ETV Bharat / sports

ಕೃನಾಲ್​ ಬೆನ್ನಲ್ಲೇ ಚಹಾಲ್​, ಗೌತಮ್​ಗೂ ವಕ್ಕರಿಸಿರುವ ಕೋವಿಡ್​... ಲಂಕಾದಲ್ಲಿಯೇ ಆಟಗಾರರ ಐಸೋಲೇಷನ್​ - ಯುಜ್ವೇಂದ್ರ ಚಹಲ್

ಕೋವಿಡ್ ದೃಢಪಟ್ಟಿರುವ ಹಿನ್ನೆಲೆ ಕೃನಾಲ್​​ ಪಾಂಡ್ಯಗೆ ಶ್ರೀಲಂಕಾದಲ್ಲೇ ಚಿಕಿತ್ಸೆ ಮುಂದುವರಿಯಲಿದೆ. ಟೀಂ ಇಂಡಿಯಾದ ಇತರ ಸದಸ್ಯರು ದೇಶಕ್ಕೆ ಮರಳಲಿದ್ದಾರೆ.

ಚಹಲ್​, ಗೌತಮ್
ಚಹಲ್​, ಗೌತಮ್
author img

By

Published : Jul 30, 2021, 9:10 AM IST

Updated : Jul 30, 2021, 2:28 PM IST

ಕೊಲಂಬೊ: ಆಲ್​ರೌಂಡರ್​​ ಕೃನಾಲ್​ಗೆ ಕೋವಿಡ್​ ದೃಢಪಟ್ಟು ಐಸೋಲೇಷನ್​ನಲ್ಲಿ ಇರುವ ಈ ಹೊತ್ತಲ್ಲೇ, ಮತ್ತಿಬ್ಬರು ಭಾರತೀಯ ಆಟಗಾರರಿಗೆ ಕೊರೊನಾ ತಗುಲಿದೆ. ಯುಜ್ವೇಂದ್ರ ಚಹಾಲ್ ಮತ್ತು ಕೆ.ಗೌತಮ್​ಗೆ ಸೋಂಕು ತಗುಲಿದ್ದು, ಶ್ರೀಲಂಕಾದಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆ.

ಕೃನಾಲ್​ ಪಾಂಡ್ಯಗೆ ಕೋವಿಡ್​ ದೃಢಪಟ್ಟು ಇಂದಿಗೆ ನಾಲ್ಕು ದಿನಗಳಾಗಿದ್ದು, ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಇಬ್ಬರೂ ಆಟಗಾರರು ಅಲ್ಲಿಯೇ ಉಳಿಯಲಿದ್ದಾರೆ.

ಆರು ಪಂದ್ಯಗಳ ವೈಟ್- ಬಾಲ್ ಸರಣಿ ಪೂರ್ಣಗೊಳಿಸಿದ ನಂತರ ಭಾರತೀಯ ಕ್ರಿಕೆಟ್ ತಂಡವು ಇಂದು ಭಾರತಕ್ಕೆ ಮರಳಲಿದೆ. ಆದರೆ, ಈ ಮೂವರು ಆಟಗಾರರು ಕೋವಿಡ್​ ನೆಗೆಟಿವ್​ ವರದಿ ಬರುವವರೆಗೆ ಶ್ರೀಲಂಕಾದಲ್ಲಿಯೇ ಉಳಿಯಲಿದ್ದಾರೆ.

ಇದನ್ನೂ ಓದಿ: 3000 ಮೀಟರ್‌ ಸ್ಟೀಪಲ್‌ಚೇಸ್​ ಫೈನಲ್​ನಿಂದ ಹೊರ ಬಿದ್ದರೂ ರಾಷ್ಟ್ರೀಯ ದಾಖಲೆ ಬರೆದ ಅವಿನಾಶ್​ ಸಾಬ್ಲೆ!

ಇಂಗ್ಲೆಂಡ್ ತಂಡದಲ್ಲಿರುವ ಇಬ್ಬರು ಆಟಗಾರರಾದ ಸೂರ್ಯಕುಮಾರ್​ ಯಾದವ್​ ಮತ್ತು ಪೃಥ್ವಿ ಶಾ ಕೊಲಂಬೊದಿಂದ ನೇರವಾಗಿ ಭಾರತಕ್ಕೆ ಹಿಂದಿರುಗುವ ಸಾಧ್ಯತೆಯಿದೆ.

Last Updated : Jul 30, 2021, 2:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.