ನವದೆಹಲಿ: ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಬೇಸಿಗೆಯ ರಜೆಯನ್ನು ಕೀನ್ಯಾ, ಬ್ರಿಟನ್ನಲ್ಲಿ ಕಳೆಯುತ್ತಿದ್ದಾರೆ. ಕುಟುಂಬದೊಂದಿಗೆ ವಿದೇಶ ಪ್ರವಾಸ ಕೈಗೊಂಡಿರುವ ಸಚಿನ್ಗೆ ಲಂಡನ್‌ನಲ್ಲಿ ಅಚಾನಕ್ಕಾಗಿ ಇನ್ನೊಬ್ಬ ಕ್ರಿಕೆಟ್ ದೈತ್ಯ ಬ್ರಿಯಾನ್ ಲಾರಾ ಸಿಕ್ಕಿದ್ದು, ಇದರ ಚಿತ್ರವನ್ನು ಲಿಟಲ್ ಚಾಂಪಿಯನ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದು ಭಾರೀ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
-
Casually bumped into another keen golfer today! 😂😂 @BrianLara pic.twitter.com/uA38X0kIkj
— Sachin Tendulkar (@sachin_rt) June 28, 2023 " class="align-text-top noRightClick twitterSection" data="
">Casually bumped into another keen golfer today! 😂😂 @BrianLara pic.twitter.com/uA38X0kIkj
— Sachin Tendulkar (@sachin_rt) June 28, 2023Casually bumped into another keen golfer today! 😂😂 @BrianLara pic.twitter.com/uA38X0kIkj
— Sachin Tendulkar (@sachin_rt) June 28, 2023
ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿರುವ ಸಚಿನ್ ತೆಂಡೂಲ್ಕರ್ ಲಂಡನ್‌ನಲ್ಲಿ ಬೇಸಿಗೆ ರಜೆಗೆಂದು ಇತ್ತೀಚೆಗೆ ಕೀನ್ಯಾಗೆ ಭೇಟಿ ನೀಡಿದ್ದರು. ಇದಾದ ಬಳಿಕ ಲಂಡನ್ಗೆ ಬಂದಿದ್ದು, ಅಲ್ಲಿ ಗಾಲ್ಫ್ ಆಡುತ್ತಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಇದೆಲ್ಲದರ ಮಧ್ಯೆ ಒಂದು ವಿಶೇಷ ಚಿತ್ರ ಮಾತ್ರ ಅಭಿಮಾನಿಗಳ ಮನ ಗೆದ್ದಿದೆ. ಅದು ಇಬ್ಬರು ದಿಗ್ಗಜ ಕ್ರಿಕೆಟಿಗರಾದ ಸಚಿನ್ ಮತ್ತು ಲಾರಾರ ಚಿತ್ರ. ಲಂಡನ್ ಬೀದಿಯಲ್ಲಿ ಇಬ್ಬರೂ ನಡೆದು ಹೋಗುತ್ತಿರುವ ಚಿತ್ರ ಇದಾಗಿದ್ದು, ಅಭಿಮಾನಿಗಳನ್ನು ಮನ ಸೂರೆ ಮಾಡಿದೆ.
ಲಂಡನ್‌ನಲ್ಲಿ ಗಾಲ್ಫ್ ಸ್ನೇಹಿತ: ಲಂಡನ್‌ನ ಬೀದಿಯಲ್ಲಿ ಭೇಟಿಯಾದ ಆತ್ಮೀಯ ಸ್ನೇಹಿತ ಬ್ರಿಯಾನ್ ಲಾರಾ ಜೊತೆಗೆ ಸಚಿನ್ ತೆಂಡೂಲ್ಕರ್ ನಡೆದುಕೊಂಡೇ ಸುತ್ತಾಡಿದ್ದಾರೆ. ಬಳಿಕ ಇಬ್ಬರು ಗಾಲ್ಫ್ ಆಡಿದ್ದಾರೆ. ತಮ್ಮಿಬ್ಬರ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಸಚಿನ್, 'ಇದ್ದಕ್ಕಿದ್ದಂತೆ ಇನ್ನೊಬ್ಬ ಉತ್ಸಾಹಿ ಗಾಲ್ಫ್ ಆಟಗಾರನನ್ನು ಭೇಟಿಯಾದೆ' ಎಂದು ಶೀರ್ಷಿಕೆ ನೀಡಿದ್ದಾರೆ. ಗಾಲ್ಫ್ ಹುಚ್ಚು ಹಿಡಿದ ನಾವಿಬ್ಬರೂ ಮೈದಾನದಲ್ಲಿ ಆಟವಾಡಿದೆವು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; Ashes 2023: ಸತತ 100 ಟೆಸ್ಟ್ ಪಂದ್ಯ ಆಡಿದ ನಾಥನ್ ಲಿಯಾನ್; ಈ ಸಾಧನೆ ಮಾಡಿದ ಭಾರತೀಯ ಆಟಗಾರರು ಯಾರು ಗೊತ್ತೇ?
ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಗಾಲ್ಫ್ ಪ್ರೇಮಿಗಳಾಗಿದ್ದಾರೆ. ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ 24 ವರ್ಷ ಭಾರತವನ್ನು ಪ್ರತಿನಿಧಿಸಿದರೆ, ಬ್ರಿಯಾನ್ ಲಾರಾ ವೆಸ್ಟ್ ಇಂಡೀಸ್ಗಾಗಿ 17 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. ಈ ಇಬ್ಬರೂ ಶ್ರೇಷ್ಠ ಆಟಗಾರರು ತಂಡಗಳ ಪರವಾಗಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಕ್ರಿಕೆಟ್ ಹೊರತಾಗಿ, ಇಬ್ಬರೂ ಉತ್ತಮ ಸ್ನೇಹಿತರು. ಇತ್ತೀಚೆಗೆ, ಸಚಿನ್ ತೆಂಡೂಲ್ಕರ್, ದಕ್ಷಿಣ ಆಫ್ರಿಕಾದ ಗಾಲ್ಫ್ ಆಟಗಾರ ಗ್ಯಾರಿ ಪ್ಲೇಯರ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಜೊತೆಗೆ ಸಚಿನ್ ಕೂಡ ಗಾಲ್ಫ್ ಆಡುತ್ತಿರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದರು.
ಕೀನ್ಯಾದಲ್ಲಿ ಕುಟುಂಬದೊಂದಿಗೆ ಸಚಿನ್: ಇದಕ್ಕೂ ಮೊದಲು ಸಚಿನ್ ತೆಂಡುಲ್ಕರ್ ಕುಟುಂಬದೊಂದಿಗೆ ಕೀನ್ಯಾ ಪ್ರವಾಸ ಕೈಗೊಂಡಿದ್ದರು. ಮಾಜಿ ಕ್ರಿಕೆಟರ್ ಜೊತೆಗೆ ಪತ್ನಿ ಅಂಜಲಿ, ಮಗಳು ಸಾರಾ ಕೂಡ ಇದ್ದರು. ಕೀನ್ಯಾದ ಮಸಾಯಿ ಮಾರಾ ರಾಷ್ಟ್ರೀಯ ಮೀಸಲು ಅರಣ್ಯ ಪ್ರದೇಶದಲ್ಲಿ ಅವರು ಸಂಚರಿಸಿದ್ದಾರೆ. 'ಕುಟುಂಬದೊಂದಿಗೆ ಮನರಂಜನೆ, ಸೂರ್ಯನ ಕೆಳಗೆ ಮಸಾಯಿ ಮಾರಾ! ಎಂದು ಟ್ವೀಟ್ನಲ್ಲಿ ಫೋಟೋ ಹಂಚಿಕೊಂಡು ಶೀರ್ಷಿಕೆ ನೀಡಿದ್ದಾರೆ. ಈ ಚಿತ್ರಗಳಿಗೆ ಅಭಿಮಾನಿಗಳು ತರಹೇವಾರಿ ಕಮೆಂಟ್ ಮಾಡಿದ್ದಾರೆ. ಇದರೊಂದಿಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ: Shubman Gill: ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು, ವಿಮಾನ ನಿಲ್ದಾಣದಿಂದ ಹೊರಬರಲು ಪರದಾಡಿದ ಕ್ರಿಕೆಟರ್ ಶುಭಮನ್ ಗಿಲ್