ETV Bharat / sports

India vs West Indies Test : ಅಶ್ವಿನ್ ಬೌಲಿಂಗ್​​ ದಾಳಿಗೆ ಶರಣಾದ ವೆಸ್ಟ್​ ಇಂಡೀಸ್​.. ಇನ್ನಿಂಗ್ಸ್​ ಬಾಕಿ ಇರುವಾಗಲೇ ಭಾರತಕ್ಕೆ ಗೆಲುವು

author img

By

Published : Jul 15, 2023, 8:12 AM IST

ವೆಸ್ಟ್​ ಇಂಡೀಸ್​ ವಿರುದ್ಧದ ಎರಡು ಟೆಸ್ಟ್​ ಸರಣಿಯ ಮೊದಲ ​ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಮೊದಲ ಟೆಸ್ಟ್​ ಗೆದ್ದ ಭಾರತ
ಮೊದಲ ಟೆಸ್ಟ್​ ಗೆದ್ದ ಭಾರತ

ಡೊಮಿನಿಕಾ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 141 ರನ್‌ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 150 ರನ್​ಗಳಿಗೆ ಸರ್ವಪತನ ಕಂಡಿತ್ತು. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ಗೆ 421 ರನ್​ ಗಳಿಸಿ ಡಿಕ್ಲೇರ್ ನೀಡುವ ಮೂಲಕ 271 ರನ್‌ಗಳ ಮುನ್ನಡೆ ಸಾಧಿಸಿತು.

ಎರಡನೇ ಇನ್ನಿಂಗ್ಸ್​ನಲ್ಲೂ ಬೌಲಿಂಗ್​ ದಾಳಿ ಮುಂದುವರೆಸಿದ ಅಶ್ವಿನ್​ ವಿಂಡೀಸ್​ ಬ್ಯಾಟರ್​ಗಳನ್ನು ಕಾಡಿದರು. ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲು ಬಿಡದೆ ಪೆವಿಲಿಯನ್​ಗಟ್ಟಿದರು. ಪ್ರಥಮ ಇನ್ನಿಂಗ್ಸ್​ನಂತೆ ​ಎರಡನೇ ಇನ್ನಿಂಗ್ಸ್‌ನಲ್ಲೂ ಕಳಪೆ ಫಾರ್ಮ್ ಮುಂದುವರೆಸಿದ ವಿಂಡೀಸ್​​​ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ನಿರಾಸೆ ಮೂಡಿಸಿ,​ ಕೇವಲ 130 ರನ್‌ಗಳಿಗೆ ಆಲೌಟ್​ ಆಗುವ ಮೂಲಕ ತಂಡ ಹೀನಾಯ ಸೋಲನುಭವಿಸಿತು. ಯಾವೊಬ್ಬ ಬ್ಯಾಟರ್​ 50ರ ಗಡಿ ದಾಟಲು ಸಾಧ್ಯವಾಗಲಿಲ್ಲ.

ಭಾರತ ಪರ ಯಶಸ್ವಿ ಜೈಸ್ವಾಲ್ (171) ಮತ್ತು ವಿರಾಟ್ ಕೊಹ್ಲಿ (76) ರನ್‌ಗಳ ನೆರವಿನಿಂದ ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನ ಮೂರನೇ ದಿನದಂದು ಐದು ವಿಕೆಟ್‌ ನಷ್ಟಕ್ಕೆ ಭಾರತ 421 ರನ್ ಗಳಿಸಿತು. ಜೈಸ್ವಾಲ್ 387 ಎಸೆತಗಳಲ್ಲಿ 171 ರನ್ ಗಳಿಸಿದರೆ, ಕೊಹ್ಲಿ 182 ಎಸೆತಗಳಲ್ಲಿ 76 ರನ್​ಗಳಿಸಿ ಔಟಾದರು. ರವೀಂದ್ರ ಜಡೇಜಾ 37 ರನ್​ಗಳಿಸಿ ಅಜೇಯರಾಗಿ ಉಳಿದರು.

ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಬಾರಿಸಿ ದ್ವಿಶತಕದ ಗಡಿಯತ್ತ ಸಾಗುತ್ತಿದ್ದ ಯಶಸ್ವಿ ಅವರ ಆಟಕ್ಕೆ ಅಲ್ಜಾರಿ ಜೋಸೆಫ್ ಬ್ರೇಕ್​ ಹಾಕಿದರು. ಬಳಿಕ ಬಂದ ಅಜಿಂಕ್ಯ ರಹಾನೆ (6) ಹೆಚ್ಚುಹೊತ್ತು ನಿಲ್ಲದೆ ಕೆಮರ್ ರೋಚ್ ಅವರು ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಸೇರಿದರು. ಆರು ರನ್​ಗಳ ಅಂತರದಲ್ಲಿ ಸತತ ಎರಡು ವಿಕೆಟ್ ಕಬಳಿಸಿದ ವಿಂಡೀಸ್​ ಬೌಲರ್​ಗಳ ಮನೋಬಲ ಹೆಚ್ಚಿತ್ತು. ಆದರೆ ವಿರಾಟ್ ಭೋಜನ ವಿರಾಮದವರೆಗೂ ರವೀಂದ್ರ ಜಡೇಜಾ (ಔಟಾಗದೆ 37) ಜತೆಗೂಡಿ ರಕ್ಷಣಾತ್ಮಕ ಆಟವನ್ನಾಡಿದರು.

ಊಟದ ಬಳಿಕ ಕ್ರೀಸ್​ಗೆ ಬಂದ ವಿರಾಟ್ ಕಾರ್ನ್​ವಲ್​ ಎಸೆತದಲ್ಲಿ ಅಲಿಕ್ ಅಥಾನಾಜ್ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಒಪ್ಪಿಸಿದರು. ಕೊಹ್ಲಿ ಔಟಾದ ಅರ್ಧ ಗಂಟೆಯ ನಂತರ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್​ ಘೋಷಿಸಿದರು. ಪಂದ್ಯದಲ್ಲಿ ಅಶ್ವಿನ್​ 7 ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್​ಗೆ ಟೀಂ ಇಂಡಿಯಾ ಪ್ರಕಟ.. ರುತುರಾಜ್ ಗಾಯಕ್ವಾಡ್​ಗೆ ನಾಯಕತ್ವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.