.
— BCCI (@BCCI) September 18, 2022
Presenting the all new T20 Jersey - One Blue Jersey by @mpl_sport. #HarFanKiJersey#TeamIndia #MPLSports #CricketFandom pic.twitter.com/3VVro2TgTT
ಹೊಸ ಜರ್ಸಿಯ ಬಿಡುಗಡೆಯ ಚಿತ್ರದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ, ಸೂರ್ಯಕುಮಾರ್ ಯಾದವ್ ಇದ್ದರೆ, ಮಹಿಳಾ ತಂಡದ ಪರವಾಗಿ ನಾಯಕಿ ಹರ್ಮನ್ಪ್ರೀತ್ ಕೌರ್, ಶೆಫಾಲಿ ವರ್ಮಾ, ರೇಣುಕಾ ಸಿಂಗ್ ಇದ್ದಾರೆ.
ಲಕ್ಕಿ ಆಗುತ್ತಾ ಈ ಜರ್ಸಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ದೋನಿ ನೇತೃತ್ವದಲ್ಲಿ 2007 ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿದ್ದ ಭಾರತ ಅಂದಿನಿಂದ ಇಂದಿನವರೆಗೂ ಟ್ರೋಫಿ ಗೆದ್ದಿಲ್ಲ. 2014 ರಲ್ಲಿ ಫೈನಲ್ ತಲುಪಿದರೂ ಟ್ರೋಫಿ ಸಿಕ್ಕಿಲ್ಲ. ಈ ಬಾರಿ ಬದಲಾಗಿರುವ ಹೊಸ ಜರ್ಸಿ ಟೀಂ ಇಂಡಿಯಾಗೆ ಅದೃಷ್ಟ ಖುಲಾಯಿಸುವಂತೆ ಮಾಡುತ್ತದೆಯಾ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.
ಓದಿ: ವಿರಾಟ್ ಕೊಹ್ಲಿಯ ಸ್ಟೈಲಿಶ್ ಹೇರ್ಸ್ಟೈಲ್ಗೆ ಅಭಿಮಾನಿಗಳು ಫಿದಾ.. ನೀವೂ ನೋಡಿ