ETV Bharat / sports

ದ.ಆಫ್ರಿಕಾ ವಿರುದ್ಧ ಜಯ... ನಾಯಕನಾಗಿ ಹಲವು ದಾಖಲೆಗಳಿಗೆ ಪಾತ್ರರಾದ ಕಿಂಗ್ ಕೊಹ್ಲಿ

author img

By

Published : Dec 30, 2021, 5:23 PM IST

ವಿರಾಟ್​ ಕೊಹ್ಲಿ ಭಾರತ ತಂಡವನ್ನು 67 ಟೆಸ್ಟ್​ ಪಂದ್ಯಗಳಲ್ಲಿ ಮುನ್ನಡಿಸಿದ್ದು, 40 ಜಯ, 16 ಸೋಲು ಮತ್ತು 11 ಡ್ರಾ ಸಾಧಿಸಿದ್ದಾರೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಕೊಹ್ಲಿ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ 40 ಪಂದ್ಯಗಳನ್ನು ಗೆದ್ದ 4ನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗರಿಷ್ಠ ಟೆಸ್ಟ್​ ಪಂದ್ಯಗಳನ್ನು ಗೆದ್ದ ನಾಯಕ ಪಟ್ಟಿ ಇಂತಿದೆ.

Indian captain Virat kohli records
ವಿರಾಟ್ ಕೊಹ್ಲಿ ದಾಖಲೆ

ಸೆಂಚುರಿಯನ್​: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಬಾಕ್ಸಿಂಗ್ ಟೆಸ್ಟ್​ನಲ್ಲಿ ಭಾರತ ತಂಡ 113ರನ್​ಗಳ ಭರ್ಜರಿ ಜಯ ಸಾಧಿಸಿ 1-0ಯಲ್ಲಿ ಸರಣಿ ಮುನ್ನಡ ಸಾಧಿಸಿದೆ. ಈಗಾಗಲೇ ಭಾರತದ ಸಾರ್ವಕಾಲಿಕ ಅತ್ಯುತ್ತಮ ಟೆಸ್ಟ್​ ತಂಡದ ನಾಯಕನಾಗಿ ವಿರಾಟ್​ ಕೊಹ್ಲಿ ಈ ಪಂದ್ಯದ ಗೆಲುವಿನೊಂದಿಗೆ ಮತ್ತಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

40 ಟೆಸ್ಟ್​ ಪಂದ್ಯಗಳನ್ನು ಗೆದ್ದ ವಿಶ್ವದ ನಾಲ್ಕನೇ ನಾಯಕ

ವಿರಾಟ್​ ಕೊಹ್ಲಿ ಭಾರತ ತಂಡವನ್ನು 67 ಟೆಸ್ಟ್​ ಪಂದ್ಯಗಳಲ್ಲಿ ಮುನ್ನಡಿಸಿದ್ದು, 40 ಜಯ, 16 ಸೋಲು ಮತ್ತು 11 ಡ್ರಾ ಸಾಧಿಸಿದ್ದಾರೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಕೊಹ್ಲಿ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ 40 ಪಂದ್ಯಗಳನ್ನು ಗೆದ್ದ 4ನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಗರಿಷ್ಠ ಟೆಸ್ಟ್​ ಪಂದ್ಯಗಳನ್ನು ಗೆದ್ದ ನಾಯಕರ ಪಟ್ಟಿ ಇಂತಿದೆ.

  • ಗ್ರೇಮ್​ ಸ್ಮಿತ್​(ದಕ್ಷಿಣ ಆಫ್ರಿಕಾ)- 53(109 ಟೆಸ್ಟ್​)
  • ರಿಕಿ ಪಾಂಟಿಂಗ್​(ಆಸ್ಟ್ರೇಲಿಯಾ) - 48 (93)
  • ಸ್ಟೀವ್ ವಾ(ಆಸ್ಟ್ರೇಲಿಯಾ) - 41(57)
  • ವಿರಾಟ್​ ಕೊಹ್ಲಿ (ಭಾರತ) - 40 (67)

ದಕ್ಷಿಣ ಆಫ್ರಿಕಾದಲ್ಲಿ 2 ಪಂದ್ಯ ಗೆದ್ದ ಭಾರತೀಯ ನಾಯಕ

ಭಾರತದ ಪರ ನಾಯಕನಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಅವರದ್ದೇ ನೆಲದಲ್ಲಿ 2 ಬಾರಿ ಸೋಲುಣಿಸಿದ ಮೊದಲ ಭಾರತೀಯ ನಾಯಕ ಎಂಬ ಶ್ರೇಯಕ್ಕೂ ವಿರಾಟ್​​ ಪಾತ್ರರಾದರು. 2017-18ರ ಪ್ರವಾಸದಲ್ಲಿ ಭಾರತ ತಂಡ ಕೊಹ್ಲಿ ನೇತೃತ್ವದಲ್ಲಿ 63 ರನ್​ಗಳ ಜಯ ಸಾಧಿಸಿತ್ತು.

ಕೊಹ್ಲಿ ಹೊರತುಪಡಿಸಿದರೆ ಎಂಎಸ್ ಧೋನಿ ನಾಯಕತ್ವದಲ್ಲಿ 2010-11ರಲ್ಲಿ ಮತ್ತು ಪ್ರಸ್ತುತ ಭಾರತ ತಂಡದ ಕೋಚ್​ ಆಗಿರುವ ರಾಹುಲ್​ ದ್ರಾವಿಡ್​ ನೇತೃತ್ವದಲ್ಲಿ 2006 - 07ರಲ್ಲಿ ಭಾರತ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಜಯ ದಾಖಲಿಸಿತ್ತು.

ಎರಡು ಬಾಕ್ಸಿಂಗ್ ಡೇ ಟೆಸ್ಟ್​ ಜಯ

ವಿರಾಟ್​ ಕೊಹ್ಲಿ 2 ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯವನ್ನು ಗೆದ್ದ ಭಾರತ ಮೊದಲ ನಾಯಕ ಎನಿಸಿಕೊಂಡರು. ಈ ಪಂದ್ಯಕ್ಕೂ ಮುನ್ನ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್​ನಲ್ಲಿ 137 ರನ್​ಗಳ ಜಯ ಸಾಧಿಸಿದ್ದರು.

ಇದನ್ನೂ ಓದಿ:ಸೆಂಚುರಿಯನ್ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 113 ರನ್​ಗಳ ಜಯ, 1-0ಯಲ್ಲಿ ಸರಣಿ ಮುನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.