ನವದೆಹಲಿ: ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಭಾರತದ ಯುವ ಬ್ಯಾಟರ್ ಶುಭಮನ್ ಗಿಲ್ ಅಗ್ರ ಸ್ಥಾನಕ್ಕೇರಿದ್ದಾರೆ. ನಂಬರ್ 1 ಸ್ಥಾನಕ್ಕೆ ಏರಿದ ನಾಲ್ಕನೇ ಭಾರತೀಯ ಬ್ಯಾಟರ್ ಆಗಿದ್ದಾರೆ. ಸಚಿನ್ ತೆಂಡಲ್ಕೂರ್, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಂತರ ಗಿಲ್ ಈ ಸಾಧನೆಗೆ ಪಾತ್ರರಾಗಿದ್ದಾರೆ. ಮತ್ತೊಂದೆಡೆ, ಬೌಲಿಂಗ್ನಲ್ಲಿ ಮೊಹಮ್ಮದ್ ಸಿರಾಜ್ ಕೂಡ ಮತ್ತೆ ನಂಬರ್ 1 ಸ್ಥಾನಕ್ಕೆ ಏರಿದ್ದಾರೆ.
-
A big day for India's #CWC23 stars with two new No.1 players crowned in the latest @MRFWorldwide ICC Men's ODI Player Rankings 😲
— ICC (@ICC) November 8, 2023 " class="align-text-top noRightClick twitterSection" data="
Details 👇https://t.co/nRyTqAP48u
">A big day for India's #CWC23 stars with two new No.1 players crowned in the latest @MRFWorldwide ICC Men's ODI Player Rankings 😲
— ICC (@ICC) November 8, 2023
Details 👇https://t.co/nRyTqAP48uA big day for India's #CWC23 stars with two new No.1 players crowned in the latest @MRFWorldwide ICC Men's ODI Player Rankings 😲
— ICC (@ICC) November 8, 2023
Details 👇https://t.co/nRyTqAP48u
ನಡೆಯುತ್ತಿರುವ ಏಕದಿನ ವಿಶ್ವಕಪ್ ಉತ್ತಮ ಪ್ರದರ್ಶನ ನೀಡುತ್ತಿರುವ ಆರಂಭಿಕ ಆಟಗಾರ ಶುಭಮನ್ ಗಿಲ್ ಪಾಕಿಸ್ತಾನಿ ನಾಯಕನನ್ನು ಕಳೆಕ್ಕೆ ತಳ್ಳಿ ಅಗ್ರಪಟ್ಟವನ್ನು ಅಲಂಕರಿಸಿದ್ದಾರೆ. 830 ರೇಟಿಂಗ್ ಪಡೆದಿರುವ ಗಿಲ್ ನಂ.1 ಆದರೆ 824 ರೇಟಿಂಗ್ನಿಂದ ಬಾಬರ್ ಅಜಮ್ ಕುಸಿತ ಅನುಭವಿಸಿದರು. 2023ರ ವಿಶ್ವಕಪ್ನಲ್ಲಿ ಬಾಬರ್ ಬ್ಯಾಟ್ನಿಂದ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಇದು ಅವರ ರೇಟಿಂಗ್ಗೆ ಹೊಡೆತವನ್ನು ಕೊಟ್ಟಿತು. ಟೀಮ್ ಇಂಡಿಯಾದಲ್ಲಿ ಶುಭಮನ್ ಗಿಲ್ ಅವರನ್ನು ಪ್ರಿನ್ಸ್ ಎಂದೇ ಕರೆಯಲಾಗುತ್ತದೆ. ವಿರಾಟ್ ಕಿಂಗ್ ಆದರೆ, ಗಿಲ್ ಪ್ರಿನ್ಸ್. ಈಗ ವಿರಾಟ್ ನಂತರ ಆ ಸ್ಥಾನ್ಕಕೆ ಏರಿ ತಮಗೆ ಸಿಕ್ಕ ಬಿರುದನ್ನು ಸಾಬೀತು ಮಾಡಿದ್ದಾರೆ ಶುಭಮನ್.
-
Siraj is No.1.
— Mufaddal Vohra (@mufaddal_vohra) November 8, 2023 " class="align-text-top noRightClick twitterSection" data="
Kuldeep is No.4.
Bumrah is No.8.
Shami is No.10.
- 4 Indian bowlers in the Top 10 of ODI Ranking, we're blessed to witness their dominance...!!! 🇮🇳 pic.twitter.com/uAkSei98k1
">Siraj is No.1.
— Mufaddal Vohra (@mufaddal_vohra) November 8, 2023
Kuldeep is No.4.
Bumrah is No.8.
Shami is No.10.
- 4 Indian bowlers in the Top 10 of ODI Ranking, we're blessed to witness their dominance...!!! 🇮🇳 pic.twitter.com/uAkSei98k1Siraj is No.1.
— Mufaddal Vohra (@mufaddal_vohra) November 8, 2023
Kuldeep is No.4.
Bumrah is No.8.
Shami is No.10.
- 4 Indian bowlers in the Top 10 of ODI Ranking, we're blessed to witness their dominance...!!! 🇮🇳 pic.twitter.com/uAkSei98k1
ಗಿಲ್ ಜ್ವರದ ಕಾರಣ ಮೊದಲೆರಡು ವಿಶ್ವಕಪ್ ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದರು. ನಂತರ ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಎಡವಿದರು. ಬಾಂಗ್ಲಾದೇಶದ ವಿರುದ್ಧ 53, ಶ್ರೀಲಂಕಾ ವಿರುದ್ಧ 92, ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ 23 ರನ್ ಗಳಿಸಿದ್ದು, ಅವರ ಶ್ರೇಯಾಂಕದ ಏರಿಕೆಗೆ ಕಾರಣವಾಗಿದೆ. ವಿಶ್ವಕಪ್ನಲ್ಲಿ ಒಟ್ಟಾರೆ ಅವರೀಗ 219 ರನ್ ಗಳಿಸಿದ್ದಾರೆ.
-
No.1 team, No.1 players. 🇮🇳 pic.twitter.com/t5bWlCjRZQ
— Mufaddal Vohra (@mufaddal_vohra) November 8, 2023 " class="align-text-top noRightClick twitterSection" data="
">No.1 team, No.1 players. 🇮🇳 pic.twitter.com/t5bWlCjRZQ
— Mufaddal Vohra (@mufaddal_vohra) November 8, 2023No.1 team, No.1 players. 🇮🇳 pic.twitter.com/t5bWlCjRZQ
— Mufaddal Vohra (@mufaddal_vohra) November 8, 2023
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಪರ ಅನುಭವಿಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರಿಂದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಶ್ರೇಯಾಂಕವೂ ಏರಿಕೆ ಕಂಡಿದೆ. ವಿರಾಟ್ 4ನೇ ಸ್ಥಾನಕ್ಕೆ, ರೋಹಿತ್ 6ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ನಂ.1 ಸ್ಥಾನ ಸ್ಪರ್ಧೆಯಲ್ಲಿ ಈ ಅನುಭವಿಗಳು ಇದ್ದಾರೆ. ವಿರಾಟ್ ಗಿಲ್ ಅವರಿಗಿಂತ 60 ರೇಟಿಂಗ್ ಹಿಂದಿದ್ದಾರೆ ಅಷ್ಟೇ. ಉಳಿದಂತೆ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ 18ನೇ ಸ್ಥಾನ ಅಲಂಕರಿಸಿದರೆ, ಕೆ ಎಲ್ ರಾಹುಲ್ 26ನೇ ಶ್ರೇಯಾಂಕಕ್ಕೆ ಏರಿಕೆ ಕಂಡಿದ್ದಾರೆ.
-
ICC poster for the No.1 ODI batter and No.1 ODI bowler.
— Mufaddal Vohra (@mufaddal_vohra) November 8, 2023 " class="align-text-top noRightClick twitterSection" data="
- The Prince and Miyan dominance. pic.twitter.com/QWWSOFGY9N
">ICC poster for the No.1 ODI batter and No.1 ODI bowler.
— Mufaddal Vohra (@mufaddal_vohra) November 8, 2023
- The Prince and Miyan dominance. pic.twitter.com/QWWSOFGY9NICC poster for the No.1 ODI batter and No.1 ODI bowler.
— Mufaddal Vohra (@mufaddal_vohra) November 8, 2023
- The Prince and Miyan dominance. pic.twitter.com/QWWSOFGY9N
ಸಿರಾಜ್ಗೆ ಮತ್ತೆ ಅಗ್ರ ಪಟ್ಟ: ಏಷ್ಯಾಕಪ್ ಫೈನಲ್ನಲ್ಲಿ ಶ್ರೀಲಂಕಾವನ್ನು 50 ರನ್ಗೆ ಕಟ್ಟಿಹಾಕಿದ ಮೊಹಮ್ಮದ್ ಸಿರಾಜ್ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದರು. ನಂತರ ಆಸ್ಟ್ರೇಲಿಯಾ, ಪಾಕ್ ಬೌಲರ್ಗಳು ಏರಿಕೆ ಕಂಡಿದ್ದರು. ವಿಶ್ವಕಪ್ನ ಲೀಗ್ ಹಂತದ ಪಂದ್ಯದಲ್ಲಿ ಲಂಕಾ ವಿರುದ್ಧ ಮತ್ತೆ ವಿದ್ವಂಸಕ ಬೌಲಿಂಗ್ ಮಾಡಿದ ಸಿರಾಜ್ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದಾರೆ. ಇನ್ನು ಕುಲ್ದೀಪ್ ಯಾದವ್ (4), ಜಸ್ಪ್ರೀತ್ ಬುಮ್ರಾ (8), ಮೊಹಮ್ಮದ್ ಶಮಿ (10) ಪಟ್ಟಿಯಲ್ಲಿ ಟಾಪ್ 10ರ ಒಳಗೆ ಇದ್ದಾರೆ. ಜಡೇಜಾ ಬೌಲಿಂಗ್ನಲ್ಲಿ 19ನೇ ಸ್ಥಾನದಲ್ಲಿದ್ದರೆ, ಆಲ್ರೌಂಡರ್ ವಿಭಾಗದಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಬದ್ಧ ವೈರಿಗಳಿಗೆ ಮತ್ತೆ ಅವಕಾಶ?: ನಡೆಯುತ್ತಾ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಸೆಮಿಫೈನಲ್?